Latest

ಮಕ್ಕಳ ಕಳ್ಳಿ ಎಂದು ಅನುಮಾನ; ಮಾನಸಿಕ ಅಸ್ವಸ್ಥೆಗೆ ಗ್ರಾಮಸ್ಥರಿಂದ ಥಳಿತ

ಪ್ರಗತಿವಾಹಿನಿ ಸುದ್ದಿ; ವಿಜಯನಗರ: ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಮಕ್ಕಳ ಕಳ್ಳರ ಬಗ್ಗೆ ವದಂತಿ ಹಬ್ಬಿದ್ದು, ಆತಂಕದಲ್ಲಿರುವ ಹಳ್ಳಿಗರು ಕೆಲವೆಡೆ ಶಂಕಿತರ ಮೇಲೆ ಅನುಮಾನಗೊಂಡು ಹಲ್ಲೆ ನಡೆಸುತ್ತಿರುವ ಘಟನೆ ಬೆಳಕಿಗೆ ಬರುತ್ತಿವೆ. ಇಂತದ್ದೇ ಘಟನೆಯಲ್ಲಿ ಮಾನಸಿಕ ಅಸ್ವಸ್ಥೆಯನ್ನು ಗ್ರಾಮಸ್ಥರೆಲ್ಲ ಸೇರಿ ಥಳಿಸಿರುವ ಅಮಾಯಕ ಘಟನೆ ವಿಜಯನಗರದಲ್ಲಿ ನಡೆದಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿಯಲ್ಲಿ ಮಾನಸಿಕ ಅಸ್ವಸ್ಥೆಯನ್ನು ಮಕ್ಕಳ ಕಳ್ಳಿ ಎಂದು ಅನುಮಾನಗೊಂಡು ಗ್ರಾಮಸ್ಥರು ಥಳಿಸಿದ್ದಲ್ಲದೇ ಬಳಿಕ ಆಕೆಯನ್ನು ಕೂಡಿ ಹಾಕಿದ್ದಾರೆ.

ಮಹಿಳೆಯನ್ನು ಪ್ರಶಿಸಿದಾಗ ಆಕೆ ಯಾವುದೇ ಮಾತನಾಡದಿದ್ದಾಗ ಗ್ರಾಮಸ್ಥರ ಅನುಮಾನ ಇನ್ನೂ ಹೆಚ್ಚಿದ್ದು ಮನ ಬಂದಂತೆ ಆಕೆ ಮೇಲೆ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿಯುತ್ತಿದಂತೆ ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮಹಿಳೆಯನ್ನು ರಕ್ಷಿಸಿದ್ದಾರೆ.

ಬಳಿಕ ಸರ್ಕಾರಿ ಆಸ್ಪತ್ರೆಗೆ ಮಹಿಳೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಮಕ್ಕಳ ಕಳ್ಳರೆಂಬ ಅನುಮಾನದಲ್ಲಿ ಸಾರ್ವಜನಿಕರು ಅಮಾಯಕರ ಮೇಲೆ ಹಲ್ಲೆ ನಡೆಸದಂತೆಎಸ್ ಪಿ ಅರುಣ್ ಜಿಲ್ಲೆಯಲ್ಲಿ ಮನವಿ ಮಾಡಿದ್ದಾರೆ.

Home add -Advt

PSI ಅಶ್ವಿನಿ ಅನಂತಪುರ ಅಮಾನತು

https://pragati.taskdun.com/latest/psi-ashwinisuspendedfdacheating/

Related Articles

Back to top button