Latest

ಸ್ವಲ್ಪನಾದರೂ ಆತ್ಮಸಾಕ್ಷಿ ಎಂಬುದಿರಬೇಕು; ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಸಿಎಂ

ಪ್ರಗತಿವಾಹಿನಿ ಸುದ್ದಿ; ಬೀದರ್: ದೀನದಲಿತರಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಇಂದು ಔರಾದ್ ನಲ್ಲಿ ಆಯೋಜಿಸಿರುವ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಸಿಎಂ, ದೀನ ದಲಿತರ ಹೆಸರಿನಲ್ಲಿ ಮತ ಪಡೆದು ಅಧಿಕಾರ ನಡೆಸಿದ ಕಾಂಗ್ರೆಸ್ ದಲಿತರ ಪರ ಮಾತನಾಡಿದ್ದರು. ಆದರೆ ದೀನದಲಿತರು ಎಲ್ಲಿದ್ದಾರೋ ಅಲ್ಲಿಯೇ ಇದ್ದಾರೆ. ದಲಿತರ ಪರ ಮಾತನಾಡುವ ಕಾಂಗ್ರೆಸ್ ಒಂದು ಹಕ್ಕು ಪತ್ರ ನೀಡಿಲ್ಲ, ಅವರಿಗೆ ಯಾವುದೇ ಕೊಡುಗೆ ನೀಡಿಲ್ಲ ಎಂದರು.

ಆತ್ಮಸಾಕ್ಷಿ ಇರಬೇಕು:
ಮೀಸಲಾತಿ ಕಾಂಗ್ರೆಸ್ ಕೊಡುಗೆ ಎಂದಿರುವ ರಾಹುಲ್ ಗಾಂಧಿಗೆ ಸ್ವಲ್ಪವಾದರೂ ಆತ್ಮಸಾಕ್ಷಿ ಇರಬೇಕು. ಸರ್ಕಾರ, ಸಚಿವ ಸಂಪುಟ, ನಿರ್ಣಯ ನಮ್ಮದು, ಇವರು ಅದರ ಶ್ರೇಯಸ್ಸನ್ನು ಪಡೆಯಲು ಹೊರಟಿದ್ದಾರೆ ಎಂದರು. ರಾಹುಲ್ ಗಾಂಧಿ ನಮ್ಮ ಸರ್ಕಾರದಲ್ಲಿ ಹಗರಣಗಳಾಗಿವೆ ಅಂತ ಹೇಳಿದ್ದಾರೆ. ‌ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಏನೆಲ್ಲಾ ಹಗರಣ ಆಗಿದೆ ಅಂತ ದಾಖಲೆ ಸಮೇತ ಅವರಿಗೆ ವರದಿ ಕಳುಹಿಸಿ ಕೊಡಲಾಗುತ್ತಿದೆ ಎಂದರು.

ಪರೀಕ್ಷೆ ಬರೆಯದವರಿಗೆ ಕೆಲಸ:

2016 ರಲ್ಲಿ ಶಿಕ್ಷಕರ ನೇಮಕಾತಿಯಾಯಿತು. ಈಗ ಅದರ ಬಣ್ಣಬಯಲಾಗಿದೆ. ಅರ್ಜಿ ಹಾಕದಿದ್ದವರಿಗೆ ಕೆಲಸ ಕೊಡಲಾಗಿದೆ.ಅಂತ ವ್ಯವಸ್ಥೆ ಕಾಮಗ್ರೆಸ್ ಸರ್ಕಾರದ್ದು. ಅದೆಷ್ಟು ಪರ್ಸೆಂಟೇಜ್ ಪಡೆದಿರಬಹುದು ಲೆಕ್ಕ ಹಾಕಿ. ಪೋಲಿಸ್ ನೇಮಕಾತಿಯಲ್ಲಿ ಡಿಐಜಿ ಸೋರಿಕೆ ಮಾಡಿ ಹಣ ಪಡೆದರು. ಸಿಐಡಿ ಗೆ ಪ್ರಕರಣ ನೀಡಲಾಯಿತು. ಆದರೆ ಅಲ್ಲಿಯೇ ಮುಚ್ಚಿಹೋಯಿತು. ಡಿಐಜಿ ಶ್ರೀಧರನ್ ಅವರ ಮೇಲೆ ಎಫ್ಐಆರ್ ದಾಖಲಾದರೂ, ಪ್ರಕರಣವನ್ನು ಮುಚ್ಚಿಹಾಕಲಾಯಿತು ಎಂದರು. ಸರ್ಕಾರಿ ಅಭಿಯೋಜಕರ ನೇಮಕಾತಿಯಲ್ಲಿಯೂ ಕೆ.ಪಿ.ಎಸ್.ಸಿ ಯಲ್ಲಿ ಹಣಹೊಡೆದರು. ಎಲ್ಲಾ ಅನರ್ಹರಿಗೆ ಕೆಲಸ ನೀಡಿ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ, ತನಿಖೆಯಾಗಿತು. ಈಗ ಎಲ್ಲರನ್ನೂ ಅಮಾನತು ಮಾಡಲಾಗಿದೆ ಎಂದು ತಿಳಿಸಿದರು. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿರುವ ಫ್ಯಾಕ್ಟರಿ ಹಗರಣ ತನಿಖೆ ಮಾಡಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮವಹಿಸಲಾವುದು ಎಂದರು.

ಜನಸಂಕಲ್ಪ ಯಾತ್ರೆ ಯಶಸ್ವಿ ರಾಯಚೂರಿನಲ್ಲಿ ಪ್ರಾರಂಭವಾಗಿ ಅಭೂತಪೂರ್ವ ಯಶಸ್ಸು ಕಂಡಿದೆ. ಇಲ್ಲಿನ ಜನರ ಪ್ರೀತಿ ಮತ್ತು ವಿಶ್ವಾಸವನ್ನು ನಾನು ಯಾವತ್ತು ಮರೆಯುವುದಿಲ್ಲ‌. ಈ ಕ್ಷೇತ್ರದಲ್ಲಿ ಪ್ರಭು ಚೌಹ್ವಾಣ್ ಉತ್ತಮ‌ ಕೆಲಸ ಮಾಡುತ್ತಿದ್ದಾರೆ‌ ನಿಮ್ಮ ಉತ್ಸಾಹ ನೋಡಿದರೆ ಅವರು ಮತ್ತೆ ಆಯ್ಕೆಯಾಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಪ್ರಭು ಚೌಹ್ವಾಣ್ ಎಲ್ಲರೊಂದಿಗೆ ಬೆರೆತು ಪ್ರೀತಿ ವಿಶ್ವಾಸದಿಂದ ಸೇವೆ ಮಾಡಿ ನಾಯಕರಾಗಿದ್ದಾರೆ ಎಂದರು.

ಔರಾದ್ ನಲ್ಲಿ ನಮ್ಮ ತಂದೆಯ ಆತ್ಮೀಯರಾದ ಗುರುಪಾದಪ್ಪಾ ನಾಗಮಾರಪಲ್ಲಿ ಅವರು ನಾಲ್ಕು ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದರು. ಬಡವರ, ರೈತರ ಬಂಧುವಾಗಿ ಕೆಲಸ ಮಾಡಿದ್ದರು. ಈ ಸಂದರ್ಭದಲ್ಲಿ ಅವರನ್ನು ನೆನಪು ಮಾಡಿಕೊಳ್ಳಬೇಕೆಂದರು.

ಕಾಂಗ್ರೆಸ್ ದುರಾಡಳಿತ:
ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಇದಕ್ಕಿಮಥ ಮುಂಚೆ ಇದ್ದ ಕಾಂಗ್ರೆಸ್ ಸರ್ಕಾರದ 5 ವರ್ಷಗಳ ದುರಾಡಳಿತವನ್ನು ಕಂಡು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಿತ್ತು ಹಾಕಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ಜನ ತಂದಿದ್ದಾರೆ ಎಂದರು.

ಅವರ ಆಪಾದನೆಗೆ ನನ್ನ ಜವಾಬ್:
ನಮ್ಮ ಸರ್ಕಾರದಲ್ಲಿ ಪಿಎಸ್ಐ ನೇಮಕಾತಿಯಲ್ಲಾದ ಹಗರಣದಲ್ಲಿ ನಾವು ಯಾರನ್ನೂ ಬಿಡಲಿಲ್ಲ. ತಪ್ಪು ಮಾಡಿದವರನ್ನು ಹಿಡಿದು ಒಳಗೆ ಹಾಕಿದ್ದೇವೆ. ಸಿದ್ದರಾಮಯ್ಯಯ ಅವರಿಗೆ ಡಿಐಜಿ ಯನ್ನು ಹಡಿದು ಒಳಗೆ ಹಾಕಲು ಆಗಿರಲಿಲ್ಲ. ನಾವು ಪಿಎಸ್ಐ ನೇಮಕಾತಿಯಲ್ಲಿ ಹಗರಣವಾದಾಗ ಎಡಿಜಿಪಿಯನ್ನು ಒಳಗೆ ಹಾಕಿದ್ದೇವೆ.ಡಿಐಜಿ ಮುಟ್ಟಲು ಇವರಿಗೆ ದಮ್ ಇರಲಿಲ್ಲ. ದಮ್ ಬಗ್ಗೆ ಮಾತಾನಾಡುವ ಇವರಿಗೆ ದಮ್ ಇದೆಯಾ ಇವರಿಗೆ ಎಂದು ಪ್ರಶ್ನಿಸಿದರು. ಅದೆಲ್ಲ ಈಗ ನಡೆಯುವುದಿಲ್ಲ. ಕಾಂಗ್ರೆಸ್ ಅವಧಿಯ ಎಲ್ಲಾ ಹಗರಣಗಳನ್ನು ರಾಹುಲ್ ಗಾಂಧಿಗೆ ಕಳುಹಿಸುತ್ತೇನೆ.‌ ಬಹಳ ಮಾತನಾಡಿದ್ದಾರೆ ರಾಹುಲ್ ಗಾಂಧಿ. ನಾನು ಹಗರಣಗಳ ಬಗ್ಗೆ ದಾಖಲೆ ಸಮೇತ ಕೊಡುತ್ತೇನೆ. ಏನು ಶಿಕ್ಷೆ ಕೊಡುತ್ತಾರೋ ನೋಡೋಣ. ಇದು ನನ್ನ ಸವಾಲ್ . ಅವರ ಆಪಾದನೆಗೆ ನನ್ನ ಜವಾಬ್. ಕಾಂಗ್ರೆಸ್ ಅವಧಿಯಲ್ಲಿ ಏನು ಮಾಡಲು ಆಗಿರಲಿಲ್ಲವೋ ಅದನ್ನು ನಾವು ಮಾಡುತ್ತಿದ್ದೇವೆ‌ ಎಂದರು.

ಬೀದರ್ ನಲ್ಲಿ ಕನಿಷ್ಠ ನಾಲ್ಕು ಸ್ಥಾನ ಗಳಿಸುವ ವಿಶ್ವಾಸ:
ಸಮಗ್ರ ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ ನಮ್ಮ‌ಸರ್ಕಾರ ಬದ್ದವಾಗಿದೆ. ಕಲ್ಯಾಣ ಕರ್ನಾಟಕಕ್ಕೆ 5000ಕೋಟಿ ಕೊಡುತ್ತೇನೆ‌ ಎಂದಾಗ ಕಾಂಗ್ರೆಸ್ ನ ಶಾಸಕರೊಬ್ಬರು ಶಾಸಕರೆಲ್ಲರೂ ಜೊಲ್ಲೆಉ ಸುರಿಸುತ್ತಿದ್ದಾರೆ ಎಂದಿದ್ದಾರೆ. ಯಾವುದರಲ್ಲಿಯೂ ದುಡ್ಡು ಹೊಡೆಯದೇ ಬಿಟ್ಟಿಲ್ಲ ಅವರು.ಯಾವ ಕಾರ್ಯಕ್ರಮ ರೂಪಿಸಿದರೂ ಇದರಲ್ಲಿ ಹೇಗೆ ದುಡ್ಡು ಮಾಡಬಹುದೆಂದು ಯೋಚಿಸುತ್ತಾರೆ. ಅವರು ಅಧಿಕಾರದಲ್ಲಿ ಇದ್ದಾಗ ಕಬ್ಬು ಇದ್ದ ಹಾಗೆ ಇರುತ್ತಾರೆ‌ ಅಧಿಕಾರ ಹೋದ ಮೇಲೆ ಹತ್ತಿ ಕಟ್ಟಿಗೆ ಆಗುತ್ತಾರೆ. ಅವರು ಅಧಿಕಾರಕ್ಕೆ ಬಂದೆ ಬಿಟ್ಟಿದ್ದೇವೆ ಎನ್ನುವಂತೆ ಮಾಡುತ್ತಿದ್ದಾರೆ‌. ಅವರ ಕನಸು ನನಸಾಗುವುದಿಲ್ಲ ಎಂದರು. ನಾನು ಮತ್ತೆ ಬೀದರ್ ಗೆ ಬರುತ್ತೇನೆ ಇಲ್ಲಿ ಕನಿಷ್ಟ 4 ಕ್ಷೇತ್ರ ಈ ಬಾರಿ ಗೆಲ್ಲುತ್ತೇವೆ. ಮತ್ತೆ ಬೀದರ್ ಗೆ ಬರುತ್ತೇನೆ. ಎಲ್ಲಾ ವರ್ಗದವರ ವಿಶ್ವಾಸ ಗಳಿಸೋಣ, ನಿಮ್ಮ ಆಶೀರ್ವಾದ ಬಹಳ ಮುಖ್ಯ. ನಿಮ್ಮ ಆಶೀರ್ವಾದದಿಂದ ಮತ್ತೆ ಅಧಿಕಾರಕ್ಕೆ ಬರುತ್ತೇವೆ‌ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.

ರಮೇಶ ಜಾರಕಿಹೊಳಿ ಮಂತ್ರಿ ಮಾಡ್ತಾರಾ, ಇಲ್ಲಾ ಮತ್ತೊಂದು ಚಾಕಲೇಟ್ ಕೊಟ್ಟು ಹೋದ್ರಾ ಅರುಣ ಸಿಂಗ್?

https://pragati.taskdun.com/latest/will-ramesh-jarakiholi-become-minister-or-arun-singh-gave-another-chocolate/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button