Kannada NewsKarnataka NewsLatest

ಬೆಳಗಾವಿಯಲ್ಲಿ ಗುಡುಗು, ಮಿಂಚಿನೊಂದಿಗೆ ಅಬ್ಬರಿಸಿದ ಮಳೆ

ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ: ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಡುಗು, ಮಿಂಚಿನಿಂದ ಕೂಡಿದ ಭಾರೀ ಮಳೆ ಸೋಮವಾರ ಮಧ್ಯಾಹ್ನ ಅಬ್ಬರಿಸಿದೆ.

ಒಂದು ಗಂಟೆಯಷ್ಟು ಕಾಲ ವಿಪರೀತವಾಗಿ ಸುರಿದ ಮಳೆಗೆ ಅಲ್ಲಲ್ಲಿ ರಸ್ತೆಗಳಲ್ಲಿ ನೀರು ಹರಿದು ಕೆಲ ಹೊತ್ತಿನವರೆಗೆ ಸಂಚಾರ ಅಸ್ತವ್ಯಸ್ತಗೊಂಡಿತು.

ಬೆಳಿಗ್ಗೆಯಿಂದ ವಾತಾವರಣ ಸಾಮಾನ್ಯವಾಗಿದ್ದ ಕಾರಣ ಜನ ಮಳೆಯಬ್ಬರ ಮುಗಿಯಿತೆಂದೇ ಭಾವಿಸಿಕೊಂಡಿದ್ದ ವೇಳೆ ಅನಿರೀಕ್ಷಿತವಾಗಿ ದಟ್ಟ ಮೋಡ ಆವರಿಸಿ ಮಳೆ ಸುರಿಯಿತು. ಇದರಿಂದಾಗಿ ಕೊಡೆ, ರೇನ್ ಕೋಟ್ ಬಿಟ್ಟು ಹೊರಟಿದ್ದವರೆಲ್ಲ ಅಂಗಡಿ ಮುಂಗಟ್ಟುಗಳ ಛಾವಣಿಯಡಿ ಆಶ್ರಯ ಪಡೆಯುವಂತಾದರೆ ಬೀದಿ ವ್ಯಾಪಾರಿಗಳು ಹೂ, ಹಣ್ಣು, ತರಕಾರಿ ಇತ್ಯಾದಿಗಳನ್ನು ರಕ್ಷಿಸಿಕೊಳ್ಳಲು ಹೆಣಗಾಡಿದರು.

ಗಣೇಶ ಹಬ್ಬದ ಸಂಭ್ರಮದಲ್ಲಿರುವ ಬೆಳಗಾವಿಯಲ್ಲಿ ಒಮ್ಮಿಂದೊಮ್ಮೆ ಮಳೆ ಸುರಿದಿದ್ದರಿಂದ ಕೆಲ ಕಾಲ ಗಣೇಶ ಪೆಂಡಾಲ್ ಗಳಲ್ಲಿ ಕೂಡ ಗಲಿಬಿಲಿ ಉಂಟಾಯಿತು.

ಮುರುಘಾಶ್ರೀಗಳ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ; 2ನೇ ಆರೋಪಿ ಕಸ್ಟಡಿಗೆ ನೀಡುವಂತೆ ಪೊಲೀಸರ ಮನವಿ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button