Latest

ಪರಿಷತ್ ನಲ್ಲಿ ಮಂಡನೆಯಾದ ಮತಾಂತರ ನಿಷೇಧ ಕಾಯ್ದೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಳೆದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಇಂದು ಗೃಹ ಸಚಿವ ಅರಗ ಜ್ಞಾನೇಂದ್ರ ವಿಧಾನಪರಿಷತ್ ನಲ್ಲಿ ಮಂಡಿಸಿದರು.

ಈ ವೇಳೆ ಮಾತನಾಡಿದ ಸಚಿವರು, ಪ್ರತಿಯೊಬ್ಬರಿಗೂ ಅವರವರ ಧರ್ಮದಲ್ಲಿ ಬದುಕುವ ಅವಕಾಶವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಲವಂತದ ಮತಾಂತರ, ಆಮಿಷಗಳನ್ನು ಒಡ್ಡಿ ಮತಾಂತರ ಮಾಡುವುದು, ಒತ್ತಾಯಪೂರ್ವಕವಾಗಿ ಮತಾಂತರ ಮಾಡಲು ಯತ್ನಿಸುವುದು ಇಂತಹ ಘಟನೆಗಳು ಬೆಳಕಿಗೆ ಬಂದಿವೆ. ಸ್ವತ: ನಮ್ಮ ಶಾಕರೊಬ್ಬರು ತಮ್ಮ ತಾಯಿಯನ್ನು ಮತಾಂತರ ಮಾಡಿರುವ ಬಗ್ಗೆ ವಿಧಾನಸಭೆಯಲ್ಲಿ ಹೇಳಿದ್ದರು. ಇಂತಹ ಒತ್ತಾಯಪೂರ್ವಕ ಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗುತ್ತಿದೆ ಎಂದರು.

Home add -Advt

ಒಬ್ಬ ವ್ಯಕ್ತಿ ಒಂದು ಧರ್ಮ ಸ್ವೀಕರಿಸಲು ಅವಕಾಶವಿದೆ. ಇದರಿಂದ ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗಲ್ಲ. ಮತಾಂತರದಿಂದಾಗಿ ಅನೇಕ ಊರುಗಳೇ ಒಡೆದು ಹೋಗಿವೆ. ಬಲವಂತದ ಮತಾಂತರವಾಗಬಾರದು. ಈ ನಿಟ್ಟಿನಲ್ಲಿ ಕೆಲ ಕಾನೂನು ಕ್ರಮಗಳನ್ನು ಜಾರಿಗೊಳಿಸುತ್ತಿರುವುದಾಗಿ ತಿಳಿಸಿದರು.

ರಾಜಾಹುಲಿ ಇರಲಿ ಯಾರೇ ಇರಲಿ ಮೊದಲು ರಾಜೀನಾಮೆ ಕೊಡಲಿ; ಸ್ವಪಕ್ಷದ ಶಾಸಕನಿಂದಲೇ ಬಿಎಸ್ ವೈಗೆ ಆಗ್ರಹ

https://pragati.taskdun.com/politics/basanagouda-patil-yatnalb-s-yedyurapparesign/

Related Articles

Back to top button