Latest

ಅಕ್ರಮ ಸಂಬಂಧ; ಪತ್ನಿಯ ಗೆಳೆಯನನ್ನು ಬಡಿದು ಕೊಂದ ಪತಿ

ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಯುವಕನನ್ನು ಪತಿ ಹತ್ಯೆ ಮಾಡಿರುವ ಘಟನೆ ಯಾದಗಿರಿ ತಾಲೂಕಿನ ಕಡೇಚೂರ್ ಬಳಿ ನಡೆದಿದೆ.

25 ವರ್ಷದ ಸಿದ್ದಪ್ಪ ಕೊಲೆಯಾದ ಯುವಕ. ನಾಗರಾಜ್ ಕೊಲೆ ಮಾಡಿದ ಆರೋಪಿ. ಶಹಾಪುರ ತಾಲೂಕಿನ ಬೋಳಾರಿ ನಿವಾಸಿಯಾಗಿರುವ ಸಿದ್ದಪ್ಪ ಹಾಗೂ ನಾಗರಾಜ್ ಪತ್ನಿ ಬೆಂಗಳೂರಿನಲ್ಲಿ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ಪರಿಚಯವಾಗಿದ್ದು ಅಕ್ರಮ ಸಂಬಂಧದವರೆಗೂ ಮುಂದುವರೆದಿತ್ತು.

ಕಳೆದ ಎರಡು ವರ್ಷಗಳಿಂದ ಸಿದ್ದಪ್ಪ ಹಾಗೂ ನಾಗರಾಜ್ ಪತ್ನಿ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ನಾಗರಾಜ್ ಗೆ ವಿಷಯಗೊತ್ತಾಗುತ್ತಿದ್ದಂತೆ ಸಿದ್ದಪ್ಪನನ್ನು ಹೊಡೆದು ಕೊಂದಿದ್ದಾನೆ. ಸೈದಾಪುರ ಠಾಣೆಯಲ್ಲಿ ಪ್ರಕರನ ದಾಖಲಾಗಿದೆ.

ಮುರುಘಾಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣ; ನ್ಯಾಯಾಂಗ ತನಿಖೆಗೆ ಒಪ್ಪಿಸಲು ಆಗ್ರಹ

Related Articles

Back to top button