ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮತಾಂತರ ನಿಷೇಧ ಕಾಯ್ದೆ ಜಾರಿಯಾದ ಬಳಿಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಸೈಯದ್ ಮೊಯಿನ್ (24) ಬಂಧಿತ ಆರೋಪಿ. ಯುವತಿಯನ್ನು ಪ್ರೀತಿಸಿ ಬಳಿಕ ಮದುವೆಯಾಗಬೇಕೆಂದರೆ ಮತಾಂತರವಾಗಲೇಬೇಕು ಎಂದು ಬಲವಂತದಿದ ಮತಾಂತರಕ್ಕೆ ಯತ್ನಿಸಿದ್ದ ಹಿನ್ನೆಲೆಯಲ್ಲಿ ಆರೋಪಿ ಸೈಯದ್ ಮೊಯಿನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಆರಂಭದಲ್ಲಿ ಯುವತಿ ಪೋಷಕರು ಇದನ್ನು ಯುವತಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ನತಿಖೆ ನಡೆಸಿದ ಪೊಲೀಸರಿಗೆ ಇದು ಮತಾಂತರ ಪ್ರಕರಣ ಎಂದು ತಿಳಿದುಬಂದಿದೆ.
ಯುವತಿ ಕುಟುಂಬ ಕಳೆದ 15 ವರ್ಷಗಳಿಂದ ಯಶವಂತಪುರದಲ್ಲಿ ವಾಸವಾಗಿತ್ತು. ಪಕ್ಕದ ಏರಿಯಾದ ಯುವಕನನ್ನು ಯುವತಿ ಪ್ರೀತಿಸಿದ್ದಳು. ಪ್ರೀತಿ ಬಳಿಕ ಯುವಕ ಮದುವೆಯಾಗಬೇಕೆಂದರೆ ತನ್ನ ಧರ್ಮಕ್ಕೆ ಯುವತಿ ಮತಾಂತರವಾಗಬೇಕು ಎಂದು ಹೇಳಿದ್ದ. ಇದರಿಂದ ಬಲವಂತದಿಂದ ಯುವತಿ ಮತಾಂತರಗೊಂಡಿದ್ದಳು ಎಂದು ತಿಳಿದುಬಂದಿದೆ. ಅ.5ರಿಂದ ಯುವತಿ ಕಾಣೆಯಾಗಿದ್ದಳು. ಹಾಗಾಗಿ ಯುವತಿ ಪೋಷಕರು ಯಶವಂತಪುರ ಠಾಣೆಯಲ್ಲಿ ದೂರು ನೀಡಿದ್ದರು.
ಯುವತಿಯನ್ನು ಪತ್ತೆ ಮಾಡಿ ಕರೆ ತರುವಾಗ ಆಕೆ ಬುರ್ಖಾ ಧರಿಸಿದ್ದನ್ನು ನೋಡಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಬಾಲಕಿ ಹತ್ಯೆ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್
https://pragati.taskdun.com/latest/mandyagirl-murder-casetwist/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ