Latest

ರಾಜ್ಯಾದ್ಯಂತ ಪರೀಕ್ಷೆಗಳನ್ನು ಮುಂದೂಡಿ ಶಿಕ್ಷಣ ಇಲಾಖೆ ಆದೇಶ

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಶಾಲೆಗಳ ಮಧ್ಯಂತರ ರಜೆ ಅವಧಿಯನ್ನು ಸರಕಾರ ಈ ಮೊದಲೇ ನಿರ್ಧರಿಸಿದಂತೆ ಭಾನುವಾರ (ಅ.16) ವೇ ಅಂತ್ಯಗೊಳಿಸಿದ್ದು, ಪರೀಕ್ಷೆಗಳನ್ನು ಮುಂದೂಡಿ ಆದೇಶ ಹೊರಡಿಸಿದೆ.

ದಸರಾ ರಜೆಯನ್ನು 15 ದಿನಗಳಿಗೇ ಸೀಮಿತಗೊಳಿಸಿ, ಅ.17ರಿಂದಲೇ ಶಾಲೆಗಳನ್ನು ಪುನಾರಂಭಿಸಲು ನಿರ್ಧರಿಸಲಾಗಿದೆ. ಆದರೆ 17ರಿಂದ 25ರ ವರೆಗೆ ನಡೆಸಲು ಉದ್ದೇಶಿಸಿದ್ದ ಮೊದಲ ಸಂಕಲನಾತ್ಮಕ ಪರೀಕ್ಷೆಗಳನ್ನು 1ರಿಂದ 10ನೇ ತರಗತಿ) ಮುಂದೂಡಲಾಗಿದೆ.

ಪರಿಷ್ಕೃತ ವೇಳಾಪಟ್ಟಿಯಂತೆ ನವೆಂಬರ್ 3ರಿಂದ 10ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಕಲಿಕಾ ಪ್ರಕ್ರಿಯೆ ಅನುಪಾಲನಾ ಕೊರತೆ ಮತ್ತು ಮಕ್ಕಳಿಗೆ ಪರೀಕ್ಷೆಗೆ ಮಾನಸಿಕವಾಗಿ ಸಿದ್ದವಾಗಲು ಕಾಲಾವಕಾಶ ಬೇಕಿರುವುದರಿಂದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ.

Home add -Advt

ಪರೀಕ್ಷೆ ವೇಳಾಪಟ್ಟಿ ಇಲ್ಲಿದೆ – 

ಅರಮನೆ ಗೊಂಬೆ ಪ್ರದರ್ಶನಕ್ಕೆ ಗೌರವ ಸಮರ್ಪಣೆ

https://pragati.taskdun.com/latest/mysoru-dasaragombe-pradarshanadeepalankara/

Related Articles

Back to top button