*ಪೊಲೀಸರ ಸೋಗಿನಲ್ಲಿ ಬಂದು ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್: ಉದ್ಯಾನವನದ ಪಕ್ಕದಲ್ಲಿರುವ ಕಾಲೇಜು ತರಗತಿ ರದ್ದು; ಆನ್ ಲೈನ್ ನಲ್ಲಿ ಕ್ಲಾಸ್*

ಪ್ರಗತಿವಾಹಿನಿ ಸುದ್ದಿ: ಪೊಲೀಸರ ಸೋಗಿನಲ್ಲಿ ಉದ್ಯಾನವನಕ್ಕೆ ನುಗ್ಗಿ 17 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್ ಪ್ರಕರಣದ ಬಳಿಕ ಪಾರ್ಕ್ ಪಕ್ಕದಲ್ಲಿದ್ದ ಕಲ್ಕಾಜಿ ಮಂದಿರದ ಬಳಿ ಇರುವ ಮಹಿಳಾ ಕಾಲೇಜಿನಲ್ಲಿ ತರಗತಿಗಳನ್ನು ರದ್ದುಗೊಳಿಸಿ ಆನ್ಲೈನ್ ಕ್ಲಾಸ್ ನಡೆಸಲಾಯಿತು.
ಕಲ್ಕಾಜಿ ದೇವಾಲಯದ ಸಮೀಪವಿರುವ ಆಸ್ತಾ ಕುಂಜ್ ಪಾರ್ಕ್ನಲ್ಲಿ ಈ ಘಟನೆ ನಡೆದಿದೆ. ಲೇಡಿ ಶ್ರೀ ರಾಮ್ ಕ್ಯಾಂಪಸ್ ಘಟನೆ ನಡೆದ ಸ್ಥಳದಿಂದ 2 ಕಿಲೋಮೀಟರ್ ದೂರದಲ್ಲಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಕಾಲೇಜು ಆಡಳಿತ ಈ ನಿರ್ಧಾರ ತೆಗೆದುಕೊಂಡಿದೆ.
ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಸೋಮವಾರ ಸಂಜೆ ಬಾಲಕಿ ಸ್ನೇಹಿತನೊಂದಿಗೆ ದೇವಾಲಯ ದರ್ಶನ ಮುಗಿಸಿ ಪಾರ್ಕ್ಗೆ ಹೋಗಿದ್ದಳು. ಈ ವೇಳೆ ಪೊಲೀಸರ ಸೋಗಿನಲ್ಲಿ ಬಂದ ಮೂವರು ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ. ನಂತರ ಉದ್ಯಾನವನದ ಏಕಾಂತ ಪ್ರದೇಶಕ್ಕೆ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ.
ಆರೋಪಿಗಳನ್ನು ವಕೀಲ ಹೇಮಂತ್ ಮತ್ತು ಆತನ ಸಹೋದರ ಫೈನಲ್ ಈಯರ್ ಬಿಎಸ್ಸಿ ವಿದ್ಯಾರ್ಥಿ ಮುಖೇಶ್ ಎಂದು ಗುರುತಿಸಲಾಗಿದೆ. ಮೂವರನ್ನೂ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.




