3ನೇ ರೈಲ್ವೆ ಗೇಟ್ ಮೇಲ್ಸೇತುವೆ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಟಿಳಕವಾಡಿ ಮೂರನೇ ರೈಲ್ವೆ ಗೇಟ್ ಮೇಲ್ಸೇತುವೆ ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ಈ ರಸ್ತೆಯಲ್ಲಿ ಗುಂಡಿ ಬಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಜನತೆಯ ವಿಶ್ವಾಸಾರ್ಹ ರೈಲ್ವೆ ಇಲಾಖೆಯಿಂದ ಕಳಪೆ ಕಾಮಗಾರಿ ನಡೆದಿರುವುದು ವಿಷಾದಕರ ಸಂಗತಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಳಕವಾಡಿ ಮೂರನೇ ರೈಲ್ವೆ ಗೇಟ್ ಮೇಲ್ಸೇತುವೆ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದೆ. ಈ ಮೊದಲು ನಿರ್ಮಾಣಗೊಂಡ ಎರಡನೇಯ ರೈಲ್ವೆ ಮೇಲ್ಸೇತುವೆಯಲ್ಲಿ ಸಮಸ್ಯೆ ಉದ್ಭವವಾಗಿತ್ತು. ನಂತರ ಆ ಸಮಸ್ಯೆ ಪರಿಹರಿಸಲಾಯಿತು. ಅದೇ ರೀತಿ ಮೂರನೇ ರೈಲ್ವೆ ಗೇಟ್ ಮೇಲ್ಸೇತುವೆ ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿರಸ್ತೆ ಎಲ್ಲ ಬೇಕೆಂದರಲ್ಲಿ ಗುಂಡಿಗಳು ಬಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡಿದೆ ಎಂದರು.
ಜನರ ಹಿತ ಕಾಪಾಡಬೇಕಾದ ರೈಲ್ವೆ ಇಲಾಖೆ ಉತ್ತಮ ಕಲಸ ನಿರ್ವಹಿಸಲಾಗುತ್ತದೆ ಎಂದು ನಂಬಿಕೆ ಇಡಲಾಗಿತ್ತು. ಆದರೆ ಈ ಇಲಾಖೆಯಲ್ಲಿ ಗುತ್ತಿಗೆ ಸಿಗುವುದು ಅಪರೂಪ, ಸಿಕ್ಕಂತಹ ಅವಕಾಶ ದುರುಪಯೋಗ ಮಾಡಿಕೊಳ್ಳಲಾಗಿದೆ. ರೈಲ್ವೆ ಇಲಾಖೆ ಸಹ ರಾಜ್ಯ ಸರಕಾರದ ಕಾರ್ಯವೈಖರಿ ಮಾದರಿಯಲ್ಲಿ ಬಂದು ನಿಂತಿದೆ ಎಂದು ಕಿಡಿಕಾರಿದರು.
ನಿಜಲಿಂಗಪ್ಪ ಬಳಿಕ ಕನ್ನಡಿಗ ಖರ್ಗೆ AICC ಅಧ್ಯಕ್ಷರಾಗಿ ಆಯ್ಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ