ಪ್ರಗತಿವಾಹಿನಿ ಸುದ್ದಿ, ಮುಂಬೈ: ಅಜಯ್ ದೇವಗನ್ ಅಭಿನಯದ ಇನ್ನೂ ತೆರೆ ಕಾಣದ ಬಹು ನಿರೀಕ್ಷಿತ ಚಲನ ಚಿತ್ರ ‘ಥ್ಯಾಂಕ್ ಗಾಡ್’ ಗೆ ಕಾನೂನು ಕಂಟಕ ಎದುರಾಗಿದೆ.
ಬಾಲಿವುಡ್ ಗೆ ಈ ವರ್ಷ ಸಂಕಷ್ಟ ಎದುರಾಗಿದೆ. ಈಗಾಗಲೇ ಅಮೀರ್ ಖಾನ್ ಅಭಿನಯದ ಮಹತ್ವಾಕಾಂಕ್ಷೆಯ ಲಾಲ್ ಸಿಂಗ್ ಚಡ್ಡಾ ನೆಲ ಕಚ್ಚಿದೆ. ರಣಬೀರ್ ಸಿಂಗ್ ಅಭಿನಯದ ಬ್ರಹ್ಮಾಸ್ತ್ರಕ್ಕೂ ಬೈ ಕಾಟ್ ಭೀತಿ ಎದುರಾಗಿತ್ತು. ಈಗ ಪ್ರೇಕ್ಷಕರ ವಿರೋಧ ಎದುರಿಸುವ ಸರಣಿ ಅಜಯ್ ದೇವಗನ್ ಪಾಲಿಗೆ ಬಂದಿದೆ.
ಇಂದ್ರಕುಮಾರ್ ನಿರ್ಮಾಣದ ಥ್ಯಾಂಕ್ ಗಾಡ್ ಚಲನಚಿತ್ರದ ಟೀಸರ್ ಸೆ. 9 ರಂದು ಬಿಡುಗಡೆಯಾಗಿದ್ದು, ಈ ಚಲನ ಚಿತ್ರ ಅಕ್ಟೋಬರ್ 25 ರಂದು ದೇಶಾದ್ಯಂತ ಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಳ್ಳಬೇಕಿತ್ತು. ಅಜಯ ದೇವಗನ್ ಈ ಚಿತ್ರದಲ್ಲಿ ಹಿಂದೂ ದೇವರಾದ ಚಿತ್ರಗುಪ್ತನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಜಯ್ ದೇವಗನ್ ಜತೆ ರಾಕುಲ್ ಪ್ರೀತ್ ಸಿಂಗ್ , ನೋರಾ ಫತೆಹಿ, ಸಿದ್ದಾರ್ಥ ಮಲಹೋತ್ರಾ ಮೊದಲಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
ಆದರೆ ಥ್ಯಾಂಕ್ ಗಾಡ್ ಚಿತ್ರದಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ದೃಷ್ಯಗಳಿವೆ ಎಂದು ಆರೋಪಿಸಿ ವಕೀಲ ಹಿಮಾಂಶು ಶರ್ಮಾ ಎಂಬುವವರು ಉತ್ತರ ಪ್ರದೇಶದ ಜಹಾನ್ಪುರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಬಾಲಿವುಡ್ ಗೆ ಮತ್ತೊಮ್ಮೆ ಆಘಾತ ಎದುರಾಗಿದೆ.
ಚಿತ್ರಗುಪ್ತ ಹಿಂದೂ ದೇವತೆಗಳ ಸಾಲಿನಲ್ಲಿ ಶ್ರೇಷ್ಠರು. ನ್ಯಾಯ , ಅನ್ಯಾಯಗಳನ್ನು ಅಳೆದು ತೂಗುವ ಶಕ್ತಿ ಉಳ್ಳ ದೇವರು. ಆದರೆ ಚಲನ ಚಿತ್ರದಲ್ಲಿ ಚಿತ್ರ ಗುಪ್ತ ಪಾತ್ರದಿಂದ ಕೀಳು ಮಟ್ಟದ ಭಾಷೆ ಬಳಸಲಾಗಿದೆ ಎಂದು ಹಿಮಾಂಶು ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರಿನ ವಿಚಾರಣೆಯನ್ನು ನ್ಯಾಯಾಲಯ ನವೆಂಬರ್ ಮೊದಲ ವಾರಕ್ಕೆ ಕಾಯ್ದಿರಿಸಿದೆ ಎಂದು ತಿಳಿದು ಬಂದಿದೆ.
ಪರಿಷತ್ ನಲ್ಲಿ ಮಂಡನೆಯಾದ ಮತಾಂತರ ನಿಷೇಧ ಕಾಯ್ದೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ