ಬೆಳಗಾವಿ: ಕತ್ತಿ ಸಾವಿನ ದುಃಖದಿಂದ ಹೃದಯಾಘಾತವಾಗಿ ಕುಸಿದ ಬಿದ್ದ ವ್ಯಕ್ತಿ; ಸಮಯ ಪ್ರಜ್ಞೆಯಿಂದ ಬದುಕುಳಿಸಿದ ಅಥಣಿ ಡಿಎಸ್ಪಿ ಶ್ರೀಪಾದ ಜಲ್ದೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಚಿವ ಉಮೇಶ ಕತ್ತಿ ಅವರ ನಿಧನದ ದುಃಖದಿಂದ ವ್ಯಕ್ತಿಯೊಬ್ಬರು ಹೃದಯಾಘಾತವಾಗಿ ಕುಸಿದು ಬಿದ್ದಿದ್ದು ಅಥಣಿ ಡಿಎಸ್ ಪಿ ಶ್ರೀಪಾದ ಜಲ್ದೆಯವರ ಸಮಯಪ್ರಜ್ಞೆಯ ಚಿಕಿತ್ಸೆ ವ್ಯಕ್ತಿಯ ಜೀವ ಉಳಿಸಿದೆ.
ಉಮೇಶ ಕತ್ತಿ ಅವರ ಅಂತಿಮ ಕ್ರಿಯೆಗಳ ಸಂದರ್ಭದ ಬಂದೋಬಸ್ತಿಗಾಗಿ ಅಥಣಿ ಡಿಎಸ್ ಪಿ ಶ್ರೀಪಾದ ಜಲ್ದೆ ಅವರು ಬೆಳಗಿನಜಾವ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಸಚಿವ ಕತ್ತಿ ಅವರ ಹುಟ್ಟೂರಾದ ಬೆಲ್ಲದ ಬಾಗೇವಾಡಿಯ ಸಕ್ಕರೆ ಕಾರ್ಖಾನೆಯ ಪಕ್ಕದ ಕಟ್ಟಡದಲ್ಲಿ ವ್ಯಕ್ತಿಯೊಬ್ಬರು ಬೆಳಗಿನಜಾವ 3.30ರ ಸುಮಾರಿಗೆ ಸಚಿವರ ಸಾವಿನ ವೇದನೆಯಿಂದ ಕುಸಿದು ಬಿದ್ದಿರುವ ಮಾಹಿತಿ ಲಭಿಸಿತು.
ಕೂಡಲೇ ಸ್ಥಳಕ್ಕೆ ಧಾವಿಸಿದ ಡಿಎಸ್ ಪಿ ಶ್ರೀಪಾದ ಜಲ್ದೆ ಅವರು ವ್ಯಕ್ತಿಗೆ CPR ಚಿಕಿತ್ಸೆ ಕೊಡಿಸಿದ ನಂತರ ಅವರು ಚೇತರಿಸಿಕೊಂಡಿದ್ದಾರೆ.
ಶ್ರೀಪಾದ ಜಲ್ದೆ ಅವರ ಸಮಯಪ್ರಜ್ಞೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಶ್ಲಾಘಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ