Kannada NewsLatest

ಗುರುವಂದನಾ: ಸಂಗೀತ ಕಾರ್ಯಕ್ರಮ

ಪ್ರಗತಿವಾಹಿನಿ ಬೆಳಗಾವಿ: ಬೆಳಗಾವಿಯ ಶಹಾಪುರದ ಸರಸ್ವತಿ ವಾಚನಾಲಯದಲ್ಲಿ ಸಮಾದೇವಿಗಲ್ಲಿಯ ಸ್ವರಸಾಧನಾ ಸಂಗೀತ ವಿದ್ಯಾಲಯದ ವತಿಯಿಂದ ಸೆ. 11ರಂದು ಬೆಳಗ್ಗೆ 9 ಘಂಟೆಯಿಂದ, ಶ್ರೀ ಕಡ್ಲಾಸ್ಕರ್ ಬವಾ ಅವರ ಜನ್ಮಶತಾಬ್ದಿ ಮಹೋತ್ಸವ ಹಾಗೂ ಶ್ರೀ ಪಲುಸ್ಕರ್ ಅವರ ಪುಣ್ಯಸ್ಮರಣೆಯ ಅಂಗವಾಗಿ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸಂಗೀತ ಕಲಾವಿದ ಗುರುವರ್ಯರಾದ ವಿನಾಯಕ ಶಿರಸಾಟ, ಹಾಗೂ ಬೆಳಗಾವಿಯ ಅನೇಕ ಪ್ರಸಿದ್ಧ ಸಂಗೀತ ಕಲಾಕಾರರು ಉಪಸ್ಥಿತರಿರುವರು. ಬೆಳಗಾವಿಯ ಹಿರಿಯ ತಬಲಾ ಕಲಾವಿದ ಜಿ. ಏ. ಕುಲಕರ್ಣಿ (ಬಂಡೋಪಂತ) ಹಾಗೂ ಜಿತೇಂದ್ರ ಸಾಬಣ್ಣವರ್ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮಕ್ಕೆ ಅಶೋಕ ನಾಡಿಗೇರ್ ಕುಂದಗೋಳ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಗುರುಸೇವಾ ನಿಮಿತ್ತ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಹಾಗೂ ನಾಟ್ಯಸಂಗೀತದ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ.

ಸೀಮಾ ಕುಲಕರ್ಣಿ ಹಾಗೂ ವಿದ್ವಾನ್ ಅಶೋಕ್ ನಾಡಿಗೇರ್ ಅವರು ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತಪಡಿಸಲಿದ್ದಾರೆ. ತಬಲಾ ಸಾಥಿಯಾಗಿ ಜಿತೇಂದ್ರ ಸಾಬಣ್ಣವರ್, ವಿಶಾಲ್ ಮೋಡಕ್ ಹಾಗೂ ರಾಹುಲ್ ಮಂಡೋಳ್ಕರ್ ಮತ್ತು ಹಾರ್ಮೋನಿಯಂ ಸಾಥಿಯಾಗಿ ವಾಮನ್ ವಾಗೂಕರ್ ಅವರು ಪಾಲ್ಗೊಳ್ಳುವರು. ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರವೇಶವಿದೆ. ಎಲ್ಲ ಸಂಗೀತ ಕಲಾ ರಸಿಕರು ಕಾರ್ಯಕ್ರಮಕ್ಕೆ ಆಗಮಿಸಿ, , ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿದ್ಯಾಲಯದ ಮುಖ್ಯಾಧ್ಯಾಪಕಿ ಸೀಮಾ ಕುಲಕರ್ಣಿಯವರು ಕೋರಿದ್ದಾರೆ.

ತಾಯಿ ಕಣ್ಮುಂದೆಯೇ ನೀರು ಪಾಲಾದ ಮಗಳು

https://pragati.taskdun.com/latest/girlwashedawayriverkalaburgi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button