ಐಸಿಎಂಆರ್ –ಎನ್ಐಟಿಎಂ ನೌಕರರು, ಪಿಂಚಣಿದಾರರು ಹಾಗೂ ಕುಟುಂಬ ಸದಸ್ಯರಿಗೆ KLEಯಲ್ಲಿ ಆರೋಗ್ಯ ಸೇವೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೇಂದ್ರ ಸರಕಾರದ ಆರೋಗ್ಯ ಯೋಜನೆಯಡಿ ನಿಯಮ ಹಾಗೂ ದರಕ್ಕೆ ಅನುಸಾರವಾಗಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವದಕ್ಕಾಗಿ ಐಸಿಎಂಆರ್ –ಎನ್ಐಟಿಎಂ ನೌಕರರು, ಪಿಂಚಣಿದಾರರು ಹಾಗೂ ಕುಟುಂಬ ಸದಸ್ಯರಿಗೆ ಆರೋಗ್ಯ ಸೇವೆಗಳನ್ನು ಕಲ್ಪಿಸಲು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್(ಐಸಿಎಂಆರ್-ಎನ್ಐಟಿಎಂ) ಹಾಗೂ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಒಡಂಬಡಿಕೆ ಮಾಡಿಕೊಂಡಿವೆ.
ಕೆಎಲ್ಇ ಸಂಸ್ಥೆಯ ಕರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಅವರ ಉಪಸ್ಥಿತಿಯಲ್ಲಿ ಇತ್ತೀಚೆಗೆ ನಡೆದ ಕರ್ಯಕ್ರಮದಲ್ಲಿ ಐಸಿಎಂಆರ್-ಎನ್ಐಟಿಎಂ ನಿರ್ದೇಶಕರಾದ ಡಾ. ಸುಬರ್ಣಾ ರಾಯ್ ಹಾಗೂ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು.
ನಂತರ ಮಾತನಾಡಿದ ಡಾ ಪ್ರಭಾಕರ ಕೋರೆ ಅವರು, ಕೇಂದ್ರದ ಮಾಜಿ ಆರೋಗ್ಯ ಸಚಿವರಾಗಿದ್ದ ದಿ. ಬಿ.ಶಂಕರಾನಂದ ಅವರೊಂದಿಗಿನ ಒಡನಾಟ ಮತ್ತು ಆರೋಗ್ಯ ಸೇವೆಯ ಕುರಿತು ಸ್ಮರಿಸಿದರು. ಈ ಭಾಗದ ಮತ್ತು ದೇಶದ ಜನರ ಆರೋಗ್ಯ ಸೇವೆಯನ್ನು ಸುಧಾರಿಸಲು ಐಸಿಎಂಆರ್ ಜೊತೆಗೂಡಿ ಸಂಶೋಧನೆ ನಡೆಸಲಾಗುತ್ತದೆ. ಇದಕ್ಕೂ ಮೊದಲು ಐಸಿಎಂಆರ್-ಎನ್ಐಟಿಎಂಗೆ ಭೇಟಿ ನೀಡಿ, ಪ್ರಯೋಗಾಲಯ, ವಸ್ತುಸಂಗ್ರಹಾಲಯ, ಗಿಡಮೂಲಿಕೆ ಉದ್ಯಾನ ಮತ್ತು ನೂತನ ಪ್ರಯೋಗಾಲಯ ಕಟ್ಟಡವನ್ನು ವೀಕ್ಷಿಸಿದರು. ಎನ್ಐಟಿಎಂನ ವಿಜ್ಞಾನಿ ಮತ್ತು ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು.
ಕೆಎಲ್ಇ ಸಂಸ್ಥೆ ಒಳಗೊಂಡಂತೆ ಈ ಭಾಗದ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಸಹಯೋಗದೊಂದಿಗೆ ಐಸಿಎಂಆರ್-ಎನ್ಐಟಿಎಂ ನಡೆಸುತ್ತಿರುವ ಕರ್ಯ ಚಟುವಟಿಕೆಗಳ ಸಹಭಾಗಿತ್ವದ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು. ಇದಲ್ಲದೆ, ಸಾರ್ವಜನಿಕ ಆರೋಗ್ಯದ ಪ್ರಯೋಜನಕ್ಕಾಗಿ ಸಾಂಪ್ರದಾಯಿಕ ಮತ್ತು ಆಧುನಿಕ ವೈದ್ಯಕೀಯ ವಿಜ್ಞಾನಗಳ ಸಾಮರ್ಥ್ಯವನ್ನು ಸಾಕ್ಷ್ಯಾಧಾರಿತ ಸಮಗ್ರ ಆರೋಗ್ಯ ರಕ್ಷಣೆಯನ್ನು ಅಭಿವೃದ್ಧಿಪಡಿಸುವಲ್ಲಿ ತೀವ್ರವಾದ ಮತ್ತು ಕೇಂದ್ರೀಕೃತ ಸಂಶೋಧನಾ ಚಟುವಟಿಕೆಗಳ ಅಗತ್ಯವಿದೆ. ಸಮಗ್ರ ಆರೋಗ್ಯ ರಕ್ಷಣೆ ವಿಧಾನದ ಮೂಲಕ ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚಿನ ಸಂಶೋಧನಾ ಚಟುವಟಿಕೆಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಹೇರ ಉಪಕುಲಪತಿ ಡಾ. ವಿವೇಕ್ ಸಾವೋಜಿ, ಉಪಸ್ಥಿತರಿದ್ದರು. ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯದ ಗೌರವ ಡಾಕ್ಟರ್ ಆಫ್ ಸೈನ್ಸ್ ಪದವಿಯನ್ನು ಪಡೆದಿದ್ದಕ್ಕಾಗಿ ಅವರನ್ನು ಸತ್ಕರಿಸಲಾಯಿತು.
ಉಮೇಶ ಕತ್ತಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕ ಬಾಲಚಂದ್ರ ಜಾರಕಿಹೊಳಿ
https://pragati.taskdun.com/latest/balachandra-jarakiholiumesh-kattideathcondolancebellada-bagewadi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ