Kannada NewsLatest

ಹುಕ್ಕೇರಿ ಮನೆ ಕಳ್ಳತನ ಆರೋಪಿ ಅಪ್ರಾಪ್ತ ಬಾಲಕ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅ. 12ರಂದು ಹುಕ್ಕೇರಿಯ ಸುಧಾಕರ ರಂಗನಾಥ ನಾಯಕ ಎಂಬುವವರ ಮನೆಯ ಬಾಗಿಲ ಕೊಂಡಿ ಮುರಿದು ಲಕ್ಷಾಂತರ ರೂ. ಕಳುವು ಮಾಡಿದ್ದ ಆರೋಪಿ ಅಪ್ರಾಪ್ತ ಬಾಲಕ ಎಂಬುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

ಸುಧಾಕರ ನಾಯಕ ಅವರ ಮನೆಯ ಬಾಗಿಲದ ಕೊಂಡಿ ಮುರಿದು ಮನೆಯಲ್ಲಿ ಟ್ರೆಜರಿಯಲ್ಲಿಟ್ಟಿದ್ದ 60 ಗ್ರಾಂ ತೂಕದ ಬಂಗಾರದ ಆಭರಣ, 165 ಗ್ರಾಂ ತೂಕದ ಬೆಳ್ಳಿ ಆಭರಣ ಹಾಗೂ 11,500/-ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಹುಕ್ಕೇರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್.ಪಿ ಬೆಳಗಾವಿ ಮತ್ತು ಹೆಚ್ಚುವರಿ ಎಸ್.ಪಿ ಬೆಳಗಾವಿ ರವರು ಗೋಕಾಕ ಡಿ.ಎಸ್‌.ಪಿ ಮನೋಜಕುಮಾರ್ ನಾಯ್ಕ ರವರ ನೇತೃತ್ವದಲ್ಲಿ ಹುಕ್ಕೇರಿ ಪೊಲೀಸ್ ಇನ್ಸ್‌ಪೆಕ್ಟರ್ ಮೊಹ್ಮದ್‌ ರಫೀಕ್ ತಹಶೀಲ್ದಾರ, ಎಸ್.ಕೆ ಮನ್ನಿಕೇರಿ ಪಿ.ಎಸ್.ಐ, ಎ.ಎಸ್. ಸನದಿ ಎ.ಎಸ್.ಐ. ರವಿ ಢಂಗ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಜಿ.ಎಸ್ ಕಾಂಬಳೆ, ಮಂಜುನಾಥ.ಎಸ್.ಕಲ್ಲೂರ , ಎಸ್.ಆರ್ ರಾಮದುರ್ಗ, ಅಜೀತ ನಾಯಿಕ, ಬಿ.ವಿ ನಾವಿ, ಯು.ವಾಯ್ ಅರಭಾಂವಿ, ಎ.ಎಸ್ ತಿರಗನ್ನವರ, ಎಮ್ ಕೆ ಅತ್ತಾರ್ ರವರನ್ನು ಒಳಗೊಂಡ ತಂಡವನ್ನು ರಚಿಸಿದ್ದರು.

ತಂಡವು ಪ್ರಕರಣವನ್ನು ಪತ್ತೆ ಮಾಡಿ ಕಳ್ಳತನ ಮಾಡಿದ ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದು ಅವನಿಂದ ಈ ಪ್ರಕರಣದಲ್ಲಿ ಕಳ್ಳತನವಾದ ಒಟ್ಟು 3,09,600 ರೂ. ಮೌಲ್ಯದ 60 ಗ್ರಾಂ ತೂಕದ ಬಂಗಾರದ ಆಭರಣ ಮತ್ತು 165 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ಹಾಗೂ 9,500 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ: ಮತ್ತಿಬ್ಬರು ಆರೋಪಿಗಳ ಬಂಧನ

https://pragati.taskdun.com/latest/kptcl-exam-scandal-2-accused-arrestedbelagavi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button