ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಈಬಾರಿ ದೀಪಾವಳಿಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬೇಕು ಎಂದುಕೊಂಡಿದ್ದ ಭಕ್ತರಿಗೆ ನಿರಾಸೆ ಸುದ್ದಿ. ಅಕ್ಟೋಬರ್ 24 ಹಾಗೂ 25ರಂದು ತಿಮ್ಮಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶವಿರುವುದಿಲ್ಲ ಎಂದು ಟಿಟಿಡಿ ತಿಳಿಸಿದೆ.
ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಅಕ್ಟೋಬರ್ 24 ಹಾಗೂ 25ರಂದು ತಿರುಪತಿ ತಿಮ್ಮಪ್ಪ ದೇಗುಲದ ಬಾಗಿಲು ಮುಚ್ಚಿರಲಿದ್ದು, ಭಕ್ತರಿಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶವಿರುವುದಿಲ್ಲ. ಬೆಳಿಗ್ಗೆ 8ಗಂಟೆಯಿಂದ ರಾತ್ರಿ 7:30ರವರೆಗೆ ದೇಗುಲ ಮುಚ್ಚಿರಲಿದೆ.
ಅಲ್ಲದೇ ನವೆಂಬರ್ 8ರಂದು ಕೂಡ ತಿರುಪತಿ ದೇಗುಲ ಮುಚ್ಚಲಿದೆ. ಕಾರಣ ಅಂದು ಚಂದ್ರಗ್ರಹಣ ಸಂಭವಿಸುತ್ತಿರುವುದರಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಚಂದ್ರಗ್ರಹಣ ಹಿನ್ನೆಲೆಯಲ್ಲಿ ತಿರುಪತಿ ದೇವಸ್ಥಾನದ ಬಾಗಿಲನ್ನು ಸುಮಾರು 12 ಗಂಟೆಗಳ ಕಾಲ ಮುಚ್ಚಲಾಗುತ್ತದೆ.
ಗ್ರಹಣದ ಬಳಿಕ ಶುದ್ಧಿ ಹಾಗೂ ಪುಣ್ಯಾಹವಾಚನದಂತಹ ಆಚರಣೆಗಳ ನಂತರ ಬೆಟ್ಟದ ದೇವಾಲಯದಲ್ಲಿ ಪೂಜೆ ಪುನರಾರಂಭವಾಗಲಿದೆ. ತಿರುಪತಿ ತಿಮ್ಮಪ್ಪ ಮಾತ್ರವಲ್ಲ ತಿರುಪತಿ ತಿಮ್ಮಪ್ಪ ದೇವಸ್ಥಾನದ ಆಡಳಿದಲ್ಲಿರುವ ಎಲ್ಲಾ ದೇವಾಲಯಗಳನ್ನು ಗ್ರಹಣದ ದಿನ ಅ.25 ಹಾಗೂ ನ.8ರಂದು ಮುಚ್ಚಲಾಗುತ್ತದೆ ಎಂದು ಟಿಟಿಡಿ ತಿಳಿಸಿದೆ.
https://pragati.taskdun.com/latest/arunachal-pradeshmilitary-choppercrashed/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ