ಪ್ರಗತಿವಾಹಿನಿ ಸುದ್ದಿ; ಬೆಂಗಳೂರು : ಕರ್ನಾಟಕದಲ್ಲಿ ಏರ್ ಬಸ್ ಉತ್ಪಾದನಾ ಘಟಕವನ್ನು ಸ್ಥಾಪಿಸುವಂತೆ ಫ್ರೆಂಚ್ ಏರೊಸ್ಪೇಸ್ ಕಂಪನಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಹ್ವಾನಿಸಿದರು.
ಅವರು ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಫ್ರೆಂಚ್ – ಇಂಡೋ ಚೇಂಬರ್ ಆಫ್ ಕಾಮರ್ಸ್ ಉದ್ಘಾಟಿಸಿ ಮಾತನಾಡಿದರು.
ಫ್ರೆಂಚ್ ಏರೊಸ್ಪೇಸ್ ಕಂಪನಿಗಳು ಕರ್ನಾಟಕದಲ್ಲಿವೆ. ಏರ್ ಬಸ್ ನಂತಹ ಸಂಸ್ಥೆಗಳು ಬೆಂಗಳೂರಿನಲ್ಲಿ ಘಟಕ ಸ್ಥಾಪಿಸಿ, ವಿಸ್ತರಣಾ ಕಾರ್ಯದಲ್ಲಿ ತೊಡಗಿದ್ದಾರೆ. ಕರ್ನಾಟಕ ಏರೊಸ್ಪೇಸ್ ವಲಯದಲ್ಲಿ ದೊಡ್ಡ ಮಟ್ಟದ ಉತ್ಪಾದನಾ ಘಟಕ ಹೊಂದಿದೆ. ವಿಮಾನದ ಭಾಗಗಳ ಉತ್ಪಾದನೆ ರಾಜ್ಯದಲ್ಲಾಗುತ್ತವೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ವಿಮಾನವನ್ನು ಉತ್ಪಾದಿಸುವ ಗುರಿ ಕರ್ನಾಟಕ ಹೊಂದಿದೆ. ಈ ಕ್ಷೇತ್ರದಲ್ಲಿ ಪ್ರಸ್ತುತ ಏರ್ ಬಸ್ ಹಾಗೂ ಬೋಯಿಂಗ್ ಸಂಸ್ಥೆ ಇದೆ. ಏರ್ ಬಸ್ ಕರ್ನಾಟಕದಲ್ಲಿ ಸ್ಥಾಪಿಸಲು ಆಹ್ವಾನ ನೀಡಿದರು.
ನಾವು ಮಾರುಕಟ್ಟೆ ಗೆ ಹತ್ತಿರವಾಗಬೇಕು :
ಫ್ರಾನ್ಸ್ ಮತ್ತು ಇಂಡಿಯಾ ನಡುವೆ ಬಹಳ ಹಳೆಯ ಸಂಬಂಧ ಇದೆ. ಪಾಂಡಿಚರಿಯಲ್ಲಿ ಈಗಲೂ ಫ್ರೆಂಚ್ ಭಾಷೆ ಜಾರಿಯಲ್ಲಿದೆ. ಪಾಂಡಿಚರಿಯಲ್ಲಿರುವ ಅರವಿಂದೊ ಆಶ್ರಮಕ್ಕೆ ಫ್ತಾನ್ಸ್ ಪ್ರಜೆಗಳು ಆಗಮಿಸುತ್ತಾರೆ.ಜಾಗತೀಕರಣದ ಪರಿಣಾಮ ದೇಶಗಳು ಹೊಸ ಮಾರುಕಟ್ಟೆ ಹುಡುಕುತ್ತವೆ. ಅಂತಿಮವಾಗಿ ನಾವು ಮಾರುಕಟ್ಟೆ ಗೆ ಹತ್ತಿರವಾಗಬೇಕು ಎಂದರು.
ಭಾರತ ಅತಿ ದೊಡ್ಡ ಉತ್ಪಾದನಾ ದೇಶ :
ಭಾರತ ದೊಡ್ಡ ಪ್ರಮಾಣದ ಜನಸಂಖ್ಯೆ ಹಾಗೂ ಆಧುನಿಕ ತಂತ್ರಜ್ಞಾನ ಹೊಂದಿರುವ ದೇಶ. ಭಾರತ ಅತಿ ದೊಡ್ಡ ಉತ್ಪಾದನಾ ದೇಶ, ಅದಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ಅವಕಾಶವಿದೆ. ಜನರು ಇಲ್ಲಿ ಕೌಶಲ್ಯ,ತಂತ್ರಜ್ಞಾನ, ಮಾರುಕಟ್ಟೆ ಅವಕಾಶಗಳನ್ನು ಹುಡುಕಿಕೊಂಡು ಬರುತ್ತಾರೆ. ಭಾರತ ಮುಂದಿನ ಭವಿಷ್ಯ. ನಮ್ಮ ನಾಯಕರಾದ ನರೇಂದ್ರಮೋದಿಯವರ ನಾಯಕತ್ವದಡಿ ಎಲ್ಲ ರಂಗಗಳಲ್ಲಿಯೂ ಭಾರತ ಅಭಿವೃದ್ಧಿ ಹೊಂದುತ್ತಿದೆ. ಪಾಶ್ಚಿಮಾತ್ಯ ದೇಶಗಳು ಬೆಲೆಏರಿಕೆ ಮತ್ತು ಆರ್ಥಿಕ ಹಿಂಜರಿಕೆಯಿಂದ ಬಳಲುತ್ತಿವೆ.ಆದ್ದರಿಂದ ಇಂತಹ ದೇಶಗಳು ಬಲಿಷ್ಠ ಆರ್ಥಿಕತೆ ಹಾಗೂ ಬಲಿಷ್ಠ ಮಾರುಕಟ್ಟೆಯಿರುವ ದೇಶಗಳನ್ನು ಅರಸುತ್ತವೆ ಎಂದರು.
ಹೆಚ್ಚು ಜನಸಂಖ್ಯೆಯಿರುವ ಭಾರತ ಬಲಿಷ್ಟ ಮಾರುಕಟ್ಟೆ ಹೊಂದಿದೆ :
ನಾವು ಬಲಿಷ್ಟ ಮಾರುಕಟ್ಟೆ ಹೊಂದಿದ್ದೇವೆ. ಕೊವಿಡ್ ಸಂದರ್ಭದಲ್ಲಿ ಯೂ ಭಾರತ ಶೇ 7-8% ಜಿಡಿಪಿ ಸಾಧನೆ ಮಾಡಿದ್ದೇವೆ. ಇದು ಭಾರತದ ಶಕ್ತಿಯನ್ನು ತೋರಿಸುತ್ತದೆ. ಇಲ್ಲಿ ಜನಸಂಖ್ಯೆಯನ್ನೇ ಲಾಭವಾಗಿಸಿಕೊಳ್ಳಬಹುದು. ಜನಸಂಖ್ಯೆಯ ಪರಿಣಾಮ ಉತ್ಪಾದನೆಯೂ ಹೆಚ್ಚಾಗುತ್ತಿದೆ. ವಿಸ್ತರಣೆ ಸಣ್ಣ ಪದ, ಮೇಲ್ದರ್ಜೆಗೇರಿಸಿ ಎತ್ತರಕ್ಕೆ ಒಯ್ಯುತ್ತಿದ್ದೇವೆ ಎನ್ನುವುದು ಸರಿಯಾದ ಪದ. ಈ ನಿಟ್ಟಿನಲ್ಲಿ ಭಾರತ ಮತ್ತು ಫ್ರಾನ್ಸ್ ದೇಶದ ಉತ್ತಮ ಸಂಬಂಧ ಅತ್ಯಂತ ಸಮಯೋಚಿತವಾಗಿದೆ ಎಂದರು.
ಭಾರತದ ಆರ್ಥಿಕತೆಯ ಬೆಳವಣಿಗೆಯಲ್ಲಿ ಭಾಗಿದಾರರಾಗಿ :
ಭಾರತ ಮತ್ತು ಫ್ರಾನ್ಸ್ ಪರಸ್ಪರ ಸಹಕಾರದಿಂದ ಅಭಿವೃದ್ಧಿ ಹೊಂದಬಹುದು. ಭಾರತ ಅತ್ಯಂತ ಪ್ರಗತಿಶೀಲ ದೇಶವಾಗಿದ್ದು, ಐಟಿಬಿಟಿ, ಏರೋಸ್ಪೇಸ್,ಇವಿ, ನವೀಕರಿಸಬಹುದಾದ ಇಂಧನ ಸೇರಿದಂತೆ ವಿವಿಧ ರಂಗದಲ್ಲಿ ದೇಶ ಮುಂಚೂಣಿಯಲ್ಲಿದೆ.ಭಾರತಕ್ಕೆ ಬಂದು ಉದ್ಯಮ ಸ್ಥಾಪಿಸಿ, ಭಾರತದ ಆರ್ಥಿಕತೆಯ ಬೆಳವಣಿಗೆಯಲ್ಲಿ ಭಾಗಿದಾರರಾಗಿ ಎಂದು ಬಂಡವಾಳ ಹೂಡಿಕೆದಾರರಿಗೆ ಮುಖ್ಯಮಂತ್ರಿಗಳು ಕರೆ ನೀಡಿದರು. ಭಾರತ ಹಾಗೂ ಕರ್ನಾಟಕ ಬಂಡವಾಳ ಹೂಡಿಕೆಗೆ ಅತ್ಯಂತ ಪ್ರಾಶಸ್ತ್ಯ ಸ್ಥಳವಾಗಿದ್ದು, ಇಲ್ಲಿನ ಅಭಿವೃದ್ಧಿ, ಯಶಸ್ಸು, ತಂತ್ರಜ್ಞಾನ ಹಾಗೂ ಮಾರುಕಟ್ಟೆಯ ಪಾಲುದಾರರಾಗಲು ಸಂಸ್ಥೆಗಳಿಗೆ ಆಹ್ವಾನ ನೀಡಿದರು. ಅದಕ್ಕೆ ನಾವು ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಭಾರತದಲ್ಲಿರುವ ಫ್ರಾನ್ಸ್ ರಾಯಭಾರಿ ಎಮೆನುಲಾ, ಸಚಿವ ಮುರುಗೇಶ ನಿರಾಣಿ ಹಾಜರಿದ್ದರು.
ಬೆಳಗಾವಿಯಿಂದ ಮತ್ತಿಬ್ಬರು ಆರೋಪಿಗಳ ಗಡಿಪಾರು
https://pragati.taskdun.com/latest/belagavitwo-accuseddeportation/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ