Kannada NewsKarnataka NewsLatest

ಮೈಸೂರಿಗೆ ಬರುವ ಪ್ರವಾಸಿಗರು ತ್ರಿವೇಣಿ ಸಂಗಮಕ್ಕೆ ಬರುವಂತಾಗಲಿ -ಹುಕ್ಕೇರಿ ಶ್ರೀಗಳು

 ಪ್ರಗತಿವಾಹಿನಿ ಸುದ್ದಿ, ತ್ರಿವೇಣಿ ಸಂಗಮ – ಮೈಸೂರಿಗೆ ಬರುವ ಪ್ರವಾಸಿಗರು ಮಂಡ್ಯ ಜಿಲ್ಲೆಯ ಅಂಬಿಗರ ಹಳ್ಳಿಯಲ್ಲಿರುವ ತ್ರಿವೇಣಿ ಸಂಗಮಕ್ಕೆ ಬರುವಂತಾಗಲಿ. ತ್ರಿವೇಣಿ ಸಂಗಮದ ಅಭಿವೃದ್ಧಿಗೆ ಮೂಲಭೂತ ಸೌಕರ್ಯವನ್ನು ಸರಕಾರ ಇನ್ನು ಹೆಚ್ಚು ಒದಗಿಸಲಿ ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನಲ್ಲಿರುವ ಅಂಬಿಗರ ಹಳ್ಳಿ ತ್ರಿವೇಣಿ ಸಂಗಮದ ಮಹಾ ಕುಂಭಮೇಳದಲ್ಲಿ ಸಾನಿಧ್ಯವನ್ನು ವಹಿಸಿ ಮಾತನಾಡಿದರು
ಇವತ್ತು ನಾವೆಲ್ಲರೂ ತ್ರಿವೇಣಿ ಸಂಗಮ ಎಂದರೆ ಪ್ರಯಾಗಕ್ಕೆ ಹೋಗುತ್ತೇವೆ. ಅದು ಸರಿ, ಆದರೆ ನಮ್ಮ ಕರ್ನಾಟಕದಲ್ಲಿರುವ ಅಪರೂಪದ ತ್ರಿವೇಣಿ ಸಂಗಮ ಅಂಬಿಗರ ಹಳ್ಳಿಯಲ್ಲಿದೆ. ಸುಮಾರು ಐದು ಕೋಟಿಗಿಂತ ಹೆಚ್ಚು ಖರ್ಚು ಮಾಡಿ ಮಹಾಕುಂಭಮೇಳವನ್ನು ನಡೆಸಿರುವುದು ನಮಗೆ ಅತೀವ ಸಂತಸ ತಂದಿದೆ. ಮೈಸೂರಿಗೆ ಬರುವ ಪ್ರವಾಸಿಗರೆಲ್ಲ ಇಲ್ಲಿ ಬಂದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಪುನೀತರಾಗುವ ಅವಶ್ಯಕತೆ ಇದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಗಳ ಮಾತಿಗೆ ಪ್ರತಿಕ್ರಿಯಿಸಿದ ಕುಂಭಮೇಳದ ಅಧ್ಯಕ್ಷರಾದ ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವರಾದ ನಾರಾಯಣಗೌಡ, ಶ್ರೀ ಗಳು ಹೆಳಿದಂತೆ ಈಗಾಗಲೇ ಕರ್ನಾಟಕ ಸರ್ಕಾರ ಇದಕ್ಕೆ ಸ್ಪಂದಿಸಿದೆ. ಮೂಲಭೂತ ಸೌಕರ್ಯವನ್ನು ಒದಗಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಂದಿಸಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೆವೆ ಎಂದರು.
ಸಾನಿಧ್ಯವನ್ನು ವಹಿಸಿದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ ನಿರ್ಮಲಾನಂದ ಮಹಾಸ್ವಾಮಿಗಳು, ಸುತ್ತೂರು ಕ್ಷೇತ್ರದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ಶ್ರೀ ಗಳ ಸಲಹೆ ನಿಜಕ್ಕೂ ಕೂಡ ಯೋಗ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ರಂಗ ಪಟ್ಟಣದ ಚಂದ್ರವನ ಆಶ್ರಮದ ಡಾ ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮಿಗಳು ಮಾತನಾಡಿ, ನಮ್ಮ ಕನ್ನಡಿಗರಿಗೆ ಈ ಕ್ಷೇತ್ರ ಹೆಮ್ಮೆ ತರುವಂತಹದ್ದು, ಮಲಯ ಮಹದೇಶ್ವರರ ಒಂದು ತಪಸ್ಸಿನ ತಾನವಾಗಿರುವ ಈ ಕ್ಷೇತ್ರ ಇನ್ನೂ ಹೆಚ್ಚು ಬೆಳೆಯಲಿ ಎಂದು ಆಶಾಭಾವ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯನವರು ಬಂದಿರುವ ನೂರಾರು ಸ್ವಾಮಿಗಳನ್ನು ಗೌರವಿಸಿ ಈ ಜಿಲ್ಲೆಗೆ ಬಂದಿರುವುದು ನಮಗೆ ತುಂಬಾ ಸಂತೋಷ ತಂದಿದೆ ಎಂದರು.
ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀಮತಿ ಎಸ್ ಅಶ್ವತಿ ಅವರು, ಕೆ ಆರ್ ಪೇಟೆ ತಹಶೀಲ್ದಾರ್ ಶ್ರೀಮತಿ ರೂಪಾ ಎಮ್ ವಿ ಅವರು ಇನ್ನೂ ಅನೇಕರು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕರ್ನಾಟಕ ಮತ್ತು ಬೇರೆ ಬೇರೆ ರಾಜ್ಯದಿಂದ ಇನ್ನೂರಕ್ಕೂ ಹೆಚ್ಚು ಮಠಾಧೀಶರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
https://pragati.taskdun.com/latest/oct-16th-nada-sudha-13th-anniversary/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button