Kannada NewsKarnataka NewsLatest
ಬೆಳಗಾವಿಯಲ್ಲೊಂದು ಅಪರೂಪದ ತೀರ್ಪು; ಲೋಕಾಯುಕ್ತ ದಾಳಿಗೊಳಗಾಗಿದ್ದ ಅಂದಿನ ಸಾರಿಗೆ ಅಧಿಕಾರಿಗೆ 4 ವರ್ಷ ಕಠಿಣ ಶಿಕ್ಷೆ, 63 ಲಕ್ಷ ರೂ. ದಂಡ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಸಾರಿಗೆ ಅಧಿಕಾರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ 4 ವರ್ಷ ಕಠಿಣ ಶಿಕ್ಷೆ ಮತ್ತು 63 ಲಕ್ಷ ರೂ. ಭಾರಿ ಮೊತ್ತದ ದಂಡ ವಿಧಿಸಿ ತೀರ್ಪು ನೀಡಿದೆ.
ಪಿ. ಶಾಂತಕುಮಾರ ತಂದೆ ಮನ್ನಸ್ವಾಮಿ, ಎಆರ್‌ಟಿಓ ಆರ್‌ಟಿ, ಠಾಣೆ ಹುಮನಾಬಾದ ಜಿಲ್ಲಾ: ಬೀದರ್ ಇವರು ತಮ್ಮ ಸೇವಾ ಅವಧಿಯಲ್ಲಿ ಭ್ರಷ್ಟಾಚಾರ ಮತ್ತು ಲಂಚಗುಳಿತನದಿಂದ ಅಕ್ರಮ ಆಸ್ತಿಯನ್ನು ಸಂಪಾದಿಸಿದರ ಕುರಿತು ಗುಪ್ತ ಮಹಿತಿ ಕಲೆಹಾಕಿ ಆರ್.ಕೆ. ಪಾಟೀಲ್ ಪೊಲೀಸ್ ನಿರೀಕ್ಷಕರು, ಕರ್ನಾಟಕ ಲೋಕಾಯುಕ್ತ ಬೆಳಗಾವಿ ಇವರು ದಿನಾಂಕ: 03,05.2010 ರಂದು ಪ್ರಕರಣ ದಾಖಲಿಸಿಕೊಂಡಿದ್ದರು.
ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದರು. ನಂತರ ಆರ್. ಬಿ. ಹವಲ್ದಾರ ಪೊಲೀಸ್ ನಿರೀಕ್ಷಕರು, ಕರ್ನಾಟಕ ಲೋಕಾಯುಕ್ತ ಬೆಳಗಾವಿ ಅವರು ಮುಂದಿನ ತನಿಖೆ ಕೈಕೊಂಡು ಒಟ್ಟು ಆಸ್ತಿಯಲ್ಲಿ ರೂ.1,14,62,121/- ಮೌಲ್ಯದ ಅಕ್ರಮ ಆಸ್ತಿ ಹೊಂದಿದ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ 4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮೋಹನ ಪ್ರಭು ಅವರು ಆಪಾದಿತ ಅಧಿಕಾರಿ ಪಿ ಶಾಂತಕುಮಾರ ತಂದೆ ಮುನ್ನಸ್ವಾಮಿ (ಹಿಂದಿನ) ಎಆರ್‌ಟಿಓ, ಆರ್‌ಟಿಓ, ಠಾಣೆ ಹುಮನಾಬಾದ ಜಿಲ್ಲಾ: ಬೀದರ್ ಹಾಲಿ: ಪ್ಲಾಟ್ ನಂ 1998 ಆಂಜನೇಯನಗರ, ಜಿ:ಬೆಳಗಾವಿ ಅವರು ರೂ.63,00,000/- ಮೌಲ್ಯದ ಆಸ್ತಿಯನ್ನು ಭ್ರಷ್ಟಾಚಾರ ಮತ್ತು ಲಂಚಗುಳಿತನದಿಂದ ಸಂಪಾದಿಸಿರುತ್ತಾರೆಂದು ಪರಿಗಣಿಸಿ ಮಂಗಳವಾರ ತೀರ್ಪು ನೀಡಿದ್ದಾರೆ.
ಅಧಿಕಾರಿ ತಪ್ಪಿತಸ್ಥನೆಂದು ತೀರ್ಪು ನೀಡಿ ಆರೋಪಿಗೆ 4 ವರ್ಷ ಕಠಿಣ ಶಿಕ್ಷೆ ಮತ್ತು ರೂ.63,00,000/- ದಂಡ ವಿಧಿಸಿದೆ. ದಂಡದ ಹಣವನ್ನು ತುಂಬದೇ ಇದ್ದ ಪಕ್ಷದಲ್ಲಿ ಆರೋಪಿತನ ಹಾಗೂ ಆತನ ಹೆಂಡತಿಯ ಹೆಸರಿಯಲ್ಲಿರುವ ಚರ ಮತ್ತು ಚಿರಾಸ್ಥಿಗಳನ್ನು ಮುಟ್ಟುಗೋಲು ಹಾಕಲು ಆದೇಶ ಹೊರಡಿಸಿದ್ದಾರೆ.
ಅಂದಿನ ಪೊಲೀಸ್ ನಿರೀಕ್ಷಕ ಆರ್.ಕೆ. ಪಾಟೀಲ್ ಮತ್ತು ಪೊಲೀಸ್ ನಿರೀಕ್ಷಕ ಆರ್. ಬಿ. ಹವಲ್ದಾರ್, ಪ್ರಕರಣದ ತನಿಖೆ ಕೈಕೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕ ಪ್ರವೀಣ ಅಗಸಗಿ ನ್ಯಾಯಾಲಯದಲ್ಲಿ ಪ್ರಕರಣವನ್ನು ನಡೆಸಿ ವಾದ ಮಂಡಿಸಿದ್ದರು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಯಶೋಧಾ ವಂಟಗೋಡಿ ತಿಳಿಸಿದ್ದಾರೆ.
https://pragati.taskdun.com/politics/siddaramaiahcm-basavaraj-bommaividhanasabhe/
https://pragati.taskdun.com/belagavi-news/7-years-imprisonment-for-acceptingbribery-11062/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ