ಸಂಕೇಶ್ವರ ಹಾಗೂ ಹುಕ್ಕೇರಿಯಲ್ಲಿ ಒಳಚರಂಡಿ ನಿರ್ಮಾಣಕ್ಕೆ 168.27 ಕೋಟಿ ಬಿಡುಗಡೆ; ರಮೇಶ ಕತ್ತಿ ಮಾಹಿತಿ
ಪ್ರಗತಿವಾಹಿನಿ ಸುದ್ದಿ; ಹುಕ್ಕೇರಿ: ತಾಲೂಕಿನ ಸಂಕೇಶ್ವರ ಹಾಗೂ ಹುಕ್ಕೇರಿ ಪಟ್ಟಣ ಸೇರಿದಂತೆ ಯುಜಿಡಿ ( ಒಳಚರಂಡಿ) ನಿರ್ಮಾಣಕ್ಕೆ 168.27 ಕೋಟಿ ಹಣ ಬಿಡುಗಡೆಯಾಗಿದ್ದು ಒಳಚರಂಡಿ ಮಾಡುವುದಕ್ಕೆ ಎರಡು ಪಟ್ಟಣಗಳ ಸಾರ್ವಜನಿಕರು ಸಹಕಾರ ನೀಡಬೇಕೆಂದು ಮಾಜಿ ಸಂಸದರು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ಸೋಮವಾರ ಪಟ್ಟಣದ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ಕ್ಷೇತ್ರದ ಸಾರ್ವಜನಿಕರ ಕುಂದುಕೊರತೆ ಆಲಿಸಿ ಮಾತನಾಡಿದರು. ಪಟ್ಟಣಗಳು ಬೆಳದಂತೆ ಕೊಳಚೆ ನೀರು ಅತಿ ದೊಡ್ಡ ಸಮಸ್ಯೆಯಾಗುತ್ತಿದೆ ಸ್ಪೇಟಿಕ್ ಟ್ಯಾಂಕ್ ಮಾಡಲಾಗಿದ್ದರೂ ಮಣ್ಣಿನ ಗುಣವಾಗಿ ಪೂರ್ಣವಾಗಿ ನೀರು ಇಂಗುತ್ತಿಲ್ಲ ಈ ಸಮಸ್ಯೆಗಳನ್ನು ಮನಗೊಂಡು ಸಹೋದರ ಸಚಿವ ಉಮೇಶ ಕತ್ತಿ ಅವರು ಯುಜಿಡಿ ನಿರ್ಮಾಣಕ್ಕಾಗಿ ಹುಕ್ಕೇರಿ ಪಟ್ಟಣಕ್ಕೆ 69ಕೋಟಿ ಸಂಕೇಶ್ವರ ಪಟ್ಟಣಕ್ಕೆ 99.27 ಕೋಟಿ ಹಣ ಮಂಜೂರು ಮಾಡಿದ್ದರು. ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ತಾಲೂಕಿನಲ್ಲಿ ಸರ್ಕಾರಿ ಶಾಲೆಗಳು ಉಳಿದು ಬೆಳೆಯಬೇಕಾದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅವಶ್ಯವಾಗಿದೆ. ಕ್ಷೇತ್ರದಲ್ಲಿ 584 ಶಿಕ್ಷಕರ ಕೊರತೆ ಇದ್ದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುತುವರ್ಜಿವಹಿಸಿ ಶಿಕ್ಷಕರ ಕೊರತೆಯನ್ನು ಸರಿಪಡಿಸಿಬೇಕು. ಕೇಲವು ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 24 ಆರೋಗ್ಯ ದಾದಿಯರ ಕೊರೆತೆ ಇರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಗಳಾಗತ್ತಿವೆ. ಇವುಗಳನ್ನು ಸರಿಪಡಿಸಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಲೋಕಪಯೋಗಿ ಇಲಾಖೆ ಪಂಚಾಯತ ರಾಜ್ಯ ಇಲಾಖೆಯಿಂದ ನೂತನ ರಸ್ತೆಗಳಾಗಿದ್ದು ಆದರೆ ಇಲ್ಲಿ ಮುಂದಿನ ಊರುಗಳನ್ನು ಸೂಚಿಸುವ ನಾಮಫಲಕವಿಲ್ಲದೆ ಪ್ರಯಾಣಿಕರು ದಾರಿ ತಪ್ಪುತ್ತಿದ್ದಾರೆ. ಇವುಗಳನ್ನು ಪರೀಶಿಲಿಸಿ ಶೀಘ್ರದಲ್ಲಿ ನಾಮಫಲಕಗಳನ್ನು ಅಳವಡಿಸಿ ಪ್ರಯಾಣಿಕರಿಗೆ ಅನೂಕೂಲ ಮಾಡಿಕೂಡಬೇಕೆಂದು ಲೋಕಪಯೋಗಿ ಇಲಾಖೆ ಕಾರ್ಯಕಾರಿ ಅಭಿಯಂತರ ಗೀರಿಶ ದೇಸಾಯಿ ಅವರಿಗೆ ಸೂಚಿಸಿದರು.
ಸಹೋದರ ಸಚಿವ ಉಮೇಶ ಕತ್ತಿ ಅವರ ನೆರವಿನಿಂದ ಕ್ಷೇತ್ರದ ಅಭಿವೃದ್ದಿಗೆ ಸರ್ಕಾರದಿಂದ ಬಿಡುಗಡೆಯಾದ ಒಟ್ಟು 626 ಕೋಟಿ ರೂ ಗಳಲ್ಲಿ ಕೇಲವು ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿವೆ ಹಾಗೂ ಇನ್ನೂ ಕೇಲವು ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೇರಿಸಬೇಕಾಗಿದ್ದು ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ನೇರವೆರಿಸಲಾಗುವುದು ಅದಕ್ಕೆ ದಿನಾಂಕ ನಿಗದಿಪಡಿಸಲಾಗುತ್ತಿದೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಎಕೆ ಪಾಟೀಲ, ಉಪಾಧ್ಯಕ್ಷ ಆನಂದ ಗಂಧ, ಬಿಜೆಪಿ ರೈತ ಮುರ್ಚಾ ಅಧ್ಯಕ್ಷ ಸತ್ಯಪ್ಪ ನಾಯಿಕ, ಬಿಜೆಪಿ ಮಂಡಲ ಅಧ್ಯಕ್ಷ ರಾಚಯ್ಯ ಹಿರೇಮಠ, ಪುರಸಭೆ ಸದಸ್ಯ ರಾಜು ಮುನ್ನೋಳಿ, ಮುಖಂಡರಾದ ಗುರು ಕುಲಕರ್ಣಿ, ಭೀಮಗೌಡ ಪಾಟೀಲ, ತಹಶೀಲ್ದಾರ ಡಾ, ಡಿಎಚ್ ಹೂಗಾರ, ತಾ.ಪಂ ಕಾರ್ಯನಿರ್ವಾಕ ಅಧಿಕಾರಿ ಉಮೇಶ ಸಿದ್ನಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ತಾಲೂಕಾ ಆರೋಗ್ಯ ಅಧಿಕಾರಿ ಡಾ. ಉದಯ ಕುಡಚಿ, ಲೋಕಪಯೋಗಿ ಇಲಾಖೆ ಸಹಾಯಕ ಅಭಿಯಂತರ ಪ್ರಭಾಕರ ಕಾಮತ, ಕೃಷಿ ಅಧಿಕಾರಿ ಎಮ್ ಎಸ್ ಪಟಗುಂದಿ, ಮತ್ತಿತರರು ಉಪಸ್ಥಿತರಿದ್ದರು.
ದಿ ಉಮೇಶ ಕತ್ತಿ ನಿವಾಸಕ್ಕೆ ಬಿ.ಎಲ್.ಸಂತೋಷ್ ಭೇಟಿ
https://pragati.taskdun.com/politics/b-l-santoshramesh-kattiumesh-katti-home/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ