ಪ್ರಗತಿವಾಹಿನಿ ಸುದ್ದಿ, ಗುವಾಹತಿ: ಅಭಿಮಾನ ಅಳತೆ ಮೀರಿದಾಗಹ ಏನೆಲ್ಲ ಮಾಡಿಸಬಹುದು. ಅದಕ್ಕೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಈ ಅಭಿಮಾನಿಯೇ ಸಾಕ್ಷಿ.
ರಾಹುಲ್ ರಾಯ್ ಎಂಬ ಈತ ಕೊಹ್ಲಿ ಭೇಟಿಗಾಗಿ ಮಾಡಿದ ಸಾಹಸ ಸಣ್ಣದಲ್ಲ. ವಿಮಾನ ನಿಲ್ದಾಣದಲ್ಲಿ ಹಾಗೂ ಅಭ್ಯಾಸದ ವೇಳೆ ಕೊಹ್ಲಿಯನ್ನು ಭೇಟಿಯಾಗಲು ಪ್ರಯತ್ನಿಸಿದ್ದಾನೆ. ಸಾಧ್ಯವಾಗದ ಹಿನ್ನೆಲೆಯಲ್ಲಿ ಹೊಸ ಆಲೋಚನೆಯೊದನ್ನು ಹೆಣೆದಿದ್ದಾನೆ.
ಗುವಾಹಟಿಯಲ್ಲಿ ಟೀಂ ಇಂಡಿಯಾ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿಯೇ ಈತ ಒಂದು ರಾತ್ರಿಗೆ 23,400 ರೂ. ಕೊಟ್ಟು ರೂಮ್ ಪಡೆದಿದ್ದಾನೆ. ಇವನ ಈ ಅಭಿಮಾನಾತಿರೇಕ ಅರಿತ ವಿರಾಟ್ ಕೊಹ್ಲಿ ಹೋಟೆಲ್‌ನಲ್ಲಿ ತಮ್ಮನ್ನು ಭೇಟಿಯಾದ ರಾಹುಲ್ ರಾಯ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಹೊಸಬರಿಗೆ ನೀಡಿದ ಹಲವು ಆಫರ್ ಲೆಟರ್ ಗಳನ್ನು ವಾಪಸ್ ಪಡೆದ ಇನ್ಫೋಸಿಸ್, ಟೆಕ್ ಮಹೀಂದ್ರಾ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ