Kannada NewsLatest

ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ; ನಿಮ್ಮ ಹೆಸರು ಗೌಪ್ಯವಾಗಿರಲಿದೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಮಾಯಕರ ಜೀವಕ್ಕೆ ಎರವಾಗುತ್ತಿರುವ ಗಾಳಿಪಟಗಳ ಮಾಂಝಾ ಬಳಕೆಗೆ ಕಡಿವಾಣ ಹಾಕಲು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಅಪಾಯಕಾರಿ ಗಾಳಿಪಟ ಎಳೆಗಳ ಮಾರಾಟ ಅಥವಾ ಬಳಕೆಯ ಮಾಹಿತಿಯನ್ನು 9480804000 ನಲ್ಲಿ ಹಂಚಿಕೊಳ್ಳಲು ನಾಗರಿಕರನ್ನು ಕೋರಿದ್ದಾರೆ.

ಈ ಕುರಿತು ಮಾಹಿತಿ ನೀಡಿದವರಿಗೆ ಸೂಕ್ತವಾಗಿ ಬಹುಮಾನ ನೀಡಲಾಗುವುದಲ್ಲದೆ ಮಾಹಿತಿ ನೀಡಿದವರ ಗುರುತನ್ನು ರಹಸ್ಯವಾಗಿ ಇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಅಪಾಯಕಾರಿ ಎಳೆಗಳ ಬಳಕೆ ಮತ್ತು ಮಾರಾಟಕ್ಕೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಹ ಅವರು ತಿಳಿಸಿದ್ದಾರೆ.

ಬೆಳಗಾವಿ ನಗರದಲ್ಲಿ ದೀಪಾವಳಿಗೆ ಬಟ್ಟೆ ಖರೀದಿಸಿ ತಂದೆಯ ಬೈಕ್ ನಲ್ಲಿ ಮರಳುತ್ತಿದ್ದ ಬಾಲಕನ ಸಾವಿನ ಪ್ರಕರಣದ ನಂತರ ಈ ಬೆಳವಣಿಗೆಯಾಗಿದೆ.

ದೇಗುಲ ಉದ್ಘಾಟನಾ ಮೆರವಣಿಗೆಯಲ್ಲಿ ಕಲಶ ಹೊತ್ತು ಸಾಗಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button