Latest

ಶಾಲೆಗಳಿಗೆ ಸುತ್ತೋಲೆ ವಿಚಾರ; ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿ; ಮೈಸೂರು; ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ 100 ರೂಪಾಯಿ ಸಂಗ್ರಹ ವಿಚಾರವಾಗಿ ಮಾತನಾಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸುತ್ತೋಲೆಗೂ ಶಿಕ್ಷಣ ಸಚಿವರಿಗೂ, ಸಿಎಂಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುತ್ತೋಲೆ ಸರಿಯಾಗಿ ಓದದೇ ಕೆಲವರು ಪ್ರತಿಕ್ರಿಯಿಸಿದ್ದಾರೆ. ಎಸ್ ಡಿಎಂ ಸಿಗಳ ಸಲಹೆ ಮೇರೆಗೆ ಸುತ್ತೋಲೆ ಹೊರಡಿಸಲಾಗಿದೆ. ಸುತ್ತೋಲೆಯನ್ನು ಸರ್ಕಾರದ ಗಮನಕ್ಕೆ ತಂದು ಹೊರಡಿಸಬೇಕಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಎಸ್ ಡಿಎಂಸಿ ಸಲಹೆಯಂತೆ ಹೊರಡಿಸಿದ್ದಾರೆ ಎಂದರು.

ಪೋಷಕರು ಕಡ್ಡಾಯವಾಗಿ ಹಣ ಕೊಡಬೇಕು ಎಂದು ಹೇಳಿಲ್ಲ. ಅವರಾಗಿಯೇ ತಿಂಗಳಿಗೆ 100 ರೂಪಾಯಿ ಕೊಟ್ಟರೆ ರಶೀದಿ ಕೊಡಬೇಕು ಎಂದು ಹೇಳಿದರು. ಆರ್ ಟಿಇ ಕಾಯ್ದೆ ಒಳ್ಳೆಯ ಕಾಯ್ದೆ. ಸಿದ್ದರಾಮಯ್ಯನವರೇ ಜಾರಿಗೆ ತಂದಿದ್ದು. ಈಗ ಇದರಲ್ಲಿಯೂ ಅವರು ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಸರ್ಕಾರಿ ಶಾಲೆಗಳಿಂದ ಪ್ರತಿ ತಿಂಗಳು 100 ರೂಪಾಯಿ ದೇಣಿಗೆ; ಆಕ್ರೋಶಕ್ಕೆ ಕಾರಣವಾಯ್ತು ಶಿಕ್ಷಣ ಇಲಾಖೆ ಸುತ್ತೋಲೆ

https://pragati.taskdun.com/latest/100rs-per-monthparentsgovt-schooleducation-department-circuler/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button