Kannada NewsLatest

ಮುರುಘಾಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣ; ನ್ಯಾಯಾಂಗ ತನಿಖೆಗೆ ಒಪ್ಪಿಸಲು ಆಗ್ರಹ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮುರುಘಾಶ್ರೀಗಳ ವಿರುದ್ಧ ಕೇಳಿಬಂದಿರುವ ‌ಲೈಂಗಿಕ ದೌರ್ಜನ್ಯ ಪ್ರಕರಣವನ್ನು ನ್ಯಾಯಾಂಗ ತನಿಖೆ‌ಗೆ ಒಪ್ಪಿಸಬೇಕು ಎಂದು ನ್ಯಾಟೆ ಸಂಸ್ಥೆ ಒತ್ತಾಯಿಸಿದೆ.

ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನ್ಯಾಟೆ ಸಂಸ್ಥೆಯ ಸದಸ್ಯ, ಅಥಣಿ‌ ವಿಮೋಚನಾ ಸಂಘದ ಅಧ್ಯಕ್ಷ ಬಿ.ಎಲ್.ಪಾಟೀಲ, ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ಕಿರುಕಳ ಖಂಡನೀಯ. ಪೊಲೀಸ್ ತನಿಖೆಯಿಂದ ಅಪ್ರಾಪ್ತ ಬಾಲಕಿಯರಿಗೆ ನ್ಯಾಯ ಸಿಗುವುದು ಅನುಮಾನ. ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಶರಣಪರಂಪರೆಯ‌ ದಿಕ್ಕು ದಸೆ ತೋರಿಸುವವರಿಂದ ಇಂಥ ಘಟನೆ ನಡೆದಿರುವುದು ಅತ್ಯಂತ ಖಂಡನೀಯ. ಇದನ್ನು ಸಮಗ್ರ ತನಿಖೆ‌ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸವಾಗಬೇಕು. ಮಠದಲ್ಲಿನ ಇನ್ನಷ್ಟು ಬಾಲಕಿಯರು ದೌರ್ಜನ್ಯಕ್ಕೆ ಒಳಗಾಗಿರುವ ಶಂಕೆ ಇದ್ದು, ತಜ್ಞ ಆಪ್ತ ಸಮಾಲೋಚಕರಿಂದ ಅವರ ಕೌನ್ಸಿಲಿಂಗ್ ಮಾಡಬೇಕೆಂದು ಒತ್ತಾಯಿಸಿದರು.

ಅಪ್ರಾಪ್ತ ಬಾಲಕಿಯರ ಪರ ಧ್ವನಿ‌ ಎತ್ತಿದ ಮೈಸೂರಿನ ಒಡನಾಡಿನ ಸಂಸ್ಥೆಯ ಮೇಲೆ ದಬ್ಬಾಳಿಕೆ‌ ಮಾಡಿ‌ ಜೀವ ಬೇದರಿಕೆ ಹಾಕುತ್ತಿದ್ದಾರೆ. ಒಡನಾಡಿ‌ ಸಂಸ್ಥೆಗೆ ರಕ್ಷಣೆ ನೀಡಿ ಜೀವ ಬೇದರಿಕೆ ಹಾಕುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.

ಚಿತ್ರದುರ್ಗದ ಮುರುಘಾ ಮಠದಲ್ಲಿ ಇಂಥ ಘನಘೋರ ಕೃತ್ಯ ನಡೆದಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಸಂತ್ರಸ್ತ ಮಕ್ಕಳ ಪರವಾಗಿ ಧ್ವನಿ ಎತ್ತುವ ಕೆಲಸವಾಗಬೇಕೆಂದು ಸ್ಪಂದನಾ ಅಧ್ಯಕ್ಷ ಸುಶೀಲಾ ಒತ್ತಾಯಿಸಿದರು.

ಬೇಟಿ ಬಚಾವೋ ಬೇಟಿ ಪಡಾವೋ ಎನ್ನುವ ಸರಕಾರ ಹೆಣ್ಣು ಮಕ್ಕಳ ರಕ್ಷಣೆ ಮಾಡುವ ಕೆಲಸ ಮಾಡಬೇಕು. ಒಬ್ಬ ಶರಣ ತಪ್ಪು ಮಾಡಿದ್ದಾನೆ ಎಂದರೆ ಆ ಸಂಸ್ಥೆಗೆ ಧಕ್ಕೆಯಾಗಬಾರದು. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಮಕ್ಕಳಿಗೆ ನ್ಯಾಯಸಿಗಲಿ ಎಂದು ಒತ್ತಾಯಿಸಿದರು.
ಪಿಎಸ್ ಐ ಅಕ್ರಮ; ಶಾಸಕರ ಆಡಿಯೋ ವೈರಲ್; ಧ್ವನಿ ನನ್ನದೇ ಆದರೆ…ಬಸವರಾಜ್ ದಡೇಸಗೂರು ಹೇಳಿದ್ದೇನು?

https://pragati.taskdun.com/latest/psi-requitment-illegal-casemla-basavaraj-dadesuguraudio-viral/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button