Kannada NewsLatest

ಸವದತ್ತಿ ಯಲ್ಲಮ್ಮ ಜಾತ್ರೆಯಲ್ಲಿ ಕಳುವು ಮಾಡಿದ್ದ ಅಂತಾರಾಜ್ಯ ಕಳ್ಳಿಯ ಬಂಧನ

ಪ್ರಗತಿವಾಹಿನಿ ಸುದ್ದಿ; ಸವದತ್ತಿ: ಸವದತ್ತಿಯ ಶ್ರೀ ರೇಣುಕಾ ದೇವಿ ಯಲ್ಲಮ್ಮನಗುಡ್ಡ ದೇವಸ್ಥಾನದ ಮಹಾನವಮಿ ಜಾತ್ರೆಯ ಸಂದರ್ಭದಲ್ಲಿ ಆಭರಣ ಕಳವು ಮಾಡಿದ್ದ ಕಳ್ಳಿಯನ್ನು ಸವದತ್ತಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ಸೆ. 30 ರಂದು ಧಾರವಾಡದ ಅನ್ನಪೂರ್ಣ ಮಹಾಂತಪ್ಪ ಸಂದಿಗವಾಡ ಅವರು ಯಲ್ಲಮ್ಮನಗುಡ್ಡದಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದರ್ಶನ ಮಾಡಲು ಸರದಿ ಸಾಲಿನಲ್ಲಿ ಹೋಗುತ್ತಿದ್ದಾಗ ಕಳ್ಳರು ಅವರ ಕೊರಳಲ್ಲಿದ್ದ 40 ಗ್ರಾಂ ತೂಕದ ಬಂಗಾರದ ಮಂಗಳಸೂತ್ರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಬೆಳಗಾವಿ ಅಡಿಷನಲ್ ಎಸ್ ಪಿ ಮಹಾನಿಂಗ ನಂದಗಾಂವಿ, ರಾಮದುರ್ಗ ಡಿಎಸ್ ಪಿ ರಾಮನಗೌಡ ಹಟ್ಟಿ, ಮಾರ್ಗದರ್ಶನದಲ್ಲಿ ಸವದತ್ತಿ ಪಿಐ ಕರುಣೇಶಗೌಡ, ಜೆ. ಪಿಎಸ್ ಐ ಮಲಕನಗೌಡ ಬಿ.ಬಿರಾದರ ಹಾಗೂ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಇಂದು ದಿನಾಂಕ: 04/10/2022 ರಂದು ಬೆಳಗಿನ ಜಾವ ಆರೋಪಿತಳನ್ನು ಬಂಧಿಸಿ ಅವಳಿಂದ ಕಳವು ಮಾಡಲಾಗಿದ್ದ 40 ಗ್ರಾಂ ತೂಕದ ಅಂದಾಜು 2,00,000/- ರೂ ಬೆಲೆಬಾಳುವ ಬಂಗಾರದ ಮಂಗಳಸೂತ್ರವನ್ನು ವಶಪಡಿಸಿಕೊಂಡಿದ್ದಾರೆಮ.

ಬಂಧಿತಳು ಜಾತ್ರೆ ಹಾಗೂ ಜನದಟ್ಟನೆ ಸ್ಥಳಗಳು, ಸಾರ್ವಜನಿಕರ ಕೊರಳಲ್ಲಿ ಮತ್ತು ಬ್ಯಾಗ್ ನಲ್ಲಿದ್ದ ಆಭರಣ ಮತ್ತು ಹಣವನ್ನು ಕಳವು ಮಾಡುತ್ತಿದ್ದಳು.

ಬಂಧಿತಳು ಮಹಾರಾಷ್ಟ್ರದ ಸೊಲ್ಲಾಪುರ ಮೂಲದವಳಾಗಿದ್ದು ಈಕೆಯ ಮೇಲೆ ಸೊಲ್ಲಾಪುರ ರೇಲ್ವೆ ಪೊಲೀಸ್ ಠಾಣೆಯಲ್ಲಿ 2, ಧಾರವಾಡ ರೇಲ್ವೆ ಪೊಲೀಸ್ ಠಾಣೆಯಲ್ಲಿ 2, ಕಲ್ಬುರ್ಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣೆಯಲ್ಲಿ 2, ಕಳ್ಳತನ ಪ್ರಕರಣಗಳಿವೆ. ಸೊಲ್ಲಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ಒಂದು ಸುಲಿಗೆ: ಪ್ರಕರಣದಲ್ಲೂ ಈಕೆಯ ಹೆಸರಿದೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಸವದತ್ತಿ ಠಾಣೆಯ ಸಿಬ್ಬಂದಿ ಎಮ್.ಎಮ್.ಸಂಗೊಳ್ಳಿ, ಎಚ್.ಬಿ.ವಾಸನ್ , ಎಮ್.ಪಿ.ತೇರದಾಳ, ಎ.ಎಸ್.ಕತ್ತಿ, ಪಿ.ಎಫ್ ಗೋವನಕೊಪ್ಪ, ಎಮ್.ಸಿ.ಮನ್ನಿಕೇರಿ, ಜಿ.ಎಸ್.ಪಾದೋ, ಎಮ್.ಟಿ ನಡುವಿನಮನೆ, ಎ.ಸಿ.ಕಾಪಸಿ ಮತ್ತು ಮಹಿಳಾ ಸಿಬ್ಬಂದಿ ಎನ್‌.ಆರ್.ಅಬ್ಬಾರ, ಎಸ್.ವಿ.ಹೊಸೂರ, ಎಸ್.ಎಸ್.ಹಂಪನ್ನವರ ಪಾಲ್ಗೊಂಡಿದ್ದರು.

ಆಯುಧ ಪೂಜೆ ಎಂದರೆ ಚಾಕು, ಕತ್ತರಿ ಪೂಜೆಯಲ್ಲ ಹೊಡೆದಾಟದ ಶಸ್ತ್ರಾಸ್ತ್ರ ಪೂಜಿಸುವುದು; ವಿಹೆಚ್ ಪಿ ಮುಖಂಡ ಗೋಪಾಲ್ ನಾಗರಕಟ್ಟೆ

https://pragati.taskdun.com/politics/belagaviayudha-poojegopal-nagara-kattevhp/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button