Kannada NewsKarnataka NewsLatest

ತೆಂಡೂಲ್ಕರ್ ಲುಕ್; ತಿರುಗಿತು ಬೆಳಗಾವಿ ಚಾಯ್ ವಾಲಾನ ಲಕ್! (ವಿಡೀಯೋ ಸಹಿತ ಸುದ್ದಿ)

 

 

 

 

 

 

 

 

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ – ಅದೃಷ್ಟ ಒಮ್ಮೊಮ್ಮೆ ಹೇಗೆ ಬರುತ್ತದೆ ತಿಳಿಯುವುದೇ ಇಲ್ಲ. ಬಿಕ್ಷುಕನೊಬ್ಬ ಕ್ಷಣ ಮಾತ್ರದಲ್ಲಿ ಕೊಟ್ಯಧೀಶನಾಗುವುದೂ ಇದೆ,  ಜೀರೋದಿಂದ ಬಿಸಿನೆಸ್ ಆರಂಭಿಸಿದವ ಕೆಲವೇ ವರ್ಷದಲ್ಲಿ ಕೋಟಿ ಕೋಟಿ ಆಸ್ತಿಗಳ ಒಡೆಯನಾಗುವುದೂ ಇದೆ.

ಬೆಳಗಾವಿಯ ರಸ್ತೆ ಬದಿಯ ಚಾಯ್ ವಾಲಾನ ಲಕ್ ಇದ್ದಕ್ಕಿದ್ದಂತೆ ತಿರುಗಿದ ಕಥೆ ರೋಮಾಂಚಕಾರಿಯಾಗಿದೆ. ಅಕ್ಟೋಬರ್ 31ರ ಬೆಳ್ಳಂಬೆಳಗ್ಗೆ ಬಡ ಚಾಯ್ ವಾಲಾನ ಅದೃಷ್ಟ ಬದಲಾಗಿಬಿಟ್ಟಿದೆ. ಇದಕ್ಕೆ ಕಾರಣ ಕ್ರಿಕೆಟ್ ದೇವರು ಎಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಇದ್ದಕ್ಕಿದ್ದಂತೆ ಕುಟುಂಬ ಸಮೇತ ಈ ಟಿ ಸ್ಟಾಲ್ ನಲ್ಲಿ ಪ್ರತ್ಯಕ್ಷರಾಗಿದ್ದು.

ಈ ಕಥೆ ಓದಿ….

ಕ್ರಿಕೇಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಭೇಟಿ ನೀಡಿದ ಬೆಳಗಾವಿ ತಾಲೂಕು ಮಚ್ಚೆ ಗ್ರಾಮದ ಸಣ್ಣ ಚಹಾ ಅಂಗಡಿ ಈಗ ವಿಶ್ವ ಪ್ರಸಿದ್ಧವಾಗಿದೆ. ಇನ್ನೊಂದೆಡೆ ತೆಂಡೂಲ್ಕರ್ ಭೇಟಿಯ ಬಳಿಕ ಈ ಅಂಗಡಿ ಮಾಲಿಕನ ಅದೃಷ್ಟವೂ ಖುಲಾಯಿಸಿದ್ದು, ಎರಡೇ ದಿನದಲ್ಲಿ ಮೊದಲಿಗಿಂತ ಡಬ್ಬಲ್ ವ್ಯಾಪಾರವಾಗುತ್ತಿದೆ.

ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಸಚಿನ್ ಅಕ್ಟೋಬರ್ 31ರಂದು ಬೆಳ್ಳಂಬೆಳಗ್ಗೆ ಬೆಳಗಾವಿ ಸಮೀಪದ ಮಚ್ಚೆ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಫೌಜಿ ಎಂಬ ಸಣ್ಣ ಚಹಾ ಅಂಗಡಿ ಎದುರು ಕಾರು ನಿಲ್ಲಿಸಿ ಚಹಾ ಸೇವಿಸಿದ್ದರು. ಅಂಗಡಿಯ ಚಹಾ ರುಚಿಕರವಾಗಿದೆ ಎಂದು ಸಚಿನ್ ಪ್ರಶಂಸೆ ವ್ಯಕ್ತಪಡಿಸಿದ್ದರು.

ಸಚಿನ್ ಬಂದು ಹೋದ ಬಳಿಕ ಅಂಗಡಿಯಲ್ಲಿ ವ್ಯಾಪಾರ ಏಕಾಏಕಿ ಹೆಚ್ಚಳವಾಗಿದೆ. ಮೊದಲು ಪ್ರತಿ ದಿನ ಸುಮಾರು ೨೫-೨೬ ಲೀ. ಹಾಲಿನ ಬಳಕೆ ಮಾಡಿ ೩೦೦-೪೦೦ ಕಪ್ ಚಹಾ ಮಾರಾಟ ಮಾಡುತ್ತಿದ್ದೆ. ಈಗ ೫೫೦-೬೫೦ ಕಪ್ ಚಹಾ ಮಾರಾಟವಾಗುತ್ತಿದೆ ಎಂದು ಫೌಜಿ ಚಹಾ ಅಂಗಡಿಯ ಮಾಲಿಕ ವೈಜು ಖುಷಿ ಹಂಚಿಕೊಳ್ಳುತ್ತಾರೆ.

ಕುಟುಂಬ ಸಮೇತ ಬಂದಿದ್ದ ಸಚಿನ್

ಅಂದು ಬೆಳಗ್ಗೆ ಅಂಗಡಿಯಲ್ಲಿ ನನ್ನ ಪಾಡಿಗೆ ನಾನು ಕೆಲಸ ಮಾಡುತ್ತಿದ್ದೆ. ಒಂದು ಕಾರ್ ಬಂದು ನಿಂತಿತು, ಅದರಿಂದ ಕೆಳಗಿಳಿದು ಅಂಗಡಿಗೆ ಬಂದ ವ್ಯಕ್ತಿಯೊಬ್ಬ ಒಳಗೆ ಕಾರಿನಲ್ಲಿ ಸಚಿನ್ ತೆಂಡೂಲ್ಕರ್ ಇದ್ದಾರೆ ಎಂದಾಗ ನಂಬಲು ಸಾಧ್ಯವಾಗಿರಲಿಲ್ಲ, ಬಳಿಕ ಸಚಿನ್ ಅವರೇ ಕೆಳಗಿಳಿದು ಬಂದಾಗ ದಂಗಾಗಿದ್ದೆ ಎಂದು ವೈಜು ಹೇಳಿದರು. ಸಚಿನ್ ತೆಂಡೂಲ್ಕರ್ ಜತೆಗೆ ಅವರ ತಾಯಿ, ಪತ್ನಿ, ಪುತ್ರ ಮತ್ತು ಕೆಲ ಸಹಾಯಕರು ಸಹ ಬಂದಿದ್ದರು ಎಂದು ವೈಜು ಹೇಳಿದರು.

ಸಚಿನ್ ಅವರು ತಮ್ಮ ಸಹಾಯಕನೊಬ್ಬನ ಕೈಯ್ಯಿಂದ ತಾನು ಅಂಗಡಿಯಲ್ಲಿ ಚಹಾ ಸೇವಿಸುತ್ತಿರುವುದನ್ನು ಸಂಪೂರ್ಣ ವಿಡಿಯೋ ಮಾಡಿಸಿದ್ದರು. ಬಳಿಕ ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಿಂದ ವಿಶ್ವದೆಲ್ಲೆಡೆ ಜನ ನನ್ನ ಅಂಗಡಿಯನ್ನು ಗುರುತಿಸುವಂತಾಗಿದೆ ಎಂದು ಅವರು ಸಂತಸಪಟ್ಟರು.

ಫೌಜಿ ಚಹಾ ಅಂಗಡಿಯಲ್ಲಿ ಚಹಾ ತಯಾರಿಕೆಗೆ  ಹಿತ್ತಾಳೆ ಮತ್ತು ತಾಮ್ರದ ಪಾತ್ರೆಯನ್ನು ಮಾತ್ರ ಬಳಸಲಾಗುತ್ತದೆ. ಇದನ್ನು ಸಚಿನ್ ಮೆಚ್ಚಿದರು. ಅಲ್ಲದೇ ಚಹಾದ ಸ್ವಾದ ಹಿಡಿಸಿದ ಕಾರಣ ಎರಡು ಕಪ್ ಚಹಾ ಕುಡಿದರು ಎಂದು ವೈಜು ಹೇಳಿದರು.

ಮೂಲತಃ ಖಾನಾಪುರ ತಾಲೂಕಿನವರಾದ ವೈಜು ನಿಟ್ಟೂರಕರ್ ಅವರಿಗೆ ತಾಯಿ ಮತ್ತು ಓರ್ವ ಸಹೋದರ ಇದ್ದಾರೆ. ಸಣ್ಣ ಜಮೀನಿದ್ದು ಕೃಷಿಯ ಆದಾಯ ಜೀವನ ನಿರ್ವಹಣೆಗೆ ಸಾಕಾಗದ ಕಾರಣ ಸುಮಾರು ೭-೮ ತಿಂಗಳ ಹಿಂದೆ ಮಚ್ಚೆಯಲ್ಲಿ ಫೌಜಿ ಟೀ ಸ್ಟಾಲ್ ಪ್ರಾರಂಭಿಸಿದ್ದಾರೆ. ವ್ಯಾಪಾರ ಶುರು ಮಾಡಿದ ಎಂಟೇ ತಿಂಗಳಲ್ಲಿ ಸಚಿನ್ ತೆಂಡೂಲ್ಕರ್ ಅಂಥಹ ಮಹಾನ್ ವ್ಯಕ್ತಿ ನನ್ನ ಅಂಗಡಿಗೆ ಬರುತ್ತಾರೆ ಎಂದು ಕನಸಲ್ಲೂ ಎಣಿಸಿರಲಿಲ್ಲ ಎಂದು ವೈಜು ತಮ್ಮ ಸಂತಸ ಹಂಚಿಕೊಂಡರು.

https://www.instagram.com/reel/CkcnI23gzSM/?utm_source=ig_embed&ig_rid=41b9618e-2b8d-4cca-bd7e-1d47f4deea5d

ಬೆಳಗಾವಿಗೆ ಬಂದು ಚಹಾ ಕುಡಿದು ಹೋದ ಸಚಿನ್ ತಂಡೂಲ್ಕರ್

https://pragati.taskdun.com/latest/sachin-tendulkarbelagavitea-stalvisit/

https://pragati.taskdun.com/latest/sachin-tendulkarcorona-positivehospitalised/

https://pragati.taskdun.com/bs-sport/sachin-tendulkerrequestremain-vigilantmisleading-imageson-social-media/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button