Karnataka NewsLatest

ಬೀದಿ ನಾಯಿಗಳ ಊಟೋಪಚಾರಕ್ಕೆ ಕಿರುಕುಳ; ಪ್ರಧಾನ ಮಂತ್ರಿವರೆಗೂ ತಲುಪಿದ ಬೆಳಗಾವಿ ಮಹಿಳೆ ದೂರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೀದಿ ನಾಯಿಗಳಿಗೆ ಊಟ, ಉಪಚಾರ ನೀಡುವ ವಿಷಯದಲ್ಲಿ ಕಿರುಕುಳ ನೀಡುವವರ ವಿರುದ್ಧದ ದೂರೊಂದು ದೇಶದ ಪ್ರಧಾನ ಮಂತ್ರಿವರೆಗೂ ತಲುಪಿದೆ.

ಬೀದಿ ನಾಯಿ ವಿರೋಧಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಳಗಾವಿ ನಗರದ ಅನಿತಾ ದೊಡಮನಿ ಅವರು ಪ್ರಧಾನ ಮಂತ್ರಿ, ರಾಜ್ಯಪಾಲರು, ಮುಖ್ಯಮಂತ್ರಿಗೆ ದೂರು ಸಲ್ಲಿಸಿದ್ದಾರೆ‌.

ತಾವು ಹಲವು ದಿನಗಳಿಂದ ನೂರಾರು ಬೀದಿ ನಾಯಿಗಳಿಗೆ ಊಟ ನೀಡಿ ಉಪಚರಿಸುತ್ತ ಬಂದಿದ್ದು ಈ ಪ್ರಕ್ರಿಯೆಗೆ ಬೆಳಗಾವಿ ನಗರದ ಪೊಲೀಸ್ ಅಧಿಕಾರಿಗಳು ಹಾಗೂ ಕೆಲ ಜನರು ಆಕ್ಷೇಪಿಸುತ್ತಿದ್ದಾರೆ.  “ಬೀದಿ ನಾಯಿಗಳಿಗೆ ಊಟ ಹಾಕಬೇಡಿ, ಸ್ಥಳೀಯರಿಗೆ ಈ ನಾಯಿಗಳು ತೊಂದರೆ ಕೊಡುತ್ತಿವೆ” ಎಂದು ಶಹಾಪುರ ಸಿಪಿಐ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಅನಿತಾ ದೊಡಮನಿ ಆರೋಪಿಸಿದ್ದಾರೆ‌.

“ಶಹಾಪುರ ಸಿಪಿಐ ಗೆ ಮೊದಲು ಈ ಕುರಿತು ದೂರು ನೀಡಿದ್ದೇವು. ಆದರೆ ಅವರು ಕ್ರಮ ಕೈಗೊಳ್ಳಲಿಲ್ಲ. ಬದಲಾಗಿ ಹೊಂದಾಣಿಕೆ ಮಾಡಿಕೊಂಡು ಹೋಗಿ ಎಂದು ಹೇಳಿದ್ದಾರೆ. ನಮಗೆ ಲೈಸನ್ಸ್ ಇದೆ. ಆದಾಗ್ಯೂ ಈ ಜನರು ನಿತ್ಯ  ಕಿರುಕುಳ ನೀಡುತ್ತಿದ್ದಾರೆ” ಎಂದು ಅನಿತಾ ದೊಡಮನಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಶೇ. 30ರಷ್ಟು ಸಿಬ್ಬಂದಿ ವಜಾಗೊಳಿಸಿದ ಸಿನಾಪ್ಸಿಕಾ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button