
ಪ್ರಗತಿವಾಹಿನಿ ಸುದ್ದಿ; ಮೈಸೂರು: ಎಫ್ ಡಿಎ ಹುದ್ದೆ ಕೊಡಿಸುವುದಾಗಿ ಹೇಳಿ ವಂಚಿಸಿದ್ದ ಪಿಎಸ್ ಐ ಅಶ್ವಿನಿಯವರನ್ನು ಅಮಾನತು ಮಾಡಿ ಮೈಸೂರು ಕಮಿಷನರ್ ಆದೇಶ ಹೊರಡಿಸಿದ್ದಾರೆ.
ಮೈಸೂರಿನ ನರಸಿಂಹರಾಜ ಸಂಚಾರಿ ಪೊಲೀಸ್ ಠಾಣೆ ಪಿಎಸ್ ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಶ್ವಿನಿ ಚಿಕ್ಕಲಗಿ ಗ್ರಾಮದ ಬಸವರಾಜ್ ಝಳಕಿ ಎಂಬುವವರಿಗೆ ವಂಚಿಸಿದ್ದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಮೈಸೂರು ನಗರ ಕಮಿಷನರ್ ಡಾ.ಚಂದ್ರಗುಪ್ತ, ಅಶ್ವಿನಿಯವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದ ಬಸವರಾಜ್ ಸಹೋದರ ಸಂಗಮೇಶ್ ಜೊತೆ ಅಶ್ವಿನಿ ಡೀಲ್ ಮಾಡಿದ್ದರು. ಪಿಎಸ್ ಐ ಅಶ್ವಿನಿ ಸಂಗಮೇಶ್ ಜೊತೆ ಹಣಕಾಸಿನ ವ್ಯವಹಾರದ ಬಗ್ಗೆ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. ತಂದೆ ಅಕೌಂಟ್ ಮೂಲಕ ಅಶ್ವಿನಿ ಹಣ ಪಡೆದಿದ್ದರು. 2020ರಲ್ಲಿ ನಡೆದಿದ್ದ ಪರೀಕ್ಷೆ ವೇಳೆ ಎಫ್ ಡಿಎ ಕೆಲಸ ಕೊಡಿಸುವುದಾಗಿ ಹೇಳಿ 15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಅಶ್ವಿನಿ, ಮುಂಗಡವಾಗಿ 2 ಲಕ್ಷ ಪಡೆದಿದ್ದರು.
ಜಮಖಂಡಿ ತಾಲೂಕಿನ ಆಲಗೂರು ನಿವಾಸಿಯಾಗಿರುವ ಅಶ್ವಿನಿ ಮೈಸೂರಿನಲ್ಲಿ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲಸ ಸಿಗದಿದ್ದಾಗ ಹಣ ವಾಪಸ್ ಕೇಳಿದ್ದಕ್ಕೆ ಅಶ್ವಿನಿ ಆವಾಜ್ ಹಾಕಿ ಬೆದರಿಸಿದ್ದರು. ಇದೀಗ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪಿಎಸ್ ಐ ಅಶ್ವಿನಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನವಿದೆ; ನೇರವಾಗಿ ಹೇಳಿಕೆ ನೀಡಿದ ಕೆ.ಎಸ್.ಈಶ್ವರಪ್ಪ
https://pragati.taskdun.com/politics/k-s-eshwarappareactionvidhanamandala-sessionabsence/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ