ಪ್ರಗತಿವಾಹಿನಿ ಸುದ್ದಿ; ಅಥಣಿ: ಅಥಣಿ ತಾಲೂಕಿನ ಬೇವನೂರ ಗ್ರಾಮದಲ್ಲಿ ವೃದ್ಧೆಯೊಬ್ಬರನ್ನು ಕೊಲೆ ಮಾಡಿ ಬಂಗಾರದ ಸರ ದೋಚಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೇವನೂರಿನವನೇ ಆದ ಸಂಘರ್ಷ ಕುಶಾಬ ಕಾಂಬಳೆ ಬಂಧಿತ ಆರೋಪಿ. ಆರೋಪಿಯನ್ನು ಅಥಣಿ ಜೆಎಂಎಫ್‌ಸಿ ನ್ಯಾಯಾಲಯದ ಮುಂಜೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಬೇವನೂರ ಗ್ರಾಮದಲ್ಲಿ ಮನೆ ಮಾಡಿಕೊಂಡು ಒಬ್ಬರೇ ವಾಸ ಮಾಡುತ್ತಿದ್ದ ಪುಲಾಬಾಯಿ ಲಕ್ಷ್ಮಣ ಯಮಗಾರ (65) ಎಂಬ ವೃದ್ದೆಯನ್ನು ಅ.20 ರಂದು ಅವರ ಮನೆಯಲ್ಲೇ ಕೊಲೆ ಮಾಡಲಾಗಿತ್ತು. ಈ ಬಗ್ಗೆ ವೃದ್ಧೆಯ ಮಲಮಗ ಪರಮೇಶ್ವರ ಲಕ್ಷ್ಮಣ ಯಮಗಾರ ಅಥಣಿ ಠಾಣೆಗೆ ದೂರು ನೀಡಿದ್ದು, ಸಂಘರ್ಷ ಕಾಂಬಳೆ ಮೇಲೆ ಸಂಶಯ ವ್ಯಕ್ತಪಡಿಸಿದ್ದರು.
ಬೆಳಗಾವಿ ಎಸ್‌ಪಿ ಡಾ. ಸಂಜೀವ ಪಾಟೀಲ ಹಾಗೂ ಅಥಣಿ ಡಿವೈಎಸ್‌ಪಿ ಶ್ರೀಪಾದ ಬಲ್ಲೆ ಮಾರ್ಗದರ್ಶನದಲ್ಲಿ ಅಥಣಿ ಸಿಪಿಐ ರವೀಂದ್ರ ಕೆ ನಾಯ್ಕ ನೇತ್ರತ್ವದ ಪೊಲೀಸ್ ಅಧಿಕಾರಿಗಳ ತಂಡ ಸಂಘರ್ಷ ಕಾಂಬಳೆಯನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಯು ವೃದ್ಧೆ ಫುಲಾಬಾಯಿಯ ಉಸಿರುಗಟ್ಟಿಸಿ ಕೊಲೆ ಮಾಡಿ ಅವರ ಕೊರಳಲ್ಲಿಯ ಬಂಗಾರದ ಸರ ಕಿತ್ತುಕೊಂಡು ಹೋದ ಬಗ್ಗೆ ಒಪ್ಪಿಕೊಂಡಿದ್ದಾನೆ. ಆರೋಪಿಯು ತನಿಖೆ ಸಂದರ್ಭದಲ್ಲಿ ಆಭರಣವನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ.
ಈ ಪ್ರಕರಣವನ್ನು ಬೆಳಕಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರನ್ನ ಬೆಳಗಾವಿ ಎಸ್‌ಪಿ ಶ್ಲಾಘಿಸಿದ್ದು, ನಗದು ಬಹುಮಾನ ಘೋಷಿಸಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ವಿದ್ಯುತ್ ಕಡಿತಕ್ಕೆ ಬಂದ ಎಂಜಿನಿಯರ್‌ಗೆ ಥಳಿಸಿದ ಗ್ರಾಮಸ್ಥರು
https://pragati.taskdun.com/latest/villagersbeatelectricity-engineer/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ