ಪ್ರಗತಿವಾಹಿನಿ ಸುದ್ದಿ, ಗೋವಾ:
‘ಸಿಬಿಐ’ಯು ಹಿಂದು ವಿಧಿಜ್ಞ ಪರಿಷದ್ನ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಪುನಾಳೆಕರ ಇವರ ಬಂಧಿಸುವುದೆಂದರೆ ನ್ಯಾಯವಾದಿಗಳಿಗೆ ಇರುವಂತಹ ವಿಶೇಷಾಧಿಕಾರವನ್ನು ಕಸಿದುಕೊಂಡಂತಾಗಿದೆ. ‘ಕಕ್ಷಿದಾರ-ನ್ಯಾಯವಾದಿ’ ಸಂಬಂಧಕ್ಕೆ ಶೋಷಣೆ ಮಾಡುವ ಕ್ರಮವನ್ನು ಕೂಡಲೆ ನಿಯಂತ್ರಿಸುವುದು ಅವಶ್ಯ. ‘ಸಿಬಿಐ’ಯು ನ್ಯಾಯವಾದಿ ಸಂಜೀವ ಪುನಾಳೆಕರ ಬಂಧಿಸಿರುವುದು ಖಂಡನೀಯ. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು’, ಎಂದು ಹಿಂದುತ್ವನಿಷ್ಠ ನ್ಯಾಯವಾದಿಗಳು ಗೋವಾದ ಬಾಂಬೋಳಿಯಲ್ಲಿರುವ ‘ಸಿಬಿಐ’ ಕಾರ್ಯಾಲಯದೆದುರು ಪ್ರತಿಭಟಿಸಿದರು.
ನ್ಯಾಯವಾದಿಗಳ ವತಿಯಿಂದ ಸಂಬಂಧಿತ ಅಧಿಕಾರಿಗೆ ಮನವಿ ನೀಡಲಾಯಿತು. ಈ ಮನವಿಯಲ್ಲಿ ೨೬ ನ್ಯಾಯವಾದಿಗಳ ಹಸ್ತಾಕ್ಷರಗಳಿವೆ.
ಇದರಲ್ಲಿ ವಾರಣಾಸಿಯಲ್ಲಿನ ‘ಇಂಡಿಯಾ ವಿಥ್ ವಿಸ್ಡಮ್ ಗ್ರೂಪ್’ನ ನ್ಯಾಯವಾದಿ ಕಮಲೇಶಚಂದ್ರ ತ್ರಿಪಾಠಿ, ಹಿಂದೂ ವಿಧಿಜ್ಞ ಪರಿಷದ್ನ ಸಂಸ್ಥಾಪಕ-ಸದಸ್ಯರಾದ ನ್ಯಾಯವಾದಿ ಸುರೇಶ ಕುಲಕರ್ಣಿ, ಪರಿಷದ್ನ ಉಪಾಧ್ಯಕ್ಷ ನ್ಯಾಯವಾದಿ ಅಮೃತೇಶ ಎನ್.ಪಿ., ಪರಿಷದ್ನ ಗೋವಾ ರಾಜ್ಯದ ಕಾರ್ಯದರ್ಶಿ ನ್ಯಾಯವಾದಿ ನಾಗೇಶ ಜೋಷಿ, ಇವರೊಂದಿಗೆ ಗೋವಾದಲ್ಲಿಯ ನ್ಯಾಯವಾದಿಗಳಾದ ಸತ್ಯವಾನ ಪಾಲಕರ, ಫೋಂಡಾ ಬಾರ್ ಅಸೋಸಿಯೇಶನ್ನ ಅಧ್ಯಕ್ಷರಾದ ನ್ಯಾಯವಾದಿ ಶೈಲೆಂದ್ರ ನಾಯಿಕ್, ನ್ಯಾಯವಾದಿ ಗಜಾನನ ನಾಯಿಕ್, ನ್ಯಾಯವಾದಿ ರಾಜೇಶ ಗಾವಕರ ಮತ್ತು ವಕೀಲೆ ಅನುಪಮಾ ಶಿರೋಡಕರ ಇದ್ದರು.
ಈ ಸಮಯದಲ್ಲಿ ಎಲ್ಲ ನ್ಯಾಯವಾದಿಗಳು ‘ಸಿಬಿಐ’ನ ಬಾಂಬೋಳಿಯಲ್ಲಿನ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡಿದರು.
‘ಸಿಬಿಐ’ನ ಈ ಕ್ರಮವು ನ್ಯಾಯವಾದಿಗಳಿಗಾಗಿ ದೊಡ್ಡ ಅಪಾಯಕಾರಿಯಾಗಿದೆ. ಆದುದರಿಂದ ಇನ್ನು ಮುಂದೆ ಪಕ್ಷಕಾರನು ಪೊಲೀಸ್ ಅಧಿಕಾರಿ ಅಥವಾ ಇತರ ಯಾರದ್ದಾದರೂ ಹೇಳಿಕೆ ಮೇಲೆ ನ್ಯಾಯವಾದಿಗಳ ಮೇಲೆ ಯಾವುದೇ ರೀತಿಯ ಆರೋಪ ಮಾಡಬಹುದು. ಇದರ ಬಗ್ಗೆ ಬಾರ್ ಕೌನ್ಸಿಲ್’ ಮತ್ತು ‘ಬಾರ್ ಅಸೋಸಿಯೆಶನ್’ ಯಾವುದೇ ಕೃತಿ ಮಾಡಿದಿದ್ದರೆ ನಾಳೆ ಇದೇ ಪ್ರಸಂಗ ಇತರ ನ್ಯಾಯವಾದಿಗಳಿಗೆ ಎದುರಾಗಬಹುದು ಎಂದು ಎಚ್ಚರಿಸಲಾಗಿದೆ.
ಈ ಮನವಿಯ ಪ್ರತಿಯನ್ನು ಪ್ರಧಾನಮಂತ್ರಿ ಕಾರ್ಯಾಲಯ ಮತ್ತು ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿಗಳಿಗೆ ಕಳುಹಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ