ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ಅಮೆರಿಕದ ಚೆಸ್ ಆಟಗಾರ 19 ವರ್ಷದ ಹ್ಯಾನ್ಸ್ ನೀಮನ್ ಅವರು ಚೆಸ್ ಆಟಕ್ಕೆ ಸೆಕ್ಸ್ ಆಟಿಕೆ ಬಳಸಿದ ಆರೋಪಕ್ಕೆ ಗುರಿಯಾಗಿದ್ದಾರೆ.
ವಿಶ್ವ ನಂಬರ್ ಒನ್ ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಸೆಪ್ಟೆಂಬರ್ 4 ರಂದು ನಡೆದ ಪಂದ್ಯದ ವೇಳೆ ಗುದಮಣಿ (ಒಂದು ಬಗೆಯ ಸೆಕ್ಸ್ ಆಟಿಕೆ) ಬಳಕೆ ಮಾಡಿದ್ದಾರೆ ಎಂದು ದೂರಲಾಗಿದೆ.
ಆದರೆ ಸಾಮಾಜಿಕ ಜಾಲತಾಣದಲ್ಲಿನ ಆರೋಪಗಳನ್ನು ನೀರಾಕರಿಸಿರುವ ಹ್ಯಾನ್ಸ್ ನೀಮನ್, ಈ ಆರೋಪ ತಮ್ಮ ಉತ್ತಮ ಚಲನೆಗಳನ್ನು ಸಾಬೀತುಪಡಿಸುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇಷ್ಟಕ್ಕೇ ಬಿಡದೆ “ಇಂಥ ಆರೋಪಗಳಿಗೆ ನಾನು ಬಗ್ಗುವವನಲ್ಲ, ನಾನು ಬೆತ್ತಲೆಯಾಗಬೇಕು ಎಂದು ಅವರು ಬಯಸಿದರೆ ನಾನು ಅದನ್ನೇ ಮಾಡುತ್ತೇನೆ” ಎಂದು ಸವಾಲು ಕೂಡ ಎಸೆದಿದ್ದಾರೆ.
43 ವರ್ಷದಲ್ಲಿ 53 ಬಾರಿ ಮದುವೆಯಾದ ವ್ಯಕ್ತಿಗೀಗ ಮನಶಾಂತಿ ಬೇಕಂತೆ!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ