Latest

ಶಸ್ತ್ರ ಪೂಜೆ ಹಾಗೂ ಶಾಸ್ತ್ರದ ಮಹತ್ವವನ್ನು ತಿಳಿದು ಹಿಂದೂ ರಾಷ್ಟ್ರದ ಸ್ಥಾಪನೆಗೆ ಸಂಘಟಿತರಾಗೋಣ: ರಮೇಶ್ ಶಿಂದೆ ಕರೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು : ಹಿಂದೂ ಜನಜಾಗೃತಿ ಸಮಿತಿಯು ದ್ವಿದಶಕ ಪೂರ್ಣಗೊಳಿಸಿದ ನಿಮಿತ್ತ ‘ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನ’ದ ಅಂತರ್ಗತ ಇಲ್ಲಿನ ಮಹಾಲಕ್ಷ್ಮೀ ಲೇಔಟ್ ನ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನದ ಸಭಾಗೃಹದಲ್ಲಿ ಸಾಮೂಹಿಕ ಶಸ್ತ್ರ ಪೂಜೆಯನ್ನು ಆಯೋಜಿಸಲಾಗಿತ್ತು.

ಗುರುರಾಜ್ ಶರ್ಮಾ ಇವರು ಸಾಮೂಹಿಕವಾಗಿ ಶಸ್ತ್ರಗಳ ಪೂಜೆಯನ್ನು ಮಾಡಿದರು. ನಂತರ ಸಂಕಟದ ಸಮಯದಲ್ಲಿ ಸ್ವತಃದ ಹಾಗೂ ಇತರರ ರಕ್ಷಣೆಯನ್ನು ಹೇಗೆ ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪ್ರಾತ್ಯಕ್ಷಿಕೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ರಮೇಶ್ ಶಿಂದೆ, ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದ್ ಗೌಡ, ರಾಜ್ಯ ವಕ್ತಾರರಾದ ಮೋಹನ್ ಗೌಡ ಮತ್ತಿತರರು ಉಪಸ್ಥಿತರಿದ್ದರು. ನೂರಾರು ಭಕ್ತಾದಿಗಳು ಈ ಕಾರ್ಯಕ್ರಮದ ಲಾಭ ಪಡೆದುಕೊಂಡರು.

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ರಮೇಶ್ ಶಿಂದೆ ಮಾತನಾಡಿ, ‘ಹಿಂದೂ ಧರ್ಮದಲ್ಲಿ ಶಸ್ತ್ರ ಹಾಗೂ ಶಾಸ್ತ್ರಗಳಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಔರಂಗಜೇಬನ ಕಾಲಾವಧಿಯಲ್ಲಿ ಶಸ್ತ್ರಗಳಿದ್ದವು. ಆಗ ನಾವು ನಮ್ಮ ರಕ್ಷಣೆ, ನಮ್ಮ ಧರ್ಮದ ರಕ್ಷಣೆ, ನಮ್ಮ ಪರಂಪರೆಯ ಮಾಡಿಕೊಳ್ಳಬಹುದಿತ್ತು. ಹಾಗಾಗಿಯೇ ಛತ್ರಪತಿ ಶಿವಾಜಿ ಮಹಾರಹಜರು ವಿಜಾಪುರದ ಆದಿಲಶಾಹಿಯ ರಾಜ್ಯದಲ್ಲಿ ಗೋಹತ್ಯೆ ಮಾಡುವ ಕಸಾಯಿಯವನ ಕೈಯನ್ನೇ ಕತ್ತರಿಸಿದ್ದರು. ಆ ಸಮಯದಲ್ಲಿಯೂ ಶಸ್ತ್ರಗಳ ಧಾರಣೆ ಮಾಡುವ ಅಧಿಕಾರವಿತ್ತು. ಆದರೆ ಇಂದು ಹಿಂದೂ ಸಮಾಜದಿಂದ ಆ ಶಾಸ್ತ್ರಗಳನ್ನು ಕಸಿದುಕೊಳ್ಳಲಾಗಿದೆ. 1978 ರಲ್ಲಿ ಬ್ರಿಟಿಷ್ ಅಧಿಕಾರಿ ಲಾರ್ಡ್ ಲಿಟ್ಟನ್ ನ ಅವಧಿಯಲ್ಲಿ ‘ಇಂಡಿಯನ್ ಆರ್ಮ್ ಆಕ್ಟ್’ ಎಂಬ ಕಾನೂನನ್ನು ರೂಪಿಸಲಾಗಿತ್ತು. ಈ ಕಾನೂನಿನ ಪ್ರಕಾರ ಹಿಂದೂಗಳು ತಮ್ಮ ಬಳಿ ಶಸ್ತ್ರವನ್ನು ಹಿಡಿದುಕೊಳ್ಳುವಂತಿರಲಿಲ್ಲ. ಒಂದು ವೇಳೆ ಶಸ್ತ್ರವನ್ನು ಇಟ್ಟುಕೊಂಡರೆ ಅವರ ಮೇಲೆ ಕಾನೂನಾತ್ಮಕ ಪ್ರಕರಣ ದಾಖಲಾಗುತ್ತಿತ್ತು. ಆದರೆ ಬ್ರಿಟಿಷರು, ಯೂರೋಪಿಯನ್ನರು ಶಸ್ತ್ರಗಳ ಉಪಯೋಗ ಮಾಡುತ್ತಿದ್ದರು. ಕೇವಲ ಭಾರತವನ್ನು ರಕ್ಷಣೆ ಮಾಡುವವರು, ಧರ್ಮ ರಕ್ಷಣೆಯನ್ನು ಮಾಡುವವರು ಶಸ್ತ್ರವನ್ನು ಇಟ್ಟುಕೊಳ್ಳಲು ನಿಷೇಧಿಸಲಾಗಿತ್ತು. 1978 ರಲ್ಲಿ ಜಾರಿಗೆ ಬಂದ ಈ ಕಾನೂನು ಇಂದಿಗೂ ಚಾಲನೆಯಲ್ಲಿದೆ. ಇದರಿಂದ ನಾವು ನಮ್ಮ ಪರಿವಾರದ ರಕ್ಷಣೆಗಾಗಿಯೂ ಶಸ್ತ್ರವನ್ನು ಇಟ್ಟುಕೊಳ್ಳುವಂತಿಲ್ಲ. ಈ ಪ್ರಕಾರ ಹಿಂದೂಗಳನ್ನು ಶಸ್ತ್ರ ರಹಿರ ಹಾಗೂ ಶಾಸ್ತ್ರರಹಿತರನ್ನಾಗಿ ಮಾಡಲಾಗಿದೆ. ಇಂದು ಎಲ್ಲಿಯೂ ಶಾಸ್ತ್ರಗಳ ಬಗ್ಗೆ ಹೇಳಿಕೊಡುತ್ತಿಲ್ಲ. ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟು ಇಂದು ಶಸ್ತ್ರ ಹಾಗೂ ಶಾಸ್ತ್ರಗಳ ಅವಶ್ಯಕತೆಯನ್ನು ತಿಳಿದುಕೊಳ್ಳಬೇಕಿದೆ. ಇದೇ ಉದ್ದೇಶದಿಂದ ಇಂದು ಸಾಮೂಹಿಕ ಶಸ್ತ್ರ ಪೂಜೆಯನ್ನು ಮಾಡಲಾಗುತ್ತಿದೆ. ಹಾಗಾಗಿ ಈ ರಾಷ್ಟ್ರವನ್ನು ಸುರಕ್ಷಿತವಾಗಿಡಲು, ಹಿಂದೂ ರಾಷ್ಟ್ರವನ್ನಾಗಿಸಲು ಶಸ್ತ್ರದ ಅವಶ್ಯಕತತೆಯಿದೆ. ‘ಅಹಿಂಸೆಯ ತತ್ವ’ ವನ್ನು ಮರೆತು ಶಸ್ತ್ರ ಪೂಜೆ ಹಾಗೂ ಶಾಸ್ತ್ರದ ಮಹತ್ವವನ್ನು ತಿಳಿದು ಹಿಂದೂ ರಾಷ್ಟ್ರದ ಸ್ಥಾಪನೆಗೆ ಸಂಘಟಿತರಾಗೋಣ’ ಎಂದು ಕರೆ ನೀಡಿದರು.

ಇನ್ನು ಹಿಂದೂ ರಾಷ್ಟ್ರ ಸ್ಥಾಪನೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಗುರುಪಪ್ರಸಾದ್ ಗೌಡ

ಸಮಾಜದಲ್ಲಿ ಹಿಂದೂ ರಾಷ್ಟದ ಕುರಿತು ಜಾಗೃತಿಯನ್ನು ಮಾಡಿಸುವಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಮಹತ್ವಪೂರ್ಣ ಪಾತ್ರವನ್ನು ವಹಿಸಿದೆ. ಇಂದು ಹಿಂದೂ ಸಮಾಜವು ಧರ್ಮಶಿಕ್ಷಣದಿಂದ ವಂಚಿತವಾಗಿದೆ. ಸಮಿತಿಯ ವತಿಯಿಂದ 350 ಕ್ಕೂ ಹೆಚ್ಚು ಕಡೆಗಳಲ್ಲಿ ಉಚಿತವಾಗಿ ಧರ್ಮಶಿಕ್ಷಣ ವರ್ಗಗಳನ್ನು ನಡೆಸಲಾಗುತ್ತಿದೆ. 3000 ಕ್ಕೂ ಹೆಚ್ಚು ಧರ್ಮಪ್ರೇಮಿಗಳು ಈ ವರ್ಗಗಳಿಂದ ತಿಳಿದುಕೊಂಡು ಧರ್ಮಾಚರಣೆಯನ್ನು ಮಾಡಲು ಪ್ರಾರಂಭಿಸಿದ್ದಾರೆ. 2007 ರಿಂದ ಇಲ್ಲಿಯ ತನಕ 2000 ಕ್ಕೂ ಹೆಚ್ಚು ಧರ್ಮಜಾಗೃತಿ ಸಭೆಗಳನ್ನು ಆಯೋಜಿಸಲಾಗಿದೆ. ಈ ಸಭೆಗಳ ಮಾಧ್ಯಮದಿಂದ 20 ಲಕ್ಷಕ್ಕೂ ಹೆಚ್ಚು ಹಿಂದೂಗಳು ಜಾಗೃತರಾಗಿದ್ದಾರೆ. ಈ ರೀತಿಯಲ್ಲಿ ಇನ್ನು ಅತೀ ಶೀಘ್ರದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿದ್ದು, ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದು ಗುರುಪ್ರಸಾದ್ ಗೌಡ ಇವರು ಹೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರೂ ಪ್ರತಿಜ್ಞೆಯನ್ನು ಮಾಡುವ ಮೂಲಕ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂಕಲ್ಪವನ್ನು ಮಾಡಿದರು.

ಆಯುಧ ಪೂಜೆ ಎಂದರೆ ಚಾಕು, ಕತ್ತರಿ ಪೂಜೆಯಲ್ಲ ಹೊಡೆದಾಟದ ಶಸ್ತ್ರಾಸ್ತ್ರ ಪೂಜಿಸುವುದು; ವಿಹೆಚ್ ಪಿ ಮುಖಂಡ ಗೋಪಾಲ್ ನಾಗರಕಟ್ಟೆ

https://pragati.taskdun.com/politics/belagaviayudha-poojegopal-nagara-kattevhp/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button