Latest

ಪ್ರಧಾನ ಮಂತ್ರಿ ಕಿಸಾನ್ ಸಮೃದ್ದಿ ಕೇಂದ್ರ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೇಂದ್ರ ಸರಕಾರದ ವತಿಯಿಂದ ರೈತರಿಗೆ ಕಿಸಾನ ಸಮ್ಮಾನ ನಿಧಿ ಸೇರಿದಂತೆ ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ರೈತರು ಈ ಯೋಜನೆಗಳ ಲಾಭ ಪಡೆದುಕೊಳ್ಳಬೇಕೆಂದು ಸಂಸದ ಮಂಗಲಾ ಅಂಗಡಿ ಹೇಳಿದರು.

ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆನ್‌ಲೈನ್ ಮೂಲಕ ದೇಶದ ವಿವಿಧಡೆ ಒಟ್ಟು 600 ಪ್ರಧಾನ ಮಂತ್ರಿ ಕಿಸಾನ್ ಸಮೃದ್ದಿ ಕೇಂದ್ರಗಳನ್ನು ಉದ್ಘಾಟನೆ ಮಾಡಿದರು. ಈ ಹಿನ್ನಲೆಯಲ್ಲಿ ಬೆಳಗಾವಿಯ ಎಪಿಎಂಸಿ ಆವಣದಲ್ಲಿರುವ ಎಸ್.ಡಿ.ಕಲಮನಿ ಇವರ ಮಳಿಗೆಯಲ್ಲಿ ಬೆಳಗಾವಿಯ ಕೇಂದ್ರವನ್ನು ಸಂಸದೆ ಮಂಗಲಾ ಅಂಗಡಿ ಅವರು ಉದ್ಘಾಟಿಸಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. 2014 ರ ನಂತರ ದೇಶದಲ್ಲಿನ ಕೃಷಿಕರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತ ಬಂದಿದೆ. ಕೇಂದ್ರ ಸರಕಾರ ರೈತರಿಗೆ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ. ಅನೇಕ ಯೋಜನೆಗಳನ್ನು ಹೊಸದಾಗಿ ಪರಿಚಯಿಸುತ್ತ ಬಂದಿದೆ. ರೈತರ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಹೊಸ ಮಾರುಕಟ್ಟೆಯ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂದು ಅವರು ಹೇಳಿದರು.

ಕೇಂದ್ರ ಸರಕಾರ ಇದೀಗ ಪ್ರಾರಂಭಿಸಲಾದ ಪ್ರಧಾನಮಂತ್ರಿ ಕಿಸಾನ ಸಮೃದ್ದಿ ಕೇಂದ್ರದಲ್ಲಿ ರೈತರಿಗೆ ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ನೀಡಲಾಗುತ್ತದೆ. ಕೇಂದ್ರ ಸರಕಾರ ಯೂರಿಯಾ ಗೊಬ್ಬರವನ್ನು ಉನ್ನತಿಕರಣಗೊಳಿಸಿ ನ್ಯಾನೋ ಯೂರಿಯಾ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಈ ನ್ಯಾನೋ ಯುರಿಯಾ ರೈತರಿಗೆ ಅನೂಕೂಲಕರವಾಗಲಿದೆ. ಅದರಂತೆ ಮಣ್ಣು ಪರೀಕ್ಷೆ , ಮಾರುಕಟ್ಟೆಯ ಮಾಹಿತಿ, ಬೀಜಗಳ ಗುಣಮಟ್ಟದ ಬಗ್ಗೆ ಸೇರಿದಂತೆ ಎಲ್ಲ ಮಾಹಿತಿ ಈ ಕೇಂದ್ರದಲ್ಲಿ ಲಭ್ಯವಾಗಲಿದ್ದು, ಇದರ ಲಾಭವನ್ನು ರೈತರು ಪಡೆದುಕೊಳ್ಳಬೇಕೆಂದು ಅವರು ಹೇಳಿದರು.

ಸಮಾರಂಭದಲ್ಲಿ ಪ್ರಾಸ್ತಾವಿಕ ಮಾತನಾಡಿದ ಬೆಳಗಾವಿ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಅವರು ಮಾತನಾಡಿ, ಕೇಂದ್ರ ಸರಕಾರ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 11 ಕಂತಿನಲ್ಲಿ 5.64 ಲಕ್ಷ ರೈತರಿಗೆ 1587 ಕೋಟಿ ರೂ.ಗಳ ನೆರವನ್ನು ನೀಡಿದೆ. ಇಂದು ಕೇಂದ್ರ ಸರಕಾರ 12 ನೇ ಕಂತನ್ನು ಬಿಡುಗಡೆ ಮಾಡಿದ್ದು, 5.32 ಲಕ್ಷ  ರೈತರಿಗೆ 107 ಕೋಟಿ ರೂ. ಅನುದಾನ ತಲುಪಿದೆ ಎಂದು ಹೇಳಿದ ಅವರು, ರೈತರು ತಾವು ಬೆಳೆದ ಬೆಳೆಗಳಿಗೆ ಉತ್ತಮ ದರ ಪಡೆದುಕೊಳ್ಳಲು ನಿರಂತರ ಮಾರುಕಟ್ಟೆ ಮಾಹಿತಿ ಪಡೆಯುತ್ತಿರಬೇಕು. ಇದರಿಂದ ದಲ್ಲಾಳಿಗಳ ಮೊಸ ಹೋಗದೆ ನೇರವಾಗಿ ಮಾರುಕಟ್ಟೆಗೆ ತಮ್ಮ ಉತ್ಪಾದನೆ ಮಾರಾಟ ಮಾಡಲು ಅನಕೂಲವಾಗುತ್ತದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಪಾರಾದೀಪ ಫಾಸ್ಪೇಟ್ ಲಿ.ಕಂಪನಿಯ ಪ್ರಾದೇಶಿಕ ಮಾರುಕಟ್ಟೆ ಅಧಿಕಾರಿ ಗಣೇಶ ಹೆಗಡೆ, ಬೇಸಾಯ ತಜ್ಞ ಡಾ.ಬಿ.ಜಿ.ವಿಶ್ವನಾಥ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರನ್ನು ಗೌರವಿಸಲಾಯಿತು. ವೇದಿಕೆ ಮೇಲೆ ನಗರಸೇವಕಿ ರೇಷ್ಮಾ ಪಾಟೀಲ ಸವಿತಾ ಕಂಬೇರಿ, ಸಂದೀಪ ಜಿಗರಾಳ , ಕೃಷಿ ಇಲಾಖೆಯ ಉಪ ನಿರ್ದೇಶಕ ಎಸ್.ಬಿ.ಕೊಂಗವಾಡ, ಫಾಸ್ಪೆಪ್ ಕಂಪನಿಯ ಸಹಾಯಕ ಮ್ಯಾನೇಜರ್ ಸಂಜು ಮನೆಪ್ಪಗೊಳ, ಭೀಮುದಾದಾ ಭೀರಡೆ , ಕಿಸಾನ್ ಸಮೃದ್ಧಿ ಕೇಂದ್ರದ ಶಾಂತಿನಾಥ ಕಲಮನಿ, ರೋಹನ್ ಕಲಮನಿ, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ನಾರಾಯಣ ಸ್ವಾಮಿ ಆರ್.   ನಿರೂಪಿಸಿದರು.

ರಸ್ತೆ ಗುಂಡಿಗೆ ಮತ್ತೊಂದು ಬಲಿ; ಅಪಘಾತಕ್ಕೀಡಾಗಿದ್ದ ಮಹಿಳೆ ಸಾವು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button