Kannada NewsKarnataka NewsLatest

ಬೆಳಗಾವಿಯಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಸುರಕ್ಷಿತ ವಸತಿ ಸೌಲಭ್ಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಉದ್ಯೋಗಸ್ಥ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಅನುಕೂಲವಾಗಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಉದ್ಯೋಗಸ್ಥ ಮಹಿಳೆಯರಿಗೆ ಸುರಕ್ಷಿತ ವಾಸ್ತವ್ಯ ಕಲ್ಪಿಸಲು ಬೆಳಗಾವಿ ನಗರದಲ್ಲಿ ಒಟ್ಟು ೦೩ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳನ್ನು ಪ್ರಾರಂಭಿಸಲಾಗುತ್ತಿದೆ.

ಕಾರ್ಖಾನೆ, ಆಸ್ಪತ್ರೆ, ಹೋಟೆಲ್ ಉದ್ಯಮ, ಗಾಮೆಂಟ್ಸ್ ಉದ್ದಿಮೆಗಳಲ್ಲಿ ಸಣ್ಣ ಕೈಗಾರಿಕೆಗಳ ಮೂಲಕ ಮಹಿಳೆಯರು ಗ್ರಾಮೀಣ ಪ್ರದೇಶಗಳಿಂದ ಬಂದು ನಗರಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಕನಿಷ್ಠ ಮಾಹೆಯಾನ ಬಾಡಿಗೆ ಆಧಾರದ ಮೇಲೆ ಸುರಕ್ಷಿತ ವಾಸ್ತವ್ಯ ಕಲ್ಪಿಸಲು ಇಲಾಖೆಯು ಮುಂದಾಗಿದೆ.

ಉದ್ಯೋಗ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿಪರ ಬದಲಾವಣೆಯಿಂದಾಗಿ ಹೆಚ್ಚು ಮಹಿಳೆಯರು ಉದ್ಯೋಗವಕಾಶವನ್ನು ಅರಸಿ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಇಂತಹ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಮುಖ್ಯವಾದುದು ಸುರಕ್ಷಿತ ಹಾಗೂ ಯೋಗ್ಯ ವಸತಿ ಸೌಕರ್ಯ.
ಮಹಿಳೆಯರ ಈ ಸಮಸ್ಯೆಗಳನ್ನು ಮನಗಂಡು ವಸತಿ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ ಯೋಜನೆಯನ್ನು ಅನುಷ್ಠಾನಗೊಳಿಸಿದೆ.

ಶಾಲಾ-ಕಾಲೇಜುಗಳು, ಸರಕಾರಿ ಇಲಾಖೆಗಳು, ಕಾರ್ಖಾನೆಗಳು, ಹೋಟೆಲ್, ಆಸ್ಪತ್ರೆ, ಗಾಮೆಂಟ್ಸ್ ಮತ್ತಿತರ ಸರಕಾರಿ ಹಾಗೂ ಖಾಸಗಿ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಈ ವಸತಿ ನಿಲಯದ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ಬೆಳಗಾವಿ ನಗರದ ವಸತಿ ನಿಲಯಗಳ ವಿಳಾಸ:

೧)ಜೈನ್ ಇಂಜನೀಯರಿಂಗ್ ಕಾಲೇಜ್ ಹತ್ತಿರ ಸ.ನಂ:೫೯೯/೧ ಪ್ಲಾಟ ನಂ-೫೦ ಮಚ್ಚೆ ತಾ.ಜಿ:ಬೆಳಗಾವಿ.

೨) ಜ್ಯೋತಿಬಾ ಹುಂಡ್ರೆ ಪ್ಲಾಟ್ ಸಂಖ್ಯೆ:೩೩೫೨ ಪ್ಲಾಟ ಸಂಖ್ಯೆ: ೧೦೪ ರೂ.ನಂ ೩೨೭/೨ ರಾಜಾರಾಂ ನಗರ ಜಿಐಟಿ ಕಾಲೇಜು ಹತ್ತೀರ ಉದ್ಯಮಭಾಗ ಬೆಳಗಾವಿ.

೩)ರಿಯಾಜ್ ದೇಸಾಯಿ ಪ್ಲಾಟ ನಂ.೧ ನೂಮಾನಿ ಮಸೀದಿ ಹಿಂಭಾಗ ೧ನೇ ಕ್ರಾಸ್ ಅಜಮನಗರ ಬೆಳಗಾವಿ

ಸಂಪರ್ಕಿಸಬೇಕಾದ ವಿಳಾಸ:

ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿವಾಜಿ ನಗರ ಬೆಳಗಾವಿ ದೂರವಾಣ ಸಂಖ್ಯೆ: ೯೪೮೨೦೯೦೨೫೪. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಬಾಲಭವನ ಕಟ್ಟಡ ಶ್ರೀನಗರ ಬೆಳಗಾವಿ ದೂರವಾಣ ಸಂಖ್ಯೆ: ೯೮೮೬೮೩೫೭೩೭ನ್ನು ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

https://pragati.taskdun.com/crime/woman-murdered-husbund-found-alive-nepal-mother-house-police-arrest/

https://pragati.taskdun.com/karnataka-news/minister-shashikala-jolle-inaugurated-sakhi-one-stop-center/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button