Kannada NewsKarnataka NewsLatest

ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಸನ್ಮಾನಿಸಿದ ಕಿರಣ ಜಾಧವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಸರಕಾರ ಮರಾಠಾ ನಿಗಮ ಮಂಡಳ ಯಶಸ್ವಿಯಾಗಿ ನಡೆಸುತ್ತಿರುವುದು ಹಾಗೂ ನವರಾತ್ರಿ ನಿಮಿತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಕಲ ಮರಾಠಾ ಸಮಾಜದ ಬೆಳಗಾವಿ ಆಯೋಜಕ, ಬಿಜೆಪಿ ರಾಜ್ಯ ಓಬಿಸಿ ಮೋರ್ಚಾ ಕಾರ್ಯದರ್ಶಿ ಕಿರಣ‌ ಜಾಧವ ಬೆಂಗಳೂರಿನ ಗೋಸಾಯಿ ಮಠ ಗವಿಪುರಂ ಮರಾಠಾ ಸಮಾಜದ ಶ್ರೀ ಮಂಜುನಾಥ ಸ್ವಾಮೀಜಿ ಸಮ್ಮುಖದಲ್ಲಿ ಸಮಸ್ತ ಮರಾಠಾ ಸಮುದಾಯದ ಪರವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಿರಣ್ ಜಾಧವ, ಮರಾಠಾ ಸಮಾಜದ ಅಭಿವೃದ್ಧಿ ಹಾಗೂ ಏಳಿಗೆಗೆಗಾಗಿ ರಾಜ್ಯ ಸರಕಾರ ಮರಾಠಾ ನಿಗಮ ಮಂಡಳ ಸ್ಥಾಪನೆ ಮಾಡಿ ಕೋಟ್ಯಂತರ ರೂ. ಅನುದಾನ ಮೀಸಲಿಟ್ಟಿದ್ದು ಸಂತಸದ ಸಂಗತಿ. ಜೊತೆ ಜೊತೆಗೆ ಮರಾಠಾ ಸಮಾಜದ ವಿದ್ಯಾರ್ಥಿಗಳಿಗಾಗಿ ಶಿಷ್ಯವೇತನ ಹೆಚ್ಚಳ ಮಾಡಬೇಕು ಎನ್ನುವ ಬೇಡಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರ ಮುಂದೆ ಇಟ್ಟರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು, ಮರಾಠಾ ಸಮಾಜ ಎಂದಿಗೂ ಸೋಲನ್ನು ಒಪ್ಪಿಕೊಂಡ ಸಮಾಜವಲ್ಲ. ರಾಷ್ಟ್ರ ರಕ್ಷಣೆಯಲ್ಲಿ ಸದಾ ಮುಂದೆ ಇರುವ ಸಮಾಜ ಎಂದರೆ ಮರಾಠಾ ಸಮಾಜ. ಶಿವಾಜಿ ಮಹಾರಾಜ ಹಾಗೂ ಸಂಭಾಜಿ ಮಹಾರಾಜ ಕೊಡುಗೆ ಅನನ್ಯವಾಗಿದೆ‌. ಕಿರಣ ಜಾಧವ ಅವರು ಮರಾಠಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹೆಚ್ಚಿಗೆ ಮಾಡುವ ವಿಷಯ ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ಅನುಷ್ಠಾನಗೊಳಿಸಲಾಗುವುದು ಎಂದು‌ ಭರವಸೆ ನೀಡಿದರು.

ಮರಾಠಾ ನಿಗಮ ಮಂಡಳ ಅಧ್ಯಕ್ಷ ಡಾ. ಎಂ.ಜಿ.ಮೂಳೆ, ಗಣೇಶ ಕೇಸರಕರ, ರೋಹಿತ್ ಸಾಠೆ, ಮನೋಜ‌ ಶಿಂಧೆ ಹಾಗೂ ಮರಾಠಾ‌ ಸಮಾಜದ ಮುಖ್ಯಸ್ಥರು ಉಪಸ್ಥಿತರಿದ್ದರು.

ಭಾರಿ ಹಿಮಪಾತ; 20 ಜನರ ದುರ್ಮರಣ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button