Kannada NewsLatest

ಬಾಲ ಮುದುಡಿಕೊಂಡು ವಾಪಸ್ ಆದ ಶಿವಸೇನೆ ಪುಂಡರು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕನ್ನಡ ಹಬ್ಬಕ್ಕೆ ಕಲ್ಲು ಹಾಕಲೆಂದು ಬೆಳಗಾವಿ ಗಡಿ ಭಾಗಕ್ಕೆ ನುಗ್ಗಿದ ಕೊಲ್ಲಾಪುರದ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಹಾಗೂ ಕಾರ್ಯಕರ್ತರನ್ನು ಬೆಳಗಾವಿ ಪೊಲೀಸರು ಮಾರ್ಗ ಮಧ್ಯೆಯೇ ತಡೆದಿದ್ದು, ಶಿವಸೇನೆ ಯತ್ನವನ್ನು ವಿಫಲಗೊಳಿಸಿದ್ದಾರೆ.

ಬೆಳಗಾವಿಯ ನಿಪ್ಪಾಣಿ, ಖಾನಾಪುರ, ಬೀದರ್, ಭಾಲ್ಕಿ ಸೇರಿದಂತೆ ಗಡಿ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಬೆಳಗಾವಿಗೆ ನುಗ್ಗಿ ಪುಂಡಾಟ ಮೆರೆಯಲು ಶಿವಸೇನೆ ಠಾಕ್ರೆ ಬಣ ಮುಂದಾಗಿತ್ತು. ಬೆಳಗಾವಿ ಗಡಿ ಭಾಗಕ್ಕೆ ವಿಜಯ್ ದೇವಣೆ ನೇತೃತ್ವದಲ್ಲಿ ಮೆರವಣಿಗೆ ಮೂಲಕ ನುಗ್ಗಲು ಯತ್ನಿಸಿದ್ದರು.

ಶಿವಸೇನೆ ಕಾರ್ಯಕರ್ತರ ಮೆರವಣಿಗೆಯನ್ನು ಮಾರ್ಗ ಮಧ್ಯೆಯೇ ಪೊಲೀಸರು ತಡೆದಿದ್ದು, ಬೆಳಗಾವಿಗೆ ಆಗಮಿಸಲು ಅವಕಾಶ ನೀಡಿಲ್ಲ. ಇದರಿಂದ ಶಿವಸೇನೆ ಕಾರ್ಯಕರ್ತರು ಬಂದದಾರಿಯಲ್ಲೇ ವಾಪಸ್ ಆಗಿದ್ದಾರೆ.

Home add -Advt

ಪುನೀತ್ ಗೆ ಕರ್ನಾಟಕ ರತ್ನ ಪ್ರಶಸ್ತಿ ; ಭಾವುಕರಾಗಿ ಪ್ರಶಸ್ತಿ ಸ್ವೀಕರಿಸಿದ ಪತ್ನಿ

https://pragati.taskdun.com/latest/puneeth-raj-kumarkarnataka-ratna-awardvidhanasoudha/

Related Articles

Back to top button