ಪ್ರಗತಿ ವಾಹಿನಿ ಸುದ್ದಿ, ದಾಂಡೇಲಿ: ದಾಂಡೇಲಿಯಲ್ಲಿ ಮೊಸಳೆ ಹಾವಳಿ ಮತ್ತೆ ಮುಂದುವರೆದಿದ್ದು ಕಾಳಿ ನದಿಯಲ್ಲಿ ಈಜಲು ತೆರಳಿದ್ದ ವ್ಯಕ್ತಿಯೊಬ್ಬರು ಮೊಸಳೆಗೆ ಬಲಿಯಾಗಿದ್ದಾರೆ.
ಗುಜರಾತ್ ಮೂಲದ, ಹಾಲಿ ದಾಂಡೇಲಿ ನಿವಾಸಿ ಪೀತಾಂಬರಿ ದಾಸ್ ಎಂಬುವವರು ದಾಂಡೇಲಿ – ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಬಳಿ ಕಾಳಿ ನದಿಯ ದಂಡೆಯ ಮೇಲೆ ಬಟ್ಟೆ ಮತ್ತು ಚಪ್ಪಲಿ ಕಳಚಿಟ್ಟು ಈಜಲು ತೆರಳಿದ್ದರು. ಈ ವೇಳೆ 2 ಮೊಸಳೆಗಳು ದಾಳಿ ನಡೆಸಿ ಪೀತಾಂಬರಿ ದಾಸ್ ಅವರನ್ನು ಹೊತ್ತೊಯ್ದಿವೆ.
ಸ್ಥಳೀಯರು ನೋಡುತ್ತಿದ್ದಂತೆಯೇ ಅವಘಡ ನಡೆದಿದೆ. ಕೂಡಲೇ ಜನರು ಪೊಲೀಸ್ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪೀತಾಂಬರಿ ದಾಸ್ ಅವರಿಗಾಗಿ ಹುಡುಕಾಟ ನಡೆದಿದೆ.
ಸಹ್ಯಾದ್ರಿನಗರಕ್ಕೆ ಬೀದಿದೀಪ ವ್ಯವಸ್ಥೆ: ಕ್ಷಿಪ್ರ ಸ್ಪಂದಿಸಿ ಸಮಸ್ಯೆ ಬಗೆಹರಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ