Kannada NewsLatestUncategorized

ಬೆಳಗಾವಿ ಬೈಕ್ ಕಳ್ಳತನ ಕೇಸ್; ಆರೋಪಿ ಅರೆಸ್ಟ್; 8 ಬೈಕ್ ಗಳು ವಶಕ್ಕೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಸರಹದ್ದಿನ ಕಮಲನಗರ ಗ್ರಾಮದ ಪಾಲ್ಗೊಫಾರ್ಮ ಮುಂದೆ ನಿಲ್ಲಿಸಿದ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿದ ಕಾರ್ಯಾಚರಣೆಯಲ್ಲಿ ಪೊಲೀಸರು 8 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಅರುಣ ಮುರಗುಂಡಿ, ಪಿಐ ಬೆಳಗಾವಿ ಗ್ರಾಮೀಣ ರವರ ನೇತೃತ್ವದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯವರ ತಂಡ ಸಂಶಯುಕ್ತ ಆರೋಪಿತನಾದ ಪರಶುರಾಮ ಸಣ್ಣಭೀಮಪ್ಪಾ (28) ಇತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಬೈಕ್ ಗಳನ್ನು ಕಳ್ಳತನ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

ಆರೋಪಿತನಿಂದ ಮೋಟಾರ ಸೈಕಲ್‌ಗಳ ನಂಬರ ಪ್ಲೇಟಗಳನ್ನು ಹಾನಿಗೊಳಿಸಿರುವ ಒಟ್ಟು ರೂ.3.50,000/- ಮೌಲ್ಯದ 08 ಮೋಟಾರ ಸೈಕಲ್‌ಗಳನ್ನು (01- ಹಿರೋ ಎಚ್‌ಎಫ್ ಡಿಲಕ್ಸ್, 05-ಹಿರೋಹೊಂಡಾ ಸೈಂಡರ್, 01-ಪಲ್ಸರ್ ಬೈಕ (220), 01-ಫ್ಯಾಶನ್ ಪ್ಲಸ್) ವಶಪಡಿಸಿಕೊಂಡು ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸಿ, ತನಿಖೆ ಮುಂದುವರೆಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಬೆಳಗಾವಿ ಗ್ರಾಮೀಣ ಠಾಣೆಯ ಪಿಐ, ಪಿಎಸ್‌ಐ ಹಾಗೂ ಸಿಬ್ಬಂದಿಯವರ ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತರು, ಬೆಳಗಾವಿ ನಗರ ಮತ್ತು ಡಿಸಿಪಿ ರವರುಗಳು ಶ್ಲಾಘಿಸಿರುತ್ತಾರೆ.

Home add -Advt
https://pragati.taskdun.com/cm-basavaraj-bommaireactionnandini-prodectamul/

Related Articles

Back to top button