Latest

ಬಂದರು ನಿರ್ಮಾಣಕ್ಕೆ ವಿರೋಧ: ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

ಪ್ರಗತಿ ವಾಹಿನಿ: ಕಾರವಾರ: ಕಾರವಾರದ ಮಾಜಾಳಿಯಲ್ಲಿ ನಿರ್ಮಾಣ ಮಾಡಲು ನಿರ್ಧರಿಸಿರುವ ಮೀನುಗಾರಿಕಾ ಬಂದರು ಯೋಜನೆಯನ್ನು ಸೋಮವಾರ ಮೀನುಗಾರರು ಸಭೆ ನಡೆಸಿ ವಿರೋಧ ವ್ಯಕ್ತಪಡಿಸಿದರು.

ಬಂದರು ನಿರ್ಮಾಣದಿಂದ ಮೀನುಗಾರರಿಗೆ ಆಗುವ ತೊಂದರೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅಧಿಕಾರಿಗಳು ಮೀನುಗಾರರ ಜೊತೆ ಚರ್ಚಿಸದೇ ಈ ಯೋಜನೆಗೆ ಮುಂದಾಗಿರುವುದು ಸರಿಯಲ್ಲ ಎಂದು ಮೀನುಗಾರ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಾಳಿ, ಹಿಪ್ಪಳಿ, ದಂಡೇಬಾಗ್, ಬಾವಲ್, ದೇವಬಾಗ್ ಭಾಗದ ಮೀನುಗಾರರು ಸೇರಿ ಯೋಜನೆಗೆ ಇರುವ ವಿರೋಧದ ಬಗ್ಗೆ ಜಿಲ್ಲಾಧಿಕಾರಿ ಮುಖಾಂತರ ಮುಖ್ಯ ಮಂತ್ರಿ, ಹಾಗು ಮೀನುಗಾರಿಕಾ ಸಚಿವರಿಗೆ, ಮನವಿ ಸಲ್ಲಿಸುವ ಬಗ್ಗೆ ನಿರ್ಣಯ ಮಾಡಿದರು.ಮನವಿಗೆ ಸ್ಪಂಧಿಸಿ ಯೋಜನೆ ಕೈ ಬಿಡದೆ ಹೋದರೆ ಮುಂದಿನ ದಿನ ಉತ್ತರ ಕನ್ನಡ ಮೀನುಗಾರರು ಸೇರಿ ಉಗ್ರ ಹೋರಾಟ ಮಾಡಲಾಗುವುದು ಮತ್ತು ದೇವಬಾಗ್ ದಿಂದ ಮಾಜಾಳಿ ವರೆಗಿನ ಮೀನುಗಾರರು ಮುಂಬರುವ ಎಲ್ಲ ಚುನಾವಣೆಯನ್ನು ಬಹಿಷ್ಕರಿಸುವ, ಮತ್ತು ಊರಿಗೆ ಬರುವ ಯಾವುದೇ ಅಧಿಕಾರಿ ಗಳಿಗೆ ಘೆರಾವ ಹಾಕುವುದಾಗಿ ನಿರ್ಣಯ ಮಾಡಿದರು.

ಸಭೆಯಲ್ಲಿ ಮೀನುಗಾರ ಮುಖಂಡರಾದ ದೇವರಾಯ ಸೈಲ್, ಮಹದೇವ್ ಕುಮಟೀಕರ, ಶ್ರೀಪಾದ ಸೈಲ್, ಮನೋಜ್ ಮಾಜಾಳಿಕರ, ಗಣಪತಿ ಖೋಬ್ರೇಕರ, ಪ್ರಶಾಂತ ಸೈಲ್, ಪಾಂಡುರಂಗ ಖೋಬ್ರೇಕರ, ಗಜಾನನ ಚಂಡೆಕರ, ಶೈಲೇಶ್ ಕಾಂಬ್ಳೆ, ಸಂತೋಷ ಚಂಡೆಕರ, ಮೊದಲಾದವರು ಉಪಸ್ಥಿತರಿದ್ದರು.

ಶಾಲೆಗಳ ದಸರಾ ರಜೆ: ಜಿಲ್ಲಾಧಿಕಾರಿ, ಜಿಪಂ ಸಿಇಒಗಳಿಗೆ ಮಾರ್ಪಾಡು ಅಧಿಕಾರ

https://pragati.taskdun.com/latest/dussehra-holiday-of-schools-dc-ceos-have-authority-to-change/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button