Kannada NewsKarnataka News

ಹೃದಯಾಘಾತದಿಂದ ನಿವೇದಿತಾ ನವಲಗುಂದ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಿವೇದಾರ್ಪಣ ಅಕಾಡೆಮಿ ಆಫ್ ಮ್ಯೂಸಿಕ್ ಮಾಲಕಿ ನಿವೇದಿತಾ ನವಲಗುಂದ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು.

ಸೋಮವಾರ ಬೆಳಗಿನಜಾವ 1.30ರ ಸುಮಾರಿಗೆ ಅವರಿಗೆ ಮನೆಯಲ್ಲೇ ಹೃದಯಾಘಾತವಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.

ಬೆಳಗಾವಿಯ ಚನ್ನಮ್ಮ ನಗರದಲ್ಲಿ ಅವರು ಕಳೆದ ಕೆಲವು ವರ್ಷಗಳಿಂದ ಮ್ಯೂಸಿಕ್ ಅಕಾಡೆಮಿ ನಡೆಸುತ್ತಿದ್ದರು. ಹಲವಾರು ಜನರಿಗೆ ಸಂಗೀತ ಹೇಳಿಕೊಡುತ್ತಿದ್ದರು. ಅನೇಕ ಉತ್ತಮ ಕಾರ್ಯಕ್ರಮಗಳನ್ನು ಬೆಳಗಾವಿಯ ಜನರಿಗೆ ನೀಡಿದ್ದರು.

ಖ್ಯಾತ ಚೆಸ್ ಆಟಗಾರ ನಿರಂಜನ ನವಲಗುಂದ ಸೇರಿದಂತೆ ಇಬ್ಬರು ಪುತ್ರರು, ಕೈಗಾರಿಕೆ ಇಲಾಖೆ ಉದ್ಯೋಗಿ, ಸಧ್ಯ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಅವರು ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿರುವ ಚಂದ್ರಶೇಖರ ನವಲಗುಂದ ಸೇರಿದಂತೆ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.

ಬೆಳಗಾವಿ ಜಿಲ್ಲೆಗೆ ಮಕ್ಕಳ ಕಳ್ಳರು ಬಂದಿದ್ದಾರಾ? ವದಂತಿಗಳಿಗೆ ಎಸ್ ಪಿ ಸ್ಪಷ್ಟನೆ

https://pragati.taskdun.com/belgaum-news/have-child-thieves-come-to-belgaum-district-sp-clarification-on-rumours/

https://pragati.taskdun.com/crime-news/four-accused-arrestedstabbing-a-manbelagaviganesh-visarjane/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button