Latest

ಭಾರತದ ಜೆರ್ಸಿ ಧರಿಸಿದವರನ್ನು ಹೊರದಬ್ಬಿದ ದುಬೈ ಸ್ಟೇಡಿಯಂನ ಸೆಕ್ಯುರಿಟಿ ಗಾರ್ಡ್ ಗಳು

ಪ್ರಗತಿವಾಹಿನಿ ಸುದ್ದಿ;  ದುಬೈ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಟಿ 20 ಏಷ್ಯಾ ಕಪ್ ನ ಫೈನಲ್ ಪಂದ್ಯದಲ್ಲಿ ಭಾರತೀಯರನ್ನು ಅವಮಾನಿಸಲಾಗಿಸೆ.

ಈ ರೋಚಕ ಪಂದ್ಯವನ್ನು ವೀಕ್ಷಿಸಲು ಆಗಮಿಸಿದ್ದ ಕೆಲ ಭಾರತೀಯ ಪ್ರೇಕ್ಷಕರನ್ನು ಅಲ್ಲಿನ ಸೆಕ್ಯುರಿಟಿ ಗಾರ್ಡ್ ಗಳು ಹೊರದಬ್ಬಿದ್ದಾರೆ.

ಭಾರತ ತಂಡದ ಜೆರ್ಸಿ ಧರಿಸಿ ಬಂದಿದ್ದವರನ್ನು ಗುರಿಯಾಗಿಸಿ ಈ ರೀತಿ ಅವಮಾನ ಮಾಡಲಾಗಿದೆ.

ಪಾಕಿಸ್ತಾನ ಅಥವಾ ಶ್ರೀಲಂಕಾದ ಜೆರ್ಸಿ ಧರಿಸಿ ಬಂದರೆ ಮಾತ್ರ ಪಂದ್ಯ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ ಎಂದು ಸ್ಟೇಡಿಯಂನ ಸೆಕ್ಯುರಿಟಿ ಗಾರ್ಡ್ ಗಳು ತಾಕೀತು ಮಾಡಿದ್ದಾರೆ. ಇದರಿಂದ ಮನಸ್ಸಿಗೆ ಬಹಳ ನೋವಾಗಿದೆ ಎಂದು ಭಾರತ್ ಆರ್ಮಿ ಸಂಘಟನೆಯ ಅನಘಾ, ನರೇಶ ಮತ್ತಿತರರು ಟ್ವಿಟರ್ ಮೂಲಕ ಆರೋಪ ಮಾಡಿದ್ದಾರೆ.

 

ಮೂರು ಕಿ.ಮೀ ಓಡಿ ಆಸ್ಪತ್ರೆ ತಲುಪಿ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯ

https://pragati.taskdun.com/latest/doctorrunning-to-hospitalcar-struck-in-traffic/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button