ಪ್ರಗತಿ ವಾಹಿನಿ ಸುದ್ದಿ, ಅಹಮದಾಬಾದ್ –
ಅಹಮದಾಬಾದ್ ನ ವ್ಯಕ್ತಿಯೊಬ್ಬರಿಗೆ ತನ್ನ ಡಿಮೇಟ್ ಅಕೌಂಟ್ ಗೆ ಬಂದ ರಾಶಿ ರಾಶಿ ಹಣ ನೋಡಿ ಅಕ್ಷರಶಃ ಹೃದಯಸ್ಥಂಬನವಾಗುವುದೊಂದೇ ಬಾಕಿ. ಬಂದಿದ್ದು ಸಾವಿರವಲ್ಲ, ಲಕ್ಷವೂ ಅಲ್ಲ, ಬರೋಬ್ಬರಿ 11, 677 ಕೋಟಿ !
ಅಹಮದಾಬಾದ್ ನ ರಮೇಶ ಸಾಗರ್ ಅವರು ಕಳೆದ 5-6 ವರ್ಷಗಳಿಂದ ಶೇರು ವ್ಯವಹಾರ ನಡೆಸುತ್ತಿದ್ದಾರೆ. ಅವರು ಕೊಟಾಕ್ ಸೆಕ್ಯುರಿಟೀಸ್ ಸಂಸ್ಥೆಯಲ್ಲಿ ಡಿಮ್ಯಾಟ್ ಖಾತೆ ತೆರೆದಿದ್ದರು. ಇತ್ತೀಚೆಗೆ ಅವರ ಖಾತೆಗೆ ಸಂಸ್ಥೆಯವರ ಅಚಾತುರ್ಯದಿಂದ 11, 6,77 ಕೋಟಿ ರೂ. ಮೊತ್ತ ಜಮಾ ಆಗಿದೆ.
ಸುಮಾರು 8 ತಾಸುಗಳ ಕಾಲ ಅವರ ಖಾತೆಯಲ್ಲಿ ಈ ಹಣವಿತ್ತು. ಬಳಿಕ ಕೊಟಾಕ್ ಸೆಕ್ಯುರಿಟೀಸ್ ಈ ಹಣವನ್ನು ಮರಳಿ ಪಡೆದಿದೆ. ತಾಂತ್ರಿಕ ದೋಷದಿಂದ ಈ ರೀತಿ ಆಗಿದೆ ಎಂದು ಕೊಟಾಕ್ ಸೆಕ್ಯುರಿಟೀಸ್ ಸ್ಪಷ್ಟನೆ ನೀಡಿರುವುದಾಗಿ ರಮೇಶ ಸಾಗರ ಅಹಮದಾಬಾದ್ ನ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
5 ಲಕ್ಷ ಲಾಭ !
11 ಸಾವಿರ ಕೋಟಿ ಹಣದಲ್ಲಿ ರಮೇಶ ಸಾಗರ 2 ಕೋಟಿಯನ್ನು ಹೂಡಿಕೆ ಮಾಡಿದ್ದರು. ಅದರಿಂದ ಅವರಿಗೆ ಎಂಟು ತಾಸಿನಲ್ಲಿ 5 ಲಕ್ಷ ರೂ. ಲಾಭವೂ ಬಂದಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ದೇಶದಲ್ಲಿ ಇದೊಂದು ಉತ್ಪಾದನೆ ಸಾಧ್ಯವಾದರೆ 1 ಲಕ್ಷದ ಲ್ಯಾಪ್ ಟಾಪ್ 40 ಸಾವಿರಕ್ಕೆ ಸಿಗುತ್ತೆ
https://pragati.taskdun.com/latest/laptop-costreduce-1-lak-to-40-k/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ