ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಂದು 1892ರ ಅಕ್ಟೋಬರ್ 22. ಬೆಳಗಿನ ಜಾವ 6 ರ ಸುಮಾರಿಗೆ ನಗರದ ಹೃದಯ ಭಾಗದಲ್ಲಿರುವ ಪ್ರಸಿದ್ಧ ವಕೀಲರಾದ ಸದಾಶಿವ ಬಾಲಕೃಷ್ಣ ಭಾಟೆಯವರ ಮನೆಯ ಬಾಗಿಲನ್ನು ಯಾರೋ ಬಡಿದಂತಾಯಿತು.
ಹೊರಗೆ ಬಂದು ನೋಡಿದರೆ ಕಣ್ಮನ ಸೆಳೆಯುವ ವ್ಯಕ್ತಿ! ಬೆಳಗಾವಿ ಬೆಳಗಲು ಬಂದ ಬೆಳಕು ! ಅವರೇ ಸ್ವಾಮಿ ವಿವೇಕಾನಂದರು! ಭಾಟೆಯವರ ಮನೆಯಲ್ಲಿ ಸ್ವಾಮೀಜಿಯವರು 3 ದಿನಗಳ ಕಾಲ ತಂಗಿದ್ದರು. ಇಂದು ಈ ಮನೆ `ಸ್ವಾಮಿ ವಿವೇಕಾನಂದ ಸ್ಮಾರಕ’ ಎಂಬ ಹೆಸರಿನಿಂದ ಒಂದು ಐತಿಹಾಸಿಕ ಸ್ಥಳವಾಗಿ ನಿರ್ಮಾಣಗೊಂಡು ವೀರ ಸನ್ಯಾಸಿಯ ಆ ಹೆಜ್ಜೆಗಳನ್ನು ನೆನಪಿಸುತ್ತಿದೆ.
ಇಲ್ಲಿ ಸ್ವಾಮೀಜಿಯವರು ಉಪಯೋಗಿಸಿದ ಮಂಚ, ಕೋಲು ಮತ್ತು ಕನ್ನಡಿಯನ್ನು ಸಂರಕ್ಷಿಸಿ
ಇರಿಸಲಾಗಿದೆ. ಸ್ವಾಮಿ ವಿವೇಕಾನಂದರ ಕುರಿತಾದ ಚಿತ್ರಕಲಾ ಪ್ರದರ್ಶನವನ್ನು ಸಜ್ಜುಗೊಳಿಸಲಾಗಿದೆ. ಪ್ರತಿ ವರ್ಷ ಅಕ್ಟೋಬರ್ 16ರಂದು ಈ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಅಂತೆಯೇ ಈ ಬಾರಿಯ ಅಕ್ಟೋಬರ 16 ರಂದು ಸಹ ರಿಸಾಲ್ದಾರ್ ಗಲ್ಲಿಯಲ್ಲಿರುವ ‘ಸ್ವಾಮಿ ವಿವೇಕಾನಂದ ಸ್ಮಾರಕ’ಕ್ಕೆ ಭೇಟಿ ನೀಡಿ ಸ್ವಾಮಿ ವಿವೇಕಾನಂದರಿಗೆ ಪ್ರಣಾಮಗಳನ್ನು ಸಲ್ಲಿಸಿ, ಪ್ರಸಾದ ಸ್ವೀಕರಿಸಲು ಬೆಳಗಾವಿಯ ಜನತೆಗೆ ಸಂಘಟಕರು ಮುಕ್ತ ಆಹ್ವಾನ ನೀಡಿದ್ದಾರೆ.
ಸಂಜೆ 5.55 ರಿಂದ ರಾತ್ರಿ 8.30 ರವರೆಗೆ ವಿಶೇಷ ಸತ್ಸಂಗ ಮತ್ತು ಸಾಂಸ್ಕೃತಿಕ
ಕಾರ್ಯಕ್ರಮ ಆಯೋಜಿಸಲಾಗಿದೆ. ಭಾರತದಾದ್ಯಂತ ಸುಮಾರು 400 ಕಾರ್ಯಕ್ರಮಗಳನ್ನು ನೀಡಿರುವ ಕಲಾಕಾರ ದಾಮೋದರ ರಾಮದಾಸಿ ಅವರು ‘ಯೋದ್ಧಾ ಸಂನ್ಯಾಸಿ ಸ್ವಾಮಿ ವಿವೇಕಾನಂದ’ ಎಂಬ ವಿಷಯ ಕುರಿತು ಮರಾಠಿಯಲ್ಲಿ ‘ಏಕಪಾತ್ರ ಅಭಿನಯ’ ಪ್ರಸ್ತುತ ಪಡಿಸಲಿದ್ದಾರೆ.
PSI ನೇಮಕಾತಿ ಅಕ್ರಮ; ಮತ್ತೆ ಮೂವರು ಅರೆಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ