Belagavi NewsBelgaum NewsKannada NewsKarnataka News

*ಸಂಗೊಳ್ಳಿ ರಾಯಣ್ಣ ಮೂರ್ತಿ ಮೇಲೆ ಬಿದ್ದ ಮರದ ದ್ರವ..? ಮರದ ಎಲೆ ಲ್ಯಾಬ್ ಗೆ ರವಾನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಮೆಚ್ಚೆ ಗ್ರಾಮದಲ್ಲಿ ಇರುವ ಸಂಗೊಳ್ಳಿ ರಾಯಣ್ಣ ಮೂರ್ತಿ ಮೇಲೆ ಕಿಡಿಗೇಡಿಗಳು ಮಸಿ ಎಸೆದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದು, ಇದು ಮಸಿ ಅಲ್ಲ ಬದಲಿಗೆ ಕಲ್ಲು ಬಸರಿ ಮರದಿಂದ ಸೋರಿಕೆಯಾಗುತ್ತಿರೋ ದ್ರವ ರೂಪದ ಪದಾರ್ಥ ಇರುಬಹು ಎಂದು ಅಂದಾಜಿಸಲಾಗಿದೆ.‌

ಗುರುವಾರ ತಡ ರಾತ್ರಿ ಸಂಗೊಳ್ಳಿ ರಾಯಣ್ಣ ಮೂರ್ತಿ ಮೇಲೆ ದ್ರವ ರೂಪದ ಪದಾರ್ಥ ಬಿದ್ದಿರುವದನ್ನು ನೋಡಿದ ಸ್ಥಳಿಯರು ಕಿಡಿಗೇಡಿಗಳು ಮಸಿ ಎಸೆದಿದ್ದಾರೆ ಎಂದು ಆರೋಪಿಸಿದರು. 

ಈ ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಬಂದ ಅಧಿಕಾರಿಗಳು ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೇಲೆ ಕಲ್ಲು ಬಸರಿ ಮರದಿಂದ ಸೋರಿಕೆಯಾಗುತ್ತಿರೋ ದ್ರವ ರೂಪದ ಪದಾರ್ಥ ಇರಬಹು ಎಂದು ಅಂದಾಜಿಸಿದ್ದಾರೆ. 

ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ಡಿಸಿಪಿ ನಾರಾಯಣ ಭರಮನಿ ಭೇಟಿ‌ಯಾಗಿ ಪರಿಶೀಲನೆ ನಡೆಸಿದ್ದಾರೆ.‌ ಸ್ಥಳಕ್ಕೆ ಸೋಕೊ ತಂಡ ಕೂಡ ಭೇಟಿ, ಪರಿಶೀಲಿಸಿ ಮರದ ಎಲೆಗಳನ್ನು ಸಂಗ್ರಹಿಸಿ ಎಫ್ ಎಸ್ ಎಲ್ ಗೆ ರವಾನಿಸಲಾಗಿದೆ. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button