Latest

ಆಯ್ಕೆಯಾದ ತಂಡ ಟೀಕಿಸಬೇಡಿ ಎಂದ ಸುನೀಲ್ ಗಾವಸ್ಕರ್

ಪ್ರಗತಿವಾಹಿನಿ ಸುದ್ದಿ, ಮುಂಬೈ: ಆಯ್ಕೆಯಾದ ಕ್ರಿಕೆಟ್ ತಂಡವನ್ನು ಟೀಕಿಸಬೇಡಿ, ಅದು ಆಟಗಾರರ ಮನೋಸ್ಥೈರ್ಯವನ್ನು ಕುಗ್ಗಿಸುತ್ತದೆ ಎಂದು  ಭಾರತ ತಂಡದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಕಿವಿಮಾತು ಹೇಳಿದ್ದಾರೆ.

ಕಳೆದ ವಾರ ವಿಶ್ವಕಪ್  T20 ಆಟಗಾರರ ಅಧಿಕೃತ ಪಟ್ಟಿ ಬಿಡುಗಡೆ ನಂತರ ಮಾಜಿ ಆಟಗಾರರಾದ ಮೊಹಮ್ಮದ್ ಅಜರುದ್ದೀನ್ ಮತ್ತು ದಿಲೀಪ್ ವೆಂಗ್‌ಸರ್ಕಾರ್ ಅವರ ಟೀಕೆಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ.

Home add -Advt

ಭಾರತ ತಂಡವನ್ನು ಆಯ್ಕೆ ಮಾಡಿದ ನಂತರ ಟೀಕೆ ಮಾಡಬಾರದು. ಅದು ಆಟಗಾರರ ಮನೋಸ್ಥೈರ್ಯವನ್ನು ಕುಗ್ಗಿಸುತ್ತದೆ ಎಂದು ಹೇಳಿದ್ದಾರೆ. “ಈ ತಂಡ ನಿಶ್ಚಿತವಾಗಿ ಟ್ರೋಫಿ  ತಂದುಕೊಡಲಿದೆ ಎಂಬ ನಂಬಿಕೆ ನನಗಿದೆ. ಇದು ನಮ್ಮ ಭಾರತ ತಂಡ ಮತ್ತು ನಾವೆಲ್ಲರೂ ಅದನ್ನು ಬೆಂಬಲಿಸಬೇಕು” ಎಂದು ಗವಾಸ್ಕರ್ ಹೇಳಿದ್ದಾರೆ.

ಮಾನ್ಯತೆ ಪಡೆಯದ ಮದ್ರಸಾಗಳ ಸಮೀಕ್ಷೆ ಸ್ವಾಗತಿಸಿದ ದಾರುಲ್ ಉಲೂಮ್

Related Articles

Back to top button