ಪ್ರಗತಿವಾಹಿನಿ ಸುದ್ದಿ, ಚಂಡಿಗಡ: ದೇಶಾದ್ಯಂತ ಭಾರೀ ಸದ್ದು ಮಾಡಿದ ಚಂಡಿಗಡ ವಿಶ್ವವಿದ್ಯಾಲಯದ ಹಾಸ್ಟೆಲ್ ವಿದ್ಯಾರ್ಥಿನಿಯರ ಸ್ನಾನ ಮಾಡುವ ದೃಷ್ಯದ ವಿಡಿಯೊ ಲೀಕ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
60 ವಿದ್ಯಾರ್ಥಿನಿಯರ ಸ್ನಾನ ಮಾಡುವ ದೃಶ್ಯ ಚಿತ್ರೀಕರಿಸಿ ಶಿಮ್ಲಾದಲ್ಲಿರುವ ಹುಡುಗನಿಗೆ ಕಳಿಸಿದ್ದಾಳೆಂಬ ಆರೋಪದಡಿ ಬಂಧನಕ್ಕೊಳಗಾಗಿದ್ದ ಬಾಲಕಿ ಕೇವಲ ತನ್ನ ವಿಡಿಯೊಗಳನ್ನು ಮಾತ್ರ ಆತನಿಗೆ ಕಳುಹಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.
ಹಾಸ್ಟೆಲ್ ನಲ್ಲಿರುವ ಇತರ ಹುಡುಗಿಯರು ಆಕೆ ತನ್ನ ವಿಡಿಯೊ ಚಿತ್ರೀಕರಿಸಿಕೊಳ್ಳುತ್ತಿರುವುದನ್ನು ನೋಡಿ ವಿಚಲಿತರಾಗಿದ್ದಲ್ಲದೆ ಎಲ್ಲರ ಸ್ನಾನದ ದೃಶ್ಯ ಚಿತ್ರೀಕರಿಸಿದ್ದಾಗಿ ತಪ್ಪು ಕಲ್ಪನೆಗೆ ಒಳಗಾದರು ಎಂದು ಸಹ ಪೊಲೀಸರು ಹೇಳಿದ್ದಾರೆ.
60 ವಿದ್ಯಾರ್ಥಿನಿಯರ ಸ್ನಾನದ ದೃಶ್ಯದ ವಿಡಿಯೊ ಲೀಕ್ ಆಗಿದೆ ಎಂದು ಆರೋಪಿಸಿ ವಿಶ್ವವಿದ್ಯಾಲಯದ ಹಾಸ್ಟೆಲ್ ವಿದ್ಯಾರ್ಥಿನಿಯರು ಶನಿವಾರ ಮಧ್ಯರಾತ್ರಿ ವಿವಿಯಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದರು. ನಂತರದಲ್ಲಿ ಪೊಲೀಸರು ಆರೋಪಿ ಬಾಲಕಿಯನ್ನು ವಶಕ್ಕೆ ಪಡೆದು ಕೇಸು ದಾಖಲಿಸಿದ್ದರು.
ಬೆಳಗಿನಜಾವ ಪ್ರತಿಭಟನೆ ಅಂತ್ಯ: ವಿಡಿಯೊ ಸೋರಿಕೆಯಾದ ಪ್ರಕರಣದಲ್ಲಿ ನ್ಯಾಯಯುತ ತನಿಖೆ ನಡೆಸುವುದಾಗಿ ಪೊಲೀಸರು, ಜಿಲ್ಲಾಡಳಿತ ಮತ್ತು ವಿಶ್ವವಿದ್ಯಾನಿಲಯ ಆಡಳಿತವು ಭರವಸೆ ನೀಡಿದ ನಂತರ ಚಂಡೀಗಢ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸೋಮವಾರ ಬೆಳಗಿನಜಾವ 3:30 ಕ್ಕೆ ಪ್ರತಿಭಟನೆಯನ್ನು ಅಂತ್ಯಗೊಳಿಸಿ ಪ್ರತಿಭಟನಾ ಸ್ಥಳವನ್ನು ಖಾಲಿ ಮಾಡಿದ್ದಾರೆ.
ನಮಿಬಿಯಾದಿಂದ ಭಾರತಕ್ಕೆ ಬಂದ ಚೀತಾಗಳ ಹೆಸರೇನು ಗೊತ್ತಾ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ