Latest

ಸರಣಿ ಅಪಘಾತ ಸೃಷ್ಟಿಸಿದ ಕಾರು; 5 ಸಾವು; 12 ಜನರಿಗೆ ಗಾಯ

ಪ್ರಗತಿವಾಹಿನಿ ಸುದ್ದಿ, ಮುಂಬಯಿ: ಇಲ್ಲಿನ ಬಾಂದ್ರಾ-ವರ್ಲಿ ಸಮುದ್ರ ಬಳಿ ಕಾರೊಂದು ನಿಂತಿದ್ದ ಕಾರು ಮತ್ತು ಅಂಬ್ಯುಲೆನ್ಸ್ ಗೆ ಸರಣಿಯಾಗಿ ಹೊಡೆದ ಪರಿಣಾಮ  ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ.

ಬುಧವಾರ ಬೆಳಗಿನಜಾವ  3:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಅಪಘಾತದ ಸಂಭವಿಸುವ ಕೆಲವೇ ಹೊತ್ತು ಮುಂಚೆ ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡವರನ್ನು ಬಾಂದ್ರಾದ  ವರ್ಲಿ ಲೇನ್‍ ಆಸ್ಪತ್ರೆಗೆ  ಕರೆದೊಯ್ಯಲು ಅಂಬ್ಯುಲೆನ್ಸ್ ರಸ್ತೆ ಬದಿಯಲ್ಲಿ ನಿಲ್ಲಿಸಿ ಸಿದ್ಧತೆ ನಡೆಸಲಾಗುತ್ತಿತ್ತು. ಆದರೆ ಇದೇ ವೇಳೆ ಅತಿವೇಗವಾಗಿ ಬಂದ ಕಾರು ಈ ಅವಘಡಗಳಿಗೆ ಕಾರಣವಾಗಿದೆ. 

ಈ ಅಪಘಾತದ ದೃಶ್ಯಗಳು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದು ಅಪಘಾತದ ನಂತರ ಸ್ಥಳೀಯರ ನೆರವಿನಿಂದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಅಧಿಕಾರಿಗಳು ಬಾಂದ್ರಾದಿಂದ ವರ್ಲಿಗೆ ಹೋಗುವ ರಸ್ತೆ ಸಂಚಾರವನ್ನೇ ಸ್ಥಗಿತಗೊಳಿಸಿದ್ದಾರೆ.

ಆಸ್ಪತ್ರೆ ಕಟ್ಟಡದಲ್ಲಿ ಅಗ್ನಿ ಅವಘಡ; ಮೂವರ ಸಾವು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button