Latest

ಆಸ್ಪತ್ರೆ ಕಟ್ಟಡದಲ್ಲಿ ಅಗ್ನಿ ಅವಘಡ; ಮೂವರ ಸಾವು

 ಪ್ರಗತಿವಾಹಿನಿ ಸುದ್ದಿ, ಆಗ್ರಾ : ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಆರ್.ಮಧುರಾಜ್ ಆಸ್ಪತ್ರೆಯಲ್ಲಿ ಬುಧವಾರ ಅಗ್ನಿ ಅವಘಡ ಸಂಭವಿಸಿ ಆಸ್ಪತ್ರೆಯ ನಿರ್ವಾಹಕ ಡಾ.ರಾಜನ್ ಸಿಂಗ್, ಅವರ ಮಗ ರಿಷಿ ಮತ್ತು ಮಗಳು ಶಾಲು ಬೆಂಕಿಗೆ ಆಹುತಿಯಾಗಿದ್ದಾರೆ.

ಆರ್.ಮಧುರಾಜ್ ಆಸ್ಪತ್ರೆಯ ಮೊದಲ ಮಹಡಿಯ ಕೋಣೆಯಲ್ಲಿ ಇರಿಸಲಾಗಿದ್ದ ಹಾಸಿಗೆಗಳಲ್ಲಿ ಬೆಂಕಿ ಕಾಣಿಸಿಕೊಂಡಿತು. ಅದೇ ಮಹಡಿಯಲ್ಲಿ ಆಸ್ಪತ್ರೆಯ ಆಪರೇಟರ್ ಡಾ.ರಾಜನ್, ಅವರ ತಂದೆ ಗೋಪಿಚಂದ್, ಪತ್ನಿ ಮಧುರಾಜ್, ಮಗಳು ಶಾಲು, ಮಕ್ಕಳಾದ ಲಾವಿ ಮತ್ತು ರಿಷಿ ಮತ್ತು ಸಂಬಂಧಿ ತೇಜವೀರ್ ಇದ್ದರು.

ಗೋಪಿಚಂದ್ ಮತ್ತು ಲಾವಿ ಬೆಳಿಗ್ಗೆ 5 ಗಂಟೆಗೆ ಎಚ್ಚರಗೊಂಡಾಗ, ಅವರು ಮಲಗುವ ಕೋಣೆಯಲ್ಲಿ ಬೆಂಕಿ ನೋಡಿದ್ದು, ಹಾಸಿಗೆಗಳನ್ನು ಹೊರತೆಗೆಯಲು ಪ್ರಯತ್ನಿಸಿದರು. ಆದರೆ ಅಷ್ಟೊತ್ತಿಗಾಗಲೇ, ಬೆಂಕಿಯ ಹೊಗೆ ಒಳಭಾಗವನ್ನೆಲ್ಲ ಆವರಿಸಿಕೊಂಡಿತ್ತು ಎನ್ನಲಾಗಿದೆ.

ಡಾ. ರಾಜನ್, ಅವರ  ಹಿರಿಯ ಮಗ ಲಾವಿಯ ಸ್ಥಿತಿ ಗಂಭೀರವಾಗಿದ್ದು, ತಾಯಿ ಮಧುರಾಜ್ ಅಲಿಯಾಸ್ ರಾಜರಾಣಿ ಅಪಾಯದಿಂದ ಪಾರಾಗಿದ್ದಾರೆ.

ಎಲ್ ಇಡಿ ಟಿವಿ ಸ್ಪೋಟ ; 16 ರ ಬಾಲಕ ಸಾವು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button