Latest

ಭೂತಕೋಲ ಹಿಂದೂ ಸಂಸ್ಕೃತಿಯಲ್ಲ; ಹೊಸ ಚರ್ಚೆ ಹುಟ್ಟುಹಾಕಿದ ನಟ ಚೇತನ್ ಹೇಳಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂತಾರಾ ಚಿತ್ರ ರಾಷ್ಟ್ರಾದ್ಯಂತ ಸದ್ದು ಮಾಡುತ್ತಿರುವ ಸಂದರ್ಭದಲ್ಲೇ ಚಿತ್ರದಲ್ಲಿನ ಭೂತಕೋಲದ ಬಗ್ಗೆ ಹೊಸದೊಂದು ಚರ್ಚೆಯನ್ನು ನಟ ಚೇತನ್ ಸೃಷ್ಟಿಸಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸುತ್ತಿದೆ. ಚಿತ್ರದಲ್ಲಿನ ಭೂತಕೋಲ, ದೈವಾರಾಧನೆ, ಭೂತಾರಾಧನೆ ವಿಚಾರವಾಗಿ ನಟ ಚೇತನ್ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ. ಅದು ಬಹುಜನ ಸಂಪ್ರದಾಯ. ಭೂತಕೋಲವನ್ನು ಹಿಂದೂ ಸಂಸ್ಕೃತಿ ಎಂದು ಕರೆಯುವುದು ತಪ್ಪಾಗುತ್ತದೆ ಎಂದು ಹೇಳಿದ್ದಾರೆ.

ಭೂತಕೋಲ ಹಿಂದೂ ಸಂಸ್ಕೃತಿ ಎಂದು ನಟ ರಿಷಬ್ ಶೆಟ್ಟಿ ಹೇಳಿದ್ದಾರೆ. ಆದರೆ ಭೂತಕೋಲ ಹಿಂದೂ ಸಂಕ್ರ‍ಿತಿಗೆ ಸೇರಿದ್ದಲ್ಲ ಎಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.

ನಮ್ಮ ಪಂಬದ ಎಂಬ ಪುಸ್ತಕವನ್ನು ನಾನು ಈ ಹಿಂದೆ ಬಿಡುಗಡೆ ಮಾಡಿದ್ದೆ. ಅದರಲ್ಲಿ ಭೂತಕೋಲ, ಬುಡಕಟ್ಟು ಸಂಪ್ರದಾಯ ಹೀಗೆ ಹಲವು ವಿಚಾರಗಳ ಬಗ್ಗೆ ಉಲ್ಲೇಖಿಸಲಾಗಿದೆ. ಪಂಬದ, ನಲಿಕೆ, ಪರವರ, ಭೂತಕೋಲ ಇವು ಬಹುಜನ ಸಂಪ್ರದಾಯಗಳು. ಭೂತಕೋಲ ಪಂಬದ ಸಮುದಾಯದ ಆಚರಣೆ. ಭೂತಕೋಲದಲ್ಲಿ ಬ್ರಾಹ್ಮಣ್ಯ ಎಂಬುದು ಇಲ್ಲ. ವೈದಿಕ ಬ್ರಾಹ್ಮಣ್ಯ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಭೂತಕೋಲ ಹಿಂದೂ ಸಂಸ್ಕೃತಿಯಲ್ಲಿ ಬರುತ್ತದೆ ಎಂದು ಹೇಳುವುದು ತಪ್ಪು ಎಂದಿದ್ದಾರೆ.

ಬ್ರಾಹ್ಮಣ್ಯವನ್ನು ಆದಿವಾಸಿ ಸಂಸ್ಕೃತಿ ಎನ್ನಲಾಗದು. ಕೊರಗ ಸಮುದಾಯಕ್ಕೆ ಅವರದ್ದೇ ಆದ ಸಂಪ್ರದಾಯವಿದೆ. ಕೊರಗಜ್ಜ ಆದಿವಾಸಿ ಸಂಸ್ಕೃತಿಗೆ ಸೇರಿದ್ದಾನೆ. ಹಿಂದೂ ಎಂಬ ಪದವನ್ನು ಯಾವ ರೀತಿ ಬಳಸುತ್ತೆವೆ ಎಂಬುದು ಮುಖ್ಯ. ಹಿಂದೂ ಎಂಬುದು ಹೇಗೆ ಬಂತು? ಬುಡಕಟ್ಟು ಸಂಪ್ರದಾಯಗಳು ಯಾವುದು ಸೇರಿದಂತೆ ಹಲವು ವಿಚಾರಗಳನ್ನು ವಿವರಿಸಿದ್ದಾರೆ.

AICC ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ

https://pragati.taskdun.com/politics/aicc-presidentmallikarjuna-khargeselect/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button