
ಪ್ರಗತಿವಾಹಿನಿ ಸುದ್ದಿ; ಅಮ್ರೋಹ: ಕಾನೂನು ಬಾಹಿರವಾಗಿ ಧರ್ಮ ಪರಿವರ್ತನೆ ಮಾಡಿದ ಆರೋಪಿಯೊಬ್ಬನಿಗೆ ಉತ್ತರ ಪ್ರದೇಶದ ನ್ಯಾಯಾಲಯ 5 ವರ್ಷ ಜೈಲು ಹಾಗೂ 40 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಉತ್ತರ ಪ್ರದೇಶ ಕಾನೂನುಬಾಹಿರ ಧರ್ಮ ಪರಿವರ್ತನೆಯ ನಿಷೇಧ ಕಾಯಿದೆ, 2021 ಕಾನೂನಿನಡಿಯಲ್ಲಿ ಶಿಕ್ಷೆ ನೀಡಲಾದ ಮೊದಲ ಪ್ರಕರಣ ಇದಾಗಿದೆ.
ಅಫ್ಜಲ್ (26) ಶಿಕ್ಷೆಗೊಳಗಾದ ಆರೋಪಿ. ಈತ ಅನ್ಯ ಧರ್ಮದ 16 ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ, ದೆಹಲಿಗೆ ಕೊಂಡೊಯ್ದು ಧರ್ಮ ಪರಿವರ್ತನೆ ಮಾಡಿಸಿದ್ದ.
ಹಸನಪುರ ಪೊಲೀಸ್ ಠಾಣೆಯ ತನಿಖಾಧಿಕಾರಿ,ಗಜೇಂದ್ರ ಪಾಲ್ ಸಿಂಗ್ ಹಾಗೂ ಅಮ್ರೋಹಾ ಪೊಲೀಸರು ಆರೋಪಿ ಅಫ್ಜಲ್‌ನನ್ನು 2021 ರ ಏಪ್ರಿಲ್ 4 ರಂದು ದೆಹಲಿಯಲ್ಲಿ ಬಂಧಿಸಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ತೀರ್ಪು ಪಕಟಿಸಿದ್ದಾರೆ.
ಚಿನ್ನದ ವ್ಯಾಪಾರಿಗಳ ಅಡ್ಡಗಟ್ಟಿ ನಗದು-ಬಂಗಾರ ದರೋಡೆ
https://pragati.taskdun.com/latest/belagavigokakgoldsmit-attackroberry/