ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಳೆಯ ಆರ್ಭಟಕ್ಕೆ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ಮನೆಗೋಡೆ ಕುಸಿದು ಮೇಕೆ(ಆಡು) ಮಣ್ಣಿನಲ್ಲಿ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ.
ಸುರೇಬಾನ ಗ್ರಾಮದ ನಿವಾಸಿ ಕಮಲವ್ವ ಆನಂದ ಕುಂಬಾರ ಇವರ ಮನೆಗೋಡೆ ಕುಸಿದ ಪರಿಣಾಮ ಈ ದುರ್ಘಟನೆ ಸಂಬಂಧಿಸಿದೆ.
ಘಟನಾ ಸ್ಥಳಕ್ಕೆ ಗ್ರಾಪಂನ ಪಿಡಿಓ ಈರನಗೌಡ ಪಾಟೀಲ, ಗ್ರಾಮಲೆಕ್ಕಾಧಿಕಾರಿ ಬಿ.ಯು.ಬಾಗೇವಾಡಿ, ಪಶು ವೈದ್ಯಾಧಿಕಾರಿ ಡಾ. ಶಿವಯೋಗಿ ರೋಣದ, ಸುರೇಬಾನ ಉಪ ಠಾಣೆಯ ಹವಾಲ್ದಾರ ವ್ಹಿ.ಎಂ.ಹದ್ಲಿ ಪರಿಶೀಲನೆ ನಡೆಸಿದ್ದಾರೆ.
ಮನಿಹಾಳ ಗ್ರಾಪಂನ ವ್ಯಾಪ್ತಿಯಲ್ಲಿ 15, ಸುರೇಬಾನ ಗ್ರಾಪಂನ ವ್ಯಾಪ್ತಿಯಲ್ಲಿ 5 ಮನೆಗಳು ಸೋಮವಾರ ತಡರಾತ್ರಿ ಸಂಭವಿಸಿದ ಮಳೆಗೆ ಹಾನಿಯಾಗಿವೆ ಎಂದು ತಿಳಿದು ಬಂದಿದೆ.
ಸುರೇಬಾನ ಗ್ರಾಪಂನ ಪಿಡಿಓ ಈರನಗೌಡ ಪಾಟೀಲ ಮಾತನಾಡಿ, ನಮಗೆ ಈಗಷ್ಟೇ 5 ಮನೆಗಳು ಕುಸಿದಿರುವ ವಿಷಯ ತಿಳಿದು ಬಂದಿದೆ. ಇನ್ನು ಗ್ರಾಮದಲ್ಲಿ ಎಷ್ಟು ಮನೆಗಳು ಬಿದ್ದಿವೆ ಎಂಬುದು ಗ್ರಾಮಸ್ತರಿಂದ ನಮಗೆ ಅರ್ಜಿ ಬಂದ ನಂತರ ಇಂಜನಿಯರೊಂದಿಗೆ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ